ಕಳಸ ತಾಲೂಕಿನಲ್ಲಿ ಜಾನುವಾರುಗಳಿರುವ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಲು ಸಜ್ಜಾಗಿರುವ ಅಂಬುಲೆನ್ಸ್. 
ನ್ಯೂಸ್

ಸಾರ್ವಜನಿಕರ ಮನೆ ಬಾಗಿಲಿಗೆ ಸಂಚಾರಿ ಪಶು ಚಿಕಿತ್ಸಾ ಘಟಕ

ಕಳಸ: ಕೇಂದ್ರ ಸರ್ಕಾರದ ಪಶು ಸಂಜೀವಿನಿ ಯೋಜನೆಯ ಸಂಚಾರಿ ತುರ್ತು ಪಶು ಚಿಕಿತ್ಸಾ ವಾಹನ ಕಳಸ ತಾಲೂಕಿನಲ್ಲಿ ಜಾನುವಾರುಗಳಿರುವ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಲು ಸಜ್ಜಾಗಿದೆ.
ರಾಜ್ಯದಾದ್ಯಂತ 290 ವಾಹನಗಳು ಮಂಜೂರಾಗಿದ್ದು ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲೂ ಈ ವಾಹನ ತನ್ನ ಸೇವೆ ನೀಡಲಿದೆ.
ತಮ್ಮ ಮನೆಯಲ್ಲಿರುವ ಹಸು, ಎತ್ತು, ಎಮ್ಮೆ, ಕುರಿ ಸೇರಿದಂತೆ ಯಾವುದೇ ಜಾನುವಾರುಗಳ ಆರೋಗ್ಯದಲ್ಲಿ ಏರುಪೇರು ಕಂಡು ಬಂದಲ್ಲಿ ಜಾನುವಾರುಗಳ ಮಾಲಿಕರು ಸಹಾಯವಾಣಿ 1962ಗೆ ಕರೆ ಮಾಡಿದರೆ ಕೆಲ ಸಮಯದಲ್ಲಿಯೆ ಮನೆ ಬಾಗಿಲಿಗೆ ವಾಹನಗಳು ತೆರಳಿ ಚಿಕಿತ್ಸೆ ನೀಡಲಿವೆ.
ಈ ವಾಹನದಲ್ಲಿ ಒಬ್ಬ ಪಶು ವೈದ್ಯ, ಒಬ್ಬ ಇನ್ಸ್‌ಪೆಕ್ಟರ್ ಹಾಗೂ ಡ್ರೈವರ್ ಕಂ ಅಟೆಂಡರ್‌ಗಳನ್ನು ನೇಮಿಸಲಾಗಿದೆ. ಈ ಪಶು ಚಿಕಿತ್ಸಾ ಆಂಬುಲೆನ್ಸ್‌ನಲ್ಲಿ ಆಧುನಿಕ ಶಸ ಚಿಕಿತ್ಸಾ ಘಟಕ, ಪ್ರಯೋಗ ಶಾಲೆ ಮತ್ತು ಸ್ಕಾನಿಂಗ್ ಉಪಕರಣಗಳನ್ನು ಅಳವಡಿಸಲಾಗಿದೆ. ಇದೊಂದು ಉತ್ತಮ ಯೋಜನೆಯಾಗಿದ್ದು ತುರ್ತು ಸೇವೆಯನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ಪಶು ವೈದ್ಯ ಡಾ. ಯುವರಾಜ್ ತಿಳಿಸಿದ್ದಾರೆ.