ನ್ಯೂಸ್

ಸಾರಿಗೆ ಮುಷ್ಕರ, ಡಿಸಿಎಂ ಸವದಿ ಸಭೆ, ಸಂಘಟನೆಗಳ ಮುಖಂಡರ ಯತ್ನ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ವಿಕಾಸಸೌಧದಲ್ಲಿ ಸಾರಿಗೆ ಸಚಿವ ಸವದಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯತ್ತಿದ್ದು, ಚರ್ಚೆ ಮುಂದುವರೆದಿದೆ.

ಸಭೆಯಲ್ಲಿ ಸಿಐಟಿಯು, ಎಐಟಿಸಿ, ನೌಕರರ ಮಹಾ ಮಂಡಳ, ಬಿಎಂಎಸ್ ಪ್ರತಿನಿಧಿಗಳು, ನಾಲ್ಕು ಸಾರಿಗೆ ನಿಗಮಗಳ ಎಂಡಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ.

ಲಾಕ್‌ಡೌನ್ ಹಿನ್ನೆಲೆ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಸಂದರ್ಭ ಸಾರಿಗೆ ನೌಕರರನ್ನು ಸರ್ಕಾರಿ ಉದ್ಯೋಗಿಗಳಾಗಿ ಮಾಡಲು ಅಸಾಧ್ಯ. ಇದರಿಂದ ಸರ್ಕಾರದ ಮೇಲೆ ಭಾರಿ ಹೊರೆ ಬೀಳಲಿದೆ. ಹಾಗಾಗಿ ಅವರ ಪ್ರಮುಖ ಬೇಡಿಕೆಯಾದ ಸಾರಿಗೆ‌ ನೌಕರರನ್ನು ಸರ್ಕಾರಿ‌ ನೌಕರರನ್ನಾಗಿ ಮಾಡುವುದು ಸಾಧ್ಯವಿಲ್ಲ ಎಂಬುದನ್ನು ನೌಕರರ ಒಕ್ಕೂಟಕ್ಕೆ ಮನವರಿಕೆ ಮಾಡುತ್ತಿದ್ದಾರೆ.

ಕರೊನಾ ಕರ್ತವ್ಯ ವೇಳೆ ಮೃತಪಟ್ಟ ಸಾರಿಗೆ ನೌಕರರಿಗೆ 30 ಲಕ್ಷ ರೂ. ಪರಿಹಾರ ನೀಡುವ ಸಂಬಂಧ ಪರಿಗಣಿಸಬಹುದು. ಉಳಿದಂತೆ ನೌಕರರ ಇತರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ‌ ಮಾಡುತ್ತೇವೆ ಎಂದು ಸಾರಿಗೆ ನೌಕರರ ಸಂಘಟನೆಗಳಿಗೆ ಮನವರಿಕೆ ಮಾಡಲು ಯತ್ನಿಸುತ್ತಿದ್ದಾರೆ.