ವಿಜಯವಾಣಿ ಸುದ್ದಿಜಾಲ ಕೋಲಾರ
ಬರ ಹಾಗೂ ಬೆಳೆ ನಷ್ಟದಿಂದ ತತ್ತಿಸಿರುವಾಗ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಿAದ ಸಾಲ ಪಡೆದಿರುವ ರೈತರಿಗೆ ಬ್ಯಾಂಕ್ ವ್ಯವಸ್ಥಾಪಕರು ನೋಟೀಸ್ ನೀಡುವ ಮೂಲಕ ರೈತ ವಿರೋಧಿ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಜ.೯ರ ಮಂಗಳವಾರ ಪಾತ್ರೆಸಾಮಾನು ಹಾಗೂ ನಷ್ಟ ಬೆಳೆ ಸಮೇತ ಲೀಡ್ ಬ್ಯಾಂಕ್‌ಗೆ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರ ಹೊರವಲಯದ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಶನಿವಾರ ನಡೆದ ರೈತಸಂಘದ ಸಭೆಯಲ್ಲಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಬರ ಎಂದು ರಾಜ್ಯ ಸರ್ಕಾರವೇ ಘೋಷಣೆ ಮಾಡಿ, ಹೆಕ್ಟೇರ್‌ಗೆ ೨ ಸಾವಿರ ಪರಿಹಾರ ನೀಡಿರುವ ಜೊತೆಗೆ ಹೆಚ್ಚಿನ ಅನುದಾನಕ್ಕೆ ಕೇಂದ್ರ ಸರ್ಕಾರದ ಕಡೆಗೆ ಬೆರಳು ತೋರಿಸುತ್ತಿರುವ ಸಂದರ್ಭದಲ್ಲೇ ಇದೀಗ ಹಿಂಬದಿಯಿAದ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳಿAದ ಸಾಲ ವಸೂಲಿಗೆ ಮುಂದಾಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ಕಡೆ ಜಾನುವಾರಗಳಿಗೆ ಮೇವಿಲ್ಲ. ಮತ್ತೊಂದು ಕಡೆ ಬೆಳೆಗಳಿಗೆ ಬಾಧಿಸುತ್ತಿರುವ ರೋಗಗಳಿಂದಾಗಿ ಹಾಕಿದ ಬಂಡವಾಳ ಬಾರದೆ ರೈತನು ತತ್ತರಿಸುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಗಳಿಗಾಗಿ ಪಡೆದಿರುವ ೧ ಲಕ್ಷದಿಂದ ೧೦ ಲಕ್ಷರೂಗಳವರೆಗಿನ ಸಾಲ ವಸೂಲಿಗೆ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕ್‌ಗಳವರು ನೋಟೀಸ್ ನೀಡಿ ನಿಮ್ಮ ಆಸ್ತಿ, ಜಾನುವಾರು ಹರಾಜು ಹಾಕುತ್ತೇವೆ. ಮರ್ಯಾದೆ ಕಳೆಯುತ್ತೇವೆಂದು ಬೆದರಿಕೆ ಹಾಕುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಬರ ಪರಿಸ್ಥಿತಿ ಇರುವುದರಿಂದ ರೈತರಿಗೆ ಯಾವುದೇ ರೀತಿಯ ನೋಟೀಸ್‌ಗಳನ್ನು ಬ್ಯಾಂಕ್‌ಗಳ ಕಡೆಯಿಂದ ನೀಡಬಾರದೆಂದು ಆದೇಶ ಮಾಡಿದ್ದರೂ ಸಹ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ರೈತರಿಗೆ ನೋಟೀಸ್ ನೀಡಿ, ನ್ಯಾಯಾಲಯಕ್ಕೆ ಹಾಕುವುದಾಗಿ ಹೆದರಿಸುತ್ತಿರುವುದು ರೈತ ವಿರೋಧಿ ಧೋರಣೆಯಲ್ಲದೆ ಮತ್ತಿನ್ನೇನು ಎಂದು ಪ್ರಶ್ನಿಸಿದರು.
ಸಾವಿರಾರು ಕೋಟಿ ಸಾಲ ಮಾಡಿ ದೇಶ ಬಿಟ್ಟು ಹೋಗಿರುವ ವಿಜಯ್ ಮಲ್ಯ ಸೇರಿದಂತೆ ಅನೇಕರ ಬಗ್ಗೆ ಮಾತನಾಡದೆ, ಇಡೀ ದೇಶಕ್ಕೆ ಅನ್ನ ಹಾಕುವ ರೈತರ ವಿರುದ್ಧ ಈ ರೀತಿ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ಮೊದಲು ಬಲಾಢ್ಯರ ಸಾಲ ವಸೂಲಿ ಮಾಡಲು ಮುಂದಾಗಿ, ಇಲ್ಲವಾದರೆ ಪ್ರತಿ ಹಳ್ಳಿಗೆ ಸಾಲ ವಸೂಲಾತಿಗೆ ಬರುವ ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ವಿರುದ್ಧ ರೈತಸಂಘದಿAದ ಸಗಣಿ ಎರಚುವ ಚಳುವಳಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಸುಪ್ರೀಂ ಚಲ, ಗಿರೀಶ್, ಮಂಗಸAದ್ರ ತಿಮ್ಮಣ್ಣ, ವೆಂಕಟೇಶಪ್ಪ, ಮಂಜುಳ, ರತ್ನಮ್ಮ, ಶೋಭ ಮುಂತಾದವರಿದ್ದರು.
ಚಿತ್ರ ೦೬ ಕೆ.ಎಲ್.ಆರ್. ೦೨ : ನಗರದ ಹೊರ ವಲಯದ ಅರಣ್ಯ ಇಲಾಖೆಯ ಬಳಿ ರೈತ ಸಂಘದ ಸಭೆ