ನ್ಯೂಸ್

ಸಾಲ ಬಾಧೆಯಿಂದ ರೈತ ಆತ್ಮಹತ್ಯೆ

ಅಜ್ಜಂಪುರ: ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದ ಕೃಷಿಕ ಜಿ.ಎಂ.ಸತೀಶ್ (48) ಸಾಲಬಾಧೆ ತಾಳಲಾರದೆ ಬುಧವಾರ ಹುಣಸೇಮರಕ್ಕೆ ಪಂಚೆಯಲ್ಲಿ ಕುತ್ತಿಗೆಗೆ ನೇಣು ಬಿಗಿದು ಮೃತಪಟ್ಟಿದ್ದಾರೆ.
ಈರುಳ್ಳಿ ಬೆಳೆಗಾಗಿ ಗಿರಿಯಾಪುರ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 1,30,000 ರೂ., ತಾಯಿ ಹೆಸರಿನಲ್ಲಿ 1 ಲಕ್ಷ ರೂ. ಜತೆಗೆ ಕೈ ಸಾಲ, ಧರ್ಮಸ್ಥಳ ಸ್ವ-ಸಹಾಯ ಸಂಘದಲ್ಲಿ ಸಾಲ ಮಾಡಿದ್ದರು. ಜಮೀನಿನಲ್ಲಿ ಈರುಳ್ಳಿ ಬೆಳೆ ಬಿತ್ತಿದ್ದು ಮಳೆ ಬಾರದೆ ಬೆಳೆ ಒಣಗಿ ಹೋಗಿದೆ. ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.