filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 42; 
ನ್ಯೂಸ್

ಸಾಕ್ಷಿ ವಿಚಾರಣೆ 10ಕ್ಕೆ ಆರಂಭ

ಚಿತ್ರದುರ್ಗ: ಶಿವಮೂರ್ತಿ ಮುರುಘಾ ಶರಣರ ಮೇಲಿನ ಮೊದಲ ಪೋಕ್ಸೋ ಪ್ರಕರಣ ಸಂಬಂಧ ಸೋಮವಾರ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸಾಕ್ಷಿಗಳ ವಿಚಾರಣೆಯನ್ನು ಜೂ. 10ಕ್ಕೆ ನಿಗದಿಪಡಿಸಿತು.

ನ್ಯಾಯಾಧೀಶರ ಮುಂದೆ ಪ್ರಕರಣದ ಆರೋಪಿತರಾದ ಶಿವಮೂರ್ತಿ ಮುರುಘಾ ಶರಣರು, ರಶ್ಮಿ, ಪರಮಶಿವಯ್ಯ ಹಾಜರಾದರು. ಮೂರು ದಿನಗಳ ಹಿಂದೆಯಷ್ಟೇ ಪ್ರಕರಣ ಸಂಬಂಧ ದೋಷಾರೋಪಣಾವೂ ನಿಗದಿಯಾಗಿತ್ತು.

ನ್ಯಾಯಾಧೀಶ ಗಂಗಾಧರಪ್ಪ ಚನ್ನಬಸಪ್ಪ ಅಡಪದ ಅವರು ಪೋಕ್ಸೋ ಪ್ರಕರಣದ ಸಾಕ್ಷಿ ವಿಚಾರವಾಗಿ ಪರ ಮತ್ತು ವಿರುದ್ಧ ವಕೀಲರ ಮನವಿ ಸ್ವೀಕರಿಸಿದರು.

ಸರ್ಕಾರಿ ಅಭಿಯೋಜಕ ಜಗದೀಶ್ ಅವರು ವಿಚಾರಣೆಗೆ ಒಳಪಡುವ ಸಾಕ್ಷಿದಾರರ ಪಟ್ಟಿಯನ್ನು ನ್ಯಾಯಾಲಯಕ್ಕೆ ನೀಡಿ, ವಿಚಾರಣೆಗೆ ದಿನಾಂಕ ನಿಗದಿಪಡಿಸಲು ಕೋರಿದರು. ಆರೋಪಿತರ ಪರ ವಕೀಲ ಕೆ.ಬಿ.ಕೆ.ಸ್ವಾಮಿ ವಾದ ಮಂಡಿಸಿ, ಯಾವ್ಯಾವ ದಿನಗಳಂದು ಎಷ್ಟು ಸಾಕ್ಷಿದಾರರು ಹಾಜರಾಗಲಿದ್ದಾರೆ ಎಂಬುದನ್ನು ಆಧರಿಸಿ, ಸಾಕ್ಷಿಯ ಅಡ್ಡ ಪರೀಕ್ಷೆಗೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.

ಮೊದಲ ಪ್ರಕರಣದಲ್ಲಿ ಎರಡು ಎಫ್‌ಐಆರ್ ದಾಖಲಾಗಿದ್ದು, ಸಂಖ್ಯೆ 181 ಅಡಿ 83, ಸಂಖ್ಯೆ 182 ಅಡಿ 79 ಸಾಕ್ಷಿಗಳ ವಿಚಾರಣೆ ನಡೆಯಬೇಕು. ಆದರೆ, ಅಷ್ಟು ಸಾಕ್ಷಿಗಳ ವಿಚಾರಣೆಗೆ ಸಾಕಷ್ಟು ಕಾಲಾವಕಾಶ ಬೇಕಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ 13 ಮಂದಿ ಮುಖ್ಯ ಸಾಕ್ಷಿದಾರರ ವಿಚಾರಣೆ ನಡೆಯಲಿದೆ ಎಂಬ ಮಾಹಿತಿ ಇದೆ.

ಪ್ರಕರಣ ಸಂಬಂಧ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಸಾಕ್ಷಿ ವಿಚಾರಣೆಯನ್ನು 10ಕ್ಕೆ ನಿಗದಿ ಪಡಿಸಿದ್ದು, 10, 11, 12ರಂದು ಸತತ ಮೂರು ದಿನವೂ ಒಬ್ಬೊಬ್ಬ ಸಾಕ್ಷಿ ವಿಚಾರಣೆಗೆ ನ್ಯಾಯಾಧೀಶರು ಅವಕಾಶ ಮಾಡಿಕೊಟ್ಟಿದ್ದಾರೆ. ಅಲ್ಲದೆ, ನಿಗದಿತ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಾಕ್ಷಿದಾರರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.

ಶರಣರ ಪರ ವಕೀಲರಾದ ಉಮೇಶ್, ಪ್ರತಾಪ್ ಜೋಗಿ ಇತರರಿದ್ದರು.