ಬಾಳೆಹೊನ್ನೂರು ಸಮೀಪದ ಖಾಂಡ್ಯದಲ್ಲಿ ಆಯೋಜಿಸಿದ್ದ ಮದ್ಯವರ್ಜನಾ ಶಿಬಿರದ ಸಮಾರೋಪ ಕಾರ್ಯಕ್ರಮವನ್ನು ಬಿ.ಎಸ್.ರತ್ನಾಕರ್ ಉದ್ಘಾಟಿಸಿದರು. ವಿವೇಕ್ ವಿನ್ಸೆಂಟ್ ಪಾಯ್ಸ, ಬಿ.ಗೀತಾ, ಸಂಪತ್, ಪ್ರಶಾಂತ್ ಚಿಪ್ರಗುತ್ತಿ ಇತರರಿದ್ದರು. 
ನ್ಯೂಸ್

ಸಾಮರಸ್ಯ ಇದ್ದಲ್ಲಿ ಬದುಕು ಬಂಗಾರ

ಬಾಳೆಹೊನ್ನೂರು: ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಸಮಾಜದ ಚಿಂತನೆ, ಸಾಮರಸ್ಯದಿಂದಿರುವ ವ್ಯಕ್ತಿಯ ಬದುಕು ಬಂಗಾರವಾಗುತ್ತದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ ಹೇಳಿದರು.

ಖಾಂಡ್ಯ ಮಾರ್ಕಾಂಡೇಶ್ವರ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ 1935ನೇ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

ದಾಂಪತ್ಯ ಜೀವನ ಸುಖಕರವಾಗಿರಬೇಕಾದರೆ ಇಬ್ಬರೂ ಕಷ್ಟ ಸುಖ ಸಮನಾಗಿ ಹಂಚಿಕೊಂಡು ಬಾಳಬೇಕು. ಹೆಣ್ಣು ಅಥವಾ ಗಂಡು ಇಬ್ಬರಲ್ಲಿ ಒಬ್ಬರು ದಾರಿ ತಪ್ಪಿದರೂ ಸಂಸಾರ ನೌಕೆ ದಡ ಸೇರಲಾರದು ಎಂದರು.

ಮದ್ಯವರ್ಜನ ಸಮಿತಿ ಅಧ್ಯಕ್ಷ ಬಿ.ಎಸ್.ರತ್ನಾಕರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಮಾದರಿಯಾಗಿದ್ದು ಸಾವಿರಾರು ಮದ್ಯ ವ್ಯಸನಿಗಳಿಗೆ ಹೊಸ ಬದುಕನ್ನು ಕಟ್ಟಿಕೊಟ್ಟಿದೆ ಎಂದರು.

ಬಿ.ಸಿ.ಟ್ರಸ್ಟ್ ಚಿತ್ರದುರ್ಗದ ಪ್ರಾದೇಶಿಕ ನಿರ್ದೇಶಕಿ ಬಿ.ಗೀತಾ, ದೇವದಾನ ಗ್ರಾಪಂ ಅಧ್ಯಕ್ಷ ಸಂಪತ್, ಪ್ರಮುಖರಾದ ಪ್ರಶಾಂತ್ ಚಿಪ್ರಗುತ್ತಿ, ಕಾಫಿ ಗಿರೀಶ್, ನಾಗರಾಜ್ ಕುಲಾಲ್, ನಂದಕುಮಾರ್, ಸೌಮ್ಯಾ, ಸುರೇಶ್, ಪಿ.ಚಂದ್ರ, ಚಂದ್ರಶೇಖರ ರೈ ಮತ್ತಿತರರಿದ್ದರು.