ಎಚ್.ಡಿ.ಕೋಟೆ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಅನುರಾಗ್ ಜೋಶಿ ಉದ್ಘಾಟಿಸಿದರು. ರಾಜಶೇಖರ್ ರಾಘವನ್, ಜನಾರ್ದನ್ ಕೋಟ ಸಂಜೀವರಾಯಿಡು, ಪ್ರಭಾಕರ್ ರಮೇಶ್, ಸಣ್ಣರಾಮಪ್ಪ, ರಾಮಸ್ವಾಮಿ, ಭಾನುಪ್ರಕಾಶ್, ಭಾರತಿ ಇದ್ದರು.  
ನ್ಯೂಸ್

ಸಾಮಾಜಿಕ ಭದ್ರತಾ ಯೋಜನೆ ಜನರಿಗೆ ಲಾಭ

ಎಚ್.ಡಿ.ಕೋಟೆ: ಕೇಂದ್ರ ಸರ್ಕಾರ ಸಾಮಾನ್ಯ ಜನರ ಅನುಕೂಲಕ್ಕಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೊಳಿಸಿದ್ದು, ಪ್ರತಿಯೊಬ್ಬರೂ ಜನಧನ್ ಖಾತೆಯನ್ನು ಹೊಂದಬೇಕು ಎಂದು ಎಸ್.ಬಿ.ಐ ನ ಪ್ರಧಾನ ವ್ಯವಸ್ಥಾಪಕ ಅನುರಾಗ್ ಜೋಶಿ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ಜನ್‌ಧನ್ ಸುರಕ್ಷಾ ಅಭಿಯಾನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

18 ರಿಂದ 20 ವರ್ಷದೊಳಗಿನವರು ವಾರ್ಷಿಕ 20 ರೂ.ಗಳನ್ನು ಪಾವತಿಸಿದರೆ ಅಪಘಾತದಲ್ಲಿ ಮೃತಪಟ್ಟಾಗ 2 ಲಕ್ಷ ರೂ. ಹಾಗೂ ಭಾಗಶಃ ಅಂಗವಿಕಲರಾದರೆ 1 ಲಕ್ಷ ರೂ. ವಿಮೆ ದೊರೆಯಲಿದೆ. ಇದು ಕುಟುಂಬದ ಸಂಕಷ್ಟಕ್ಕೆ ನೆರವಾಗಲಿದೆ ಎಂದರು.

ಸ್ತ್ರೀ ಸಬಲೀಕರಣ ಮತ್ತು ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಹಾಗೂ ವ್ಯಾಪರಸ್ಥರಿಗೆ ವಿವಿಧ ಸಾಲ ಸೌಲಭ್ಯ ದೊರೆಯಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಹಾಯಕ ಪ್ರಧಾನ ವ್ಯವಸ್ಥಾಪಕ ದೊರೆರಾಜ್ ಮಾತನಾಡಿ, ಜನಧನ್ ಖಾತೆ ಹೊಂದಿರದಿಲ್ಲದವರು ಖಾತೆ ತೆರೆದು ರುಪೇ ಕಾರ್ಡ್ ಪಡೆದಿದ್ದಲಿ, ಅಂತಹವರು ಅಕಾಲಿಕ ಮರಣ ಹೊಂದಿದರೆ ಅವರ ಕುಟುಂಬಕ್ಕೆ ಒಂದು ಲಕ್ಷ ರೂ.ಹಣ ಬರಲಿದೆ ಎಂದು ತಿಳಿಸಿದರು.

ಬ್ಯಾಂಕ್‌ನ ಉಪ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ರಾಘವನ್, ಪ್ರಾದೇಶಿಕ ವ್ಯವಸ್ಥಾಪಕ ಜನಾರ್ದನ್ ಕೋಟ ಸಂಜೀವ ರಾಯ್ಡು, ಪ್ರಭಾಕರ್ ರಮೇಶ್, ಗ್ರೇಡ್ 2 ತಹಸೀಲ್ದಾರ್ ಸಣ್ಣರಾಮಪ್ಪ, ಸಮಾಜ ಕಲ್ಯಾಣಾಧಿಕಾರಿ ರಾಮಸ್ವಾಮಿ, ಶಾಖಾ ವ್ಯವಸ್ಥಾಪಕ ಭಾನುಪ್ರಕಾಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಭಾರತಿ, ಬ್ಯಾಂಕ್ ಸಿಬ್ಬಂದಿ ಆನಂದಕುಮಾರ್, ಪುಟ್ಟಸ್ವಾಮಿ, ಚೆಲುವಯ್ಯ, ಸಿದ್ದರಾಜು, ಶಿವಕುಮಾರ್, ನಿಶಾಂತ್, ಪುಟ್ಟಸ್ವಾಮಿ, ಚಂದ್ರಕುಮಾರ್, ನಂದಿನಿ ಇದ್ದರು.