ನ್ಯೂಸ್

ಸಾರ್ವಜನಿಕರಿಗೆ ಆಮಿಷ ಒಡ್ಡಿ ಬ್ಯಾಂಕ್ ಖಾತೆಗಳನ್ನು ತೆರೆಸಿ ಹಣ ದೋಚುತ್ತಿದ್ದ ಮೂವರು ಅಂತರಾಜ್ಯ ವಂಚಕರ ಸೆರೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಸಾರ್ವಜನಿಕರಿಗೆ ಕಮೀಷನ್ ಆಸೆ ತೋರಿಸಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ಸೈಬರ್ ಅಪರಾಧಕ್ಕೆ ಬಳಕೆ ಮಾಡುತ್ತಿದ್ದ ಅಂತಾರಾಜ್ಯ ಆರೋಪಿಗಳನ್ನು ಕೋಲಾರದ ಸಿಇಎನ್ ಠಾಣೆ ಪೊಲೀಸರು ಮೂವರು ವಂಚಕರನ್ನು ಬಂಧಿಸಿದ್ದಾರೆ.

ಬAಧಿತರಾದ ಅವೀದ್ ಬಾಷಾ, ಕೊಮ್ಮಿರಿ ರಾಜ್‌ಕುಮಾರ್, ಕೋಡಾ ಸುರೇಶ್ ಅಲಿಯಾಸ್ ಅಖಿಲ್ ಶೇಖ್ ಎಂಬುವರು ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ಕೋಲಾರ ಜಿಲ್ಲೆ ಮತ್ತು ದೇಶದ ಇತರೆ ರಾಜ್ಯಗಳಲ್ಲಿ ಸಾರ್ವಜನಿಕರಿಗೆ ವಿವಿಧ ಆಮಿಷ ಒಡ್ಡಿ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ತೆರೆಸಿ ಸೈಬರ್ ವಂಚಕರೊAದಿಗೆ ಕೈಜೋಡಿಸಿ ಈ ಬ್ಯಾಂಕ್ ಖಾತೆಗಳನ್ನು ಸೈಬರ್ ಅಪರಾಧಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜೈಪುರ, ಕೊಲ್ಕತ್ತಾ, ರಾಜಸ್ತಾನ ಹಾಗೂ ಇತರೆ ಕಡೆಗೆ ಇಲ್ಲಿ ಆರಂಭಿಸಿದ ಖಾತೆಗಳ ಪಾಸ್‌ಬುಕ್, ಸಿಮ್ ಕಾರ್ಡ್, ಎಟಿಎಂ ಕಾರ್ಡ್, ಚೆಕ್‌ಬುಕ್‌ಗಳನ್ನು ಕೊರಿಯರ್ ಮೂಲಕ ಕಳುಹಿಸಿ ಸೈಬರ್ ಅಪರಾಧಗಳಿಗೆ ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ.

ಆರೋಪಿಗಳು ಮೂವರೂ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಅವರ ವಶದಲ್ಲಿದ್ದ ೧೩೭ ವಿವಿಧ ಬ್ಯಾಂಕ್‌ಗಳ ಎಟಿಎಂ ಕಾರ್ಡ್ಗಳು, ೨೧ ಬ್ಯಾಂಕ್ ಪಾಸ್ ಪುಸ್ತಕಗಳು, ೧೦ ಚೆಕ್‌ಬುಕ್‌ಗಳು, ೩ ಸಿಮ್ ಕಾರ್ಡ್ಗಳು ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ ಮೂರು ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಬಿ.ನಿಖಿಲ್ ತಿಳಿಸಿದ್ದಾರೆ.

ಇವರುಗಳು ಸಾರ್ವಜನಿಕರಿಗೆ ಬ್ಯಾಂಕ್ ಖಾತೆ ತೆರೆದರೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುವುದಾಗಿ ಕರೆ ಮಾಡಿ ವಂಚಿಸಿ ಅವರಿಂದ ಮಾಹಿತಿ ಪಡೆದು ಖಾತೆಗಳನ್ನು ತೆರೆದು ಈ ಖಾತೆಗಳಿಗೆ ಸೈಬರ್ ಮೂಲಕ ವಂಚನೆ ಮಾಡುವ ಹಣವನ್ನು ತುಂಬುತ್ತಿದ್ದರು.

ಹೀಗೆ ಖಾತೆಗೆ ತುಂಬಿದ ಹಣವನ್ನು ತಾವೇ ಕಬಳಿಸುತ್ತಿದ್ದರು. ಪೊಲೀಸರು ಸೈಬರ್ ವಂಚನೆ ಪತ್ತೆ ಮಾಡಿದಾಗ ಅಮಾಯಕ ಸಾರ್ವಜನಿಕರು ತಮ್ಮ ಖಾತೆಗೆ ವಂಚಕರಿAದ ಹಣ ಬಂದಿರುವುದು ಮತ್ತು ಡ್ರಾ ಮಾಡಿರುವ ಕಾರಣಕ್ಕಾಗಿ ಆರೋಪಕ್ಕೆ ತುತ್ತಾಗುರುವುದು ಕಂಡುಬAದಿದೆ.

ಸಿಇಎನ್ ಪೊಲೀಸ್ ಠಾಣೆ ಉಪಾಧೀಕ್ಷಕ ಆರ್.ರಾಜೇಶ್ ಮತ್ತು ಪಿ.ಐ ಜಗದೀಶ್ ಮುಂದಾಳತ್ವದಲ್ಲಿ ಸಿಬ್ಬಂದಿಗಳಾದ ಅಂಬರೀಶ್, ಶಂಕರ್, ಶಿವಾನಂದ, ಅರುಣ್‌ಕುಮಾರ್, ಬಾಲಾಜಿ, ಆಲೀಫಾ, ಮಂಜುಳ, ವಿನಯ್, ಪ್ರಸನ್ನ ಕುಮಾರ್, ಚಂದ್ರಿಕಾ ಮತ್ತು ನಫೀಸ್‌ಖಾನ್ ಅವರುಗಳು ವಂಚಕರ ಜಾಲವನ್ನು ಬೇದಿಸಿ ತಮ್ಮ ಖೆಡ್ಡಾಗೆ ಕೆಡವಿಕೊಂಡಿದ್ದಾರೆ.

ಬಾಕ್ಸ್

ಸಾರ್ವಜನಿಕರೇ ಎಚ್ಚರ! :

ಸೈಬರ್ ವಂಚಕರು ಹಣದ ಆಮೀಷ ತೋರಿಸಿ ನಿಮ್ಮ ಹೆಸರಿನಲ್ಲಿರುವ ಬ್ಯಾಂಕ್ ಖಾತೆಯ ಪಾಸ್‌ಬುಕ್, ಎಟಿಎಂ ಕಾರ್ಡ್, ಚೆಕ್ ಬುಕ್ ಹಾಗೂ ಖಾತೆಗೆ ಲಿಂಕ್ ಮಾಡಿಸಿದ ಸಿಮ್‌ಕಾರ್ಡ್ಗಳನ್ನು ಪಡೆದು ನಿಮ್ಮ ಬ್ಯಾಂಕ್ ಖಾತೆಯನ್ನು ಬಳಸಿ ಸೈಬರ್ ಅಪರಾಧಿಗಳು ಸುಲಿಗೆ ಮಾಡಿದ ಹಣವನ್ನು ದೋಚಿಕೊಂಡು ನೀವು ಜೈಲಿಗೆ ಸೇರುವಂತೆ ಮಾಡುವ ಜಾಲದ ಕುರಿತು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

ಚಿತ್ರ ೨೦ ಕೆ.ಎಲ್.ಆರ್ ೦೨ : ಆರೋಪಿ ಕುಡಾ ಸುರೇಶ್ ಭಾವಚಿತ್ರ

ಚಿತ್ರ ೨೦ ಕೆ.ಎಲ್.ಆರ್ ೦೨ಎ : ಆರೋಪಿ ಕೊಮ್ಮಿರಿ ರಾಜ್‌ಕುಮಾರ್ ಭಾವಚಿತ್ರ

ಚಿತ್ರ ೨೦ ಕೆ.ಎಲ್.ಆರ್ ೦೨ಬಿ : ಆರೋಪಿ ಅವೀದ್ ಬಾಷಾ ಭಾವಚಿತ್ರ