ನ್ಯೂಸ್

ಸಾಕು ಪ್ರಾಣಿಗಳೊಂದಿಗೆ ಕಾಲ ಕಳೆಯುವ ವ್ಯವಸ್ಥೆ

ಇತ್ತೀಚಿನ ದಿನಗಳಲ್ಲಿ ನಗರದ ಬಹಳಷ್ಟು ಜನರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೇದನೆ, ಜಿಗುಪ್ಸೆ ಕಾಡುತ್ತಿದೆ. ಇಂತಹವರು ದಿನದ ಒಂದಷ್ಟು ಹೊತ್ತು ಕೆಲ ಪಕ್ಷಿಗಳು, ಸಾಕು ನಾಯಿಗಳೊಂದಿಗೆ ಕಾಲ ಕಳೆದು ಮನಸ್ಸು ಹಗುರ ಮಾಡಿಕೊಳ್ಳುವ ವ್ಯವಸ್ಥೆವನ್ನು ಇಂಡಿಯಾ ಬೈಬಲ್ ಲಿಟರೇಚರ್ ಅಪೋಸ್ಟೊಲೇಟ್ ವತಿಯಿಂದ ಆಯೋಜಿಸಲಾಗಿದೆ ಎಂದು ಸಂಸ್ಥಾಪಕ ನಿರ್ದೇಶಕ ರೆವರೆಂಡ್ ಫಾದರ್ ಬೆಂಜಮಿನ್ ವಾಸ್ ತಿಳಿಸಿದರು.

ತಾವು ಕೆಲವೊಂದು ಉತ್ತಮ ತಳಿಯ ನಾಯಿ ಹಾಗೂ ಪಕ್ಷಿಗಳನ್ನು ಸಾಕಿದ್ದು, ಇವು ಮನುಷ್ಯರೊಂದಿಗೆ ಸೌಮ್ಯವಾಗಿ, ಸ್ನೇಹಮಯವಾಗಿ ವರ್ತಿಸುವ ತರಬೇತಿ ನೀಡಲಾಗಿದೆ. ಮಾನಸಿಕ ನೆಮ್ಮದಿ ಬೇಕೆಂದವರು ತಮ್ಮನ್ನು ಸಂಪರ್ಕಿಸಿದಲ್ಲಿ ದಿನದಲ್ಲಿ ಮೂರ್ನಾಲ್ಕು ಗಂಟೆ ಅವರ ಮನೆಗೆ ಕಳುಹಿಸಿಕೊಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಾಗಲೇ ಹಲವಾರು ವೃದ್ಧಾಶ್ರಮ, ಹಾಸ್ಟೆಲ್, ಆಸ್ಪತ್ರೆ ಮೊದಲಾದವುಗಳು ಇದರ ಪ್ರಯೋಜನ ಪಡೆದಿವೆ ಎಂದರು.