ನ್ಯೂಸ್

ಸಾಮಾಜಿಕ ಜಾಲತಾಣ ಸದ್ವಿನಿಯೋಗ ಆಗಬೇಕು

ಕುಂದಾಪುರ: ಶಿಕ್ಷಣ ಜೊತೆಗೆ ಜೀವನದಲ್ಲಿ ಗುರಿಯಿದ್ದರೆ ಯಾವುದೇ ಕಾರ್ಯ ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಟಿವಿ, ಮೊಬೈಲ್, ಇಂಟರ್ನೆಟ್ ಬಳಕೆ ಒಳ್ಳೆ ಕೆಲಸಕ್ಕೆ ಸೀಮಿತವಾಗಿರಲಿ ಎಂದು ಉಪ್ಪುಂದ ಶ್ರೀ ವರಮಹಾಲಕ್ಷ್ಮೀ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಹೇಳಿದರು.
ಬೈಂದೂರು ಲೀನ್ ಆರ್ಗನೈಸೇಶನ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಆಶ್ರಯದಲ್ಲಿ ದೀನದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಪ್ರಶಿಕ್ಷಣಾರ್ಥಿಗಳಿಗೆ ಉಚಿತ ಸಮವಸ್ತ್ರ ಕಿಟ್ ವಿತರಿಸಿ ಮಾತನಾಡಿದರು.
ಶಿಕ್ಷಣದ ಬಳಿಕ ಉದ್ಯೋಗ ಪಡೆಯುವ ಗುರಿ ಮುಖ್ಯ. ಉದ್ಯೋಗ ಸೃಷ್ಟಿ ಇಂದಿನ ಸವಾಲಾಗಿದ್ದು ಅದನ್ನು ನೀಗಿಸಲು ಸಂಘಸಂಸ್ಥೆಗಳು ಹಾಗೂ ಸರಕಾರ ಕ್ರಮವಹಿಸಬೇಕು. ಈಗಾಗಾಲೇ ಟ್ರಸ್ಟ್ ಮೂಲಕ ಶಿಕ್ಷಣ, ಆರೋಗ್ಯ, ಬಡವರಿಗೆ ಮನೆ ನಿರ್ಮಾಣ ಸಹಿತ ಹಲವು ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಸುರಭಿ ಸಂಸ್ಥೆ ಅಧ್ಯಕ್ಷ ನಾಗರಾಜ ದೇವಾಡಿಗ, ಲೀನ್ ಆರ್ಗನೈಸೇಶನ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸ್ಥಾಪಕ ಭಾಸ್ಕರ್ ಬಿಲ್ಲವ, ಹರ್ಷಿತಾ ಭಾಸ್ಕರ್ ಬಿಲ್ಲವ, ಸಂಸ್ಥೆಯ ಶಿಕ್ಷಕರಾದ ಸರಸ್ವತಿ, ನಿರ್ಮಲಾ, ಸುಜಾತಾ, ಅಂಕಿತಾ, ವಸಂತ ಪೂಜಾರಿ ಇದ್ದರು.
ಪ್ರಶಿಕ್ಷಣಾರ್ಥಿಗಳಾದ ಅಶ್ವಿನಿ ಪ್ರಾರ್ಥಿಸಿದರು. ವಿನುತಾ ಸ್ವಾಗತಿಸಿ, ಅಕ್ಷತಾ ನಿರೂಪಿಸಿ, ಅನುಷಾ ವಂದಿಸಿದರು.