ನ್ಯೂಸ್

ಸಾಲದ ಬಾಧೆ ತಾಳದೆ ರುದ್ನೂರ ರೈತ ಆತ್ಮಹತ್ಯೆ


ಕಲಬುರಗಿ : ಕೃಷಿ ಚಟುವಟಿಕೆಗಳಿಗೆ ಮಾಡಿದ ಸಾಲವನ್ನು ತೀರಿಸಲಾಗದೆ ಹತಾಶೆಗೊಂಡು ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಂಚೋಳಿ ತಾಲೂಕಿನ ರುದ್ನೂರ ಗ್ರಾಮದಲ್ಲಿ ನಡೆದಿದೆ.
ವಿಶ್ವನಾಥ (ಈಶಣ್ಣ) ವೀರಶೆಟ್ಟಿ (೫೭) ಎಂಬುವರೆ ಆತ್ಮಹತ್ಯೆ ಮಾಡಿಕೊಂಡ ರೈತ. ಕೃಷಿ ಕಾರ್ಯಗಳಿಗಾಗಿ ವಿಎಸ್‌ಎಸ್‌ಎನ್ ಹಾಗೂ ಬ್ಯಾಂಕ್‌ನಿAದ ಸೇರಿದಂತೆ ಖಾಸಗಿಯಾಗಿ ೮ ಲಕ್ಷ ರೂ.ಸಾಲ ಮಾಡಿಕೊಂಡಿದ್ದರು. ಕಳೆದ ಸಲ ತೊಗರಿ ನೆಟೆ ಹೋಗಿದ್ದರಿಂದ ನಷ್ಟವಾಗಿತ್ತು. ಇದರಿಂದಾಗಿ ಬೇಸತ್ತು ವಿಷ ಸೇವಿಸಿದ್ದಾರೆ.
ತೀವ್ರ  ಅಸ್ವಸ್ಥಗೊಂಡಿದ್ದ ವೀರಶೆಟ್ಟಿ ಅವರನ್ನು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಕೊನೆಯುಸಿರೆಳೆದರು. ಸುಲೇಪೇಟ ಠಾಣೆಯಲ್ಲಿ ದೂರು ದಾಖಲಾಗಿದೆ.