ವಿಜಯವಾಣಿ ಸುದ್ದಿಜಾಲ ಕೋಲಾರ
ಸಾಲ ಮರುಪಾವತಿ ಮಾಡಿಕೊಂಡು ಸಾಲ ವಿತರಣೆ ಮಾಡದೆ ಗ್ರಾಮೀಣ ಪ್ರದೇಶದ ರೈತ, ಕೂಲಿಕಾರ್ಮಿಕರ, ಸ್ತಿçÃಶಕ್ತಿ ಮಹಿಳೆಯರ ಜೊತೆ ಚೆಲ್ಲಾಟವಾಡುತ್ತಿರುವ ಡಿ.ಸಿ.ಸಿ ಬ್ಯಾಂಕ್ ವಿರುದ್ದ ಆ.೨೦ ರ ಬುಧವಾರ ಬ್ಯಾಂಕ್ ಮುಂದೆ ಬಾರ್‌ಕೋಲ್ ಚಳುವಳಿ ಮಾಡಲಾಗುವುದು ಎಂದು ರೈತ ಸಂಘ ಎಚ್ಚರಿಕೆ ನೀಡಿದೆ.
ಪ್ರಗತಿಪರ ರೈತ ಮಹಿಳೆ ಸುಶೀಲ ರವರ ತೋಟದಲ್ಲಿ ಭಾನುವಾರ ಕರೆಯಲಾಗಿದ್ದ ರೈತ ಸಂಘದ ಮಹಿಳಾ ಸಭೆಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಲಕ್ಷಾಂತರ ರೈತ ಕೂಲಿ ಕಾರ್ಮಿಕರು, ಮಹಿಳೆಯರು ಸ್ವಾಭಿಮಾನದ ಜೀವನ ನೀಡಿರುವ ಡಿ.ಸಿ.ಸಿ ಬ್ಯಾಂಕ್ ದಿನೇ ದಿನೇ ರಾಜಕೀಯ ವ್ಯಕ್ತಿಗಳ ಸಾರ್ವಜನಿಕ ಹಗರಣಗಳ ಕೇಂದ್ರ ಬಿಂದುವಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವ ರಾಜಕೀಯ ವ್ಯಕ್ತಿಗಳೇ ಚುನಾವಣೆ ನಡೆದು ೩ ರಿಂದ ೪ ತಿಂಗಳೂ ಕಳೆದು ಹೋಗಿದ್ದರೂ ಕೆಲವು ನಿರ್ದೇಶಕರ ಆಯ್ಕೆಯ ಬಗ್ಗೆ ನ್ಯಾಯಾಲಯದಲ್ಲಿ ಇರುವುದರಿಂದ ಆಡಳಿತ ಮಂಡಳಿ ರಚನೆ ಮಾಡಲು ತಿರ್ಪೀಗಾಗಿ ಕಾಯುತ್ತಿರುವುದನ್ನೇ ಬಂಡವಾಳವಾಗಿಸಿಕೊAಡಿರುವ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಆಡಳಿತ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿನಾಕಾರಣ ರೈತರು, ಮಹಿಳೆಯರ ಮೇಲೆ ಒತ್ತಡ ಹಾಕಿ ಸಾಲ ಮರುಪಾವತಿಸುವಂತೆ ಮನೆ ಬಾಗಿಲಿಗೆ ಹೋಗುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಮುಂಗಾರು ಮಳೆಯ ಆರ್ಭಟಕ್ಕೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ಬೆಳೆ ತೇವಾಂಶ ಹೆಚ್ಚಾಗಿ ರೋಗಗಳಿಗೆ ತುತ್ತಾಗಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಫಸಲನ್ನು ಕೀಳದ ಪರಿಸ್ಥಿತಿಯಲ್ಲಿರುವ ರೈತರ ಮೇಲೆ ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿ ಮಾಡುವಂತೆ ಒತ್ತಡ ಹಾಕಿದರೆ ನಷ್ಟದಲ್ಲಿರುವ ರೈತರು ಸಾಲ ತೀರಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಸಾಲ ಪಡೆದಿರುವ ರೈತ ಮಹಿಳೆ ಶೈಲಜ ಮಾತನಾಡಿ, ಅಧಿಕಾರಕ್ಕೆ ಬರುವ ಮುಂಚೆ ವೇಮಗಲ್‌ನಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಸಹಕಾರ ಬ್ಯಾಂಕ್‌ಗಳಲ್ಲಿ ಮಹಿಳಾ ತಾಯಂದಿರು ಪಡೆದಿರುವ ಎಲ್ಲಾ ಸ್ತಿçà ಶಕ್ತಿ ಸಾಲಗಳನ್ನು ಮನ್ನಾ ಮಾಡುತ್ತೇವೆಂದು ಮಾತು ಕೊಟ್ಟು, ಅಧಿಕಾರಕ್ಕೆ ಬಂದ ಮಾನ್ಯ ಮುಖ್ಯಮಂತ್ರಿಗಳು ಮಾತು ತಪ್ಪಿದ್ದಾರೆ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಯೋಗ್ಯತೆ ಇಲ್ಲದ ಸರ್ಕಾರ ಬ್ಯಾಂಕ್ ಅದಿಕಾರಿಗಳ ಮುಖಾಂತರ ಸಾಲ ಮರುಪಾವತಿ ಮಾಡುವಂತೆ ನೋಟಿಸ್ ನೀಡಿ, ಮನೆ ಬಾಗಿಲಿಗಳಿಗೆ ಅಧಿಕಾರಿಗಳನ್ನು ಕಳುಹಿಸುತ್ತಿರುವ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
೧ ಲಕ್ಷದಿಂದ ೫ ಲಕ್ಷದವರೆಗೆ ರೈತರು ಪಡೆದಿರುವ ಕೃಷಿ ಸಾಲ, ಸ್ತಿçÃಶಕ್ತಿ ಸಂಘಗಳು ಪಡೆದಿರುವ ವೈಯಕ್ತಿಕ ಸಾಲವನ್ನು ವಸೂಲಿ ಮಾಡಲು ಮುಂದಾಗುತ್ತಿರುವ ಅಧಿಕಾರಿಗಳು, ೧೦ ಲಕ್ಷ ದಿಂದ ೨೫ ಕೋಟಿರವರೆಗೆ ಪಡೆದಿರುವ ಶ್ರೀಮಂತ ರಾಜಕೀಯ ವ್ಯಕ್ತಿಗಳ ಸಾಲವನ್ನು ವಸೂಲಿ ಮಾಡದೆ, ಕನಿಷ್ಠ ನೋಟಿಸ್‌ನ್ನು ನೀಡದೆ, ಶ್ರೀಮಂತರ ಪರ ನಿಂತು ಬಡವರನ್ನು ಶೋಷಣೆ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಬ್ಯಾಂಕ್ ನಮ್ಮ ಬಡವರ ಆಸ್ತಿ. ಅದನ್ನು ಉಳಿಸಿಕೊಳ್ಳುವ ಜವಬ್ದಾರಿ ನಮ್ಮ ಮೇಲಿದೆ. ಜೊತೆಗೆ ಪ್ರಮಾಣಿಕವಾಗಿ ಪ್ರತಿದಿನ ಕೂಲಿ ಮಾಡಿ ೫೦೦ ರೂ ಸಂಪಾದನೆ ಮಾಡಿ ನಿಯತ್ತಾಗಿ ಸಾಲವನ್ನು ಮರುಪಾವತಿ ಮಾಡಿದ್ದರೂ ಮತ್ತೆ ಏಕೆ ಸಾಲ ನೀಡಲು ತಿಂಗಳಾನುಗಟ್ಟಲೇ ಸತಾಯಿಸುತ್ತಿದ್ದೀರಾ ಎಂಬುದನ್ನು ಸಾರ್ವಜನಿಕವಾಗಿ ಉತ್ತರ ನೀಡಲು ಅಧಿಕಾರಿಗಳನ್ನು ಒತ್ತಾಯಿಸಿ, ಆ.೨೦ ರ ಬುಧವಾರ ಬ್ಯಾಂಕ್ ಮುಂದೆ ಬಾರ್‌ಕೋಲ್ ಚಳುವಳಿ ಮಾಡುವ ಮೂಲಕ ನ್ಯಾಯ ಪಡೆದುಕೊಳ್ಳುವ ಹೋರಾಟ ಮಾಡಲು ಸಭೆಯಲ್ಲಿ ತಿರ್ಮಾನಿಸಲಾಯಿತು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸAದ್ರ ತಿಮ್ಮಣ್ಣ, ಪುತ್ತೇರಿ ರಾಜು, ಗೀರೀಶ್, ರತ್ನಮ್ಮ, ಸುನಿತಾ, ರಾಧ, ಶೋಭ, ಸುಗುಣ, ಚೌಡಮ್ಮ, ಮುನಿಯಮ್ಮ, ವೆಂಕಟಮ್ಮ ಮುಂತಾದವರಿದ್ದರು.
ಚಿತ್ರ ೧೭ ಕೆ.ಎಲ್.ಆರ್. ೦೩ : ಸಾಲ ಮರುಪಾವತಿ ಮಾಡಿರುವವರಿಗೆ ಮತ್ತೆ ಸಾಲ ನೀಡುವಂತೆ ಒತ್ತಾಯಿಸಿ ಆ.೨೦ ರಂದು ಡಿ.ಸಿ.ಸಿ.ಬ್ಯಾಂಕ್ ಮುಂದೆ ಬಾರ್‌ಕೋಲ್ ಚಳುವಳಿ ಮಾಡಲು ರೈತ ಸಂಘ ಕರೆದಿದ್ದ ಸಭೆಯಲ್ಲಿ ತೀರ್ಮಾನಿಸಲಾಯಿತು.