ಕಳಸ ರೋಟರಿ ಕ್ಲಬ್ ಆಶ್ರಯದಲ್ಲಿ 2025-26ನೇ ಸಾಲಿನ ಕಲಾತರಂಗಿಣಿ ಸಾಂಸ್ಕೃತಿಕ ಸ್ಪರ್ಧಾ ಮೇಳವನ್ನು ರೋಟರಿ ವಲಯ 6ರ ಸಹಾಯಕ ರಾಜ್ಯಪಾಲ ಜಿ.ರಾಜಗೋಪಾಲ ಜೋಷಿ ಉದ್ಘಾಟಿಸಿದರು. ಗುರುಮೂರ್ತಿ, ಗಿರಿಜಾಶಂಕರ್ ಜೋಷಿ, ರಾಜಲಕ್ಷ್ಮೀ ಜೋಷಿ, ಬಾಲಕೃಷ್ಣ ಭಟ್, ಕುಮಾರಸ್ವಾಮಿ ಇತರರಿದ್ದರು. 
ನ್ಯೂಸ್

ಸಾಂಸ್ಕೃತಿಕ ಕಾರ್ಯಕ್ರಮದಿಂದ ಬಾಂಧವ್ಯ ವೃದ್ಧಿ

ಕಳಸ: ರೋಟರಿ ಕೇವಲ ಸಾಮಾಜಿಕ ಸೇವಾ ವೇದಿಕೆ ಅಲ್ಲ. ಇದು ಕಲೆ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಸಂಸ್ಥೆಯೂ ಆಗಿದೆ ಎಂದು ರೋಟರಿ ವಲಯ 6ರ ಸಹಾಯಕ ರಾಜ್ಯಪಾಲ ಜಿ.ರಾಜಗೋಪಾಲ ಜೋಷಿ ಹೇಳಿದರು.

ಕಳಸ ರೋಟರಿ ಕ್ಲಬ್ ಆಶ್ರಯದಲ್ಲಿ 2025-26ನೇ ಸಾಲಿನ ಕಲಾತರಂಗಿಣಿ ಸಾಂಸ್ಕೃತಿಕ ಸ್ಪರ್ಧಾ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ರೋಟರಿ ಸಂಸ್ಥೆಯಲ್ಲಿ ಹಲವರು ಪ್ರತಿಭಾವಂತರಿದ್ದು ಅವರಿಗೆ ಪ್ರತಿಭೆ ತೋರ್ಪಡಿಸಲು ಇಂತಹ ಸರ್ಧಾ ಮೇಳ ಸಹಕಾರಿ. ಜತೆಗೆ ಕುಟುಂಬದವರೊಂದಿಗೆ ಬೆರೆಯಲು ಕೂಡ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು.

ಸಾಂಸ್ಕೃತಿಕ ಸ್ಪರ್ಧಾ ಮೇಳದಲ್ಲಿ ಕಳಸ, ಕೊಪ್ಪ, ಬಾಳೆಹೊನ್ನೂರು, ಜೈಪುರ, ಶೃಂಗೇರಿ, ಎನ್.ಆರ್.ಪುರ ಮುಂತಾದ ಕಡೆಗಳಿಂದ ರೋಟರಿ ಸದಸ್ಯರು ಭಾಗವಹಿಸಿದ್ದರು.

ಸಂಗೀತ, ನೃತ್ಯ, ಏಕಭಿನಯ ಪಾತ್ರ, ಕಿರು ನಾಟಕಗಳು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡವು. ಕಳಸ ರೋಟರಿ ಅಧ್ಯಕ್ಷ ಎಚ್.ಜಿ. ಮಹೇಂದ್ರ, ಸಾಂಸ್ಕೃತಿಕ ಸ್ಪರ್ಧಾ ಮೇಳದ ಅಧ್ಯಕ್ಷ ಬಿ.ಎಸ್.ಸುಗಮ್, ಜಿಲ್ಲಾ ಸಾಂಸ್ಕೃತಿಕ ಛೇರ್ಮನ್ ಎಚ್.ಡಿ.ವಿನಯ್, ಚಲನಚಿತ್ರ ಕಲಾವಿದ ವಿನಯ ರಾಮಪ್ರಸಾದ್, ಕಳಸ ರೋಟರಿ ಕಾರ್ಯದರ್ಶಿ ವಿಶಾಲ್, ಸಾಂಸ್ಕೃತಿಕ ಸ್ಪರ್ಧಾ ಮೇಳದ ಕಾರ್ಯದರ್ಶಿ ರಾಘವ, ಸಂಯೋಜಕ ಗುರುಮೂರ್ತಿ, ಗಿರಿಜಾಶಂಕರ್ ಜೋಷಿ, ರಾಜಲಕ್ಷ್ಮೀ ಜೋಷಿ, ಭಾಲಕೃಷ್ಣ ಭಟ್, ಕುಮಾರಸ್ವಾಮಿ ಇತರರಿದ್ದರು.