ಸರಗೂರು ತಾಲೂಕಿನ ಸಾಗರೆ ಗ್ರಾಮ ಪಂಚಾಯಿತಿಯಲ್ಲಿ ಉಪಾಧ್ಯಕ್ಷೆ ರೂಪ, ಸದಸ್ಯರಾದ ಮಹದೇವನಾಯಕ, ನಂಜಯ್ಯ, ದೇವಲಮ್ಮ, ಎಸ್.ಟಿ.ಸೋಮಣ್ಣ, ಮೃತ್ಯುಂಜಯ, ಪುಟ್ಟತಾಯಮ್ಮ, ಲೀಲಾವತಿ, ರಾಘವೇಂದ್ರ, ದೊಡ್ಡತಾಯಮ್ಮ, ಎಸ್.ಸಿ.ಕೃಷ್ಣ, ಚಂದ್ರಮ್ಮ, ವಸಂತ ಇದ್ದರು  
ನ್ಯೂಸ್

ಸಾಗರೆ ಗ್ರಾಪಂ ಅಧ್ಯಕ್ಷ ಸ್ಥಾನದಿಂದ ಸುನೀಲ್ ಕುಮಾರ್ ವಜಾ

ಸರಗೂರು: ತಾಲೂಕಿನ ಸಾಗರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನೀಲ್ ಕುಮಾರ್ ವಿರುದ್ಧ ಸದಸ್ಯರು ಅವಿಶ್ವಾಸ ಮಂಡಿಸಿದ ಹಿನ್ನೆಲೆಯಲ್ಲಿ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿ ಹುಣಸೂರು ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.


ಆ.22ರಂದು ಸಾಗರೆ ಗ್ರಾಪಂನಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ಸಭೆಯಲ್ಲಿ 16 ಸದಸ್ಯರ ಪೈಕಿ 13 ಸದಸ್ಯರು ಅವಿಶ್ವಾಸ ಮಂಡಿಸಿದ್ದರು. ಅದರನ್ವಯ ಸೆ.16ರಂದು ಮತ್ತೊಮ್ಮೆ ಸದಸ್ಯರ ಸಭೆಯಲ್ಲಿ ನಡೆಸಿ ಚರ್ಚೆ ನಡೆಸಿದ ಬಳಿಕ ಸುನೀಲ್ ಅವರನ್ನು ವಜಾಗೊಳಿಸಲಾಯಿತು.


ಅಧ್ಯಕ್ಷರು ಮತ್ತು ಸದಸ್ಯರ ನಡುವೆ ಹೊಂದಾಣಿಕೆ ಇರಲಿಲ್ಲ. ಅಲ್ಲದೆ ಸದಸ್ಯರ ಮಾತಿಗೆ ಸರಿಯಾಗಿ ಸ್ಪಂದಸುತ್ತಿರಲಿಲ್ಲ. ಇದರಿಂದ ಬೇಸರಗೊಂಡು 13 ಜನ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಸಿದ್ದಾರೆ ಎಂಬುದು ಕೆಲ ಸದಸ್ಯರ ಆರೋಪ.


ಸಭೆಯಲ್ಲಿ ಉಪಾಧ್ಯಕ್ಷೆ ರೂಪಾ, ಸದಸ್ಯರಾದ ಮಹದೇವನಾಯಕ, ನಂಜಯ್ಯ, ದೇವಲಮ್ಮ, ಎಸ್.ಟಿ.ಸೋಮಣ್ಣ, ಮೃತ್ಯುಂಜಯ, ಪುಟ್ಟತಾಯಮ್ಮ, ಲೀಲಾವತಿ, ರಾಘವೇಂದ್ರ, ದೊಡ್ಡತಾಯಮ್ಮ, ಎಸ್.ಸಿ.ಕೃಷ್ಣ, ಚಂದ್ರಮ್ಮ, ವಸಂತಾ ಹಾಜರಿದ್ದರು.