ತರೀಕೆರೆ ಶ್ರೀ ರೇವಣಸಿದ್ದೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಎಚ್.ಶ್ರೀನಿವಾಸ್, ನಿರ್ದೇಶಕರನ್ನು ಅಭಿನಂದಿಸಲಾಯಿತು. ಅಣ್ಣಯ್ಯ, ಟಿ.ಟಿ.ನಾಗರಾಜ್ ಇತರರಿದ್ದರು. 
ನ್ಯೂಸ್

ಸಹಕಾರ ಸಂಘದ ಕಟ್ಟಡ ನಿರ್ಮಾಣ ಭರವಸೆ

ತರೀಕೆರೆ: ಮುಖ್ಯಮಂತ್ರಿ ಹಾಗೂ ಸಚಿವರ ಸಹಕಾರದಿಂದ ಪಟ್ಟಣದ ಶ್ರೀ ರೇವಣಸಿದ್ದೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡವನ್ನು ನಿರ್ಮಿಸಲು ಶ್ರಮಿಸುತ್ತೇನೆ ಎಂದು ಶಾಸಕ ಹಾಗೂ ಸಹಕಾರ ಸಂಘದ ನೂತನ ಅಧ್ಯಕ್ಷ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಪಟ್ಟಣದಲ್ಲಿ ಸಹಕಾರ ಸಂಘದ ನೂತನ ನಿರ್ದೇಶಕರ ಪದಗ್ರಹಣ ಸಮಾರಂಭ ಹಾಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ನಾನು ನಿರ್ದೇಶಕನಾಗಬೇಕೆಂದಿದ್ದೆ. ಆದರೆ ಅಧ್ಯಕ್ಷ ಸ್ಥಾನ ಅನಿರೀಕ್ಷತವಾಗಿ ಒದಗಿ ಬಂದಿದೆ. ಕೆಸಿಸಿ ಸಾಲ ಮತ್ತು ಪೋಡಿ ಆಗದಿರುವ ಜಮೀನಿನ ರೈತರಿಗೆ ಸಾಲ ದೊರೆಯುತ್ತಿಲ್ಲವೆಂದು ತಿಳಿದಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾಲ ವಿತರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.

ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮಾ ಮಾತನಾಡಿ, 106 ವರ್ಷ ತುಂಬಿರುವ ಈ ಸಹಕಾರ ಸಂಘದಲ್ಲಿ ಸಂವಿಧಾನದ ಆಶಯದಂತೆ ಎಲ್ಲ ಸಮಾಜದವರಿಗೂ ಅವಕಾಶ ಕಲ್ಪಿಸಲಾಗಿದೆ. ಧರ್ಮೇಗೌಡರ ಸಹಕಾರದಿಂದ ಸಂಘ ಅಭಿವೃದ್ಧಿಯಾಗಿತ್ತು. ಈಗ ಹಾಲಿ ಶಾಸಕರು ಅಧ್ಯಕ್ಷರಾಗಿರುವುದರಿಂದ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಸಂಘದ ಸದಸ್ಯರಿಗೆ ಹೆಚ್ಚಿನ ಸಾಲ ಸೌಲಭ್ಯಗಳು ದೊರೆಯಲಿದೆ ಎಂದರು.

ಉಪಾಧ್ಯಕ್ಷರಾಗಿ ಪುಷ್ಪಾ ವೆಂಕಟೇಶ್ ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರಾದ ಅಣ್ಣಯ್ಯ, ಟಿ.ಟಿ.ನಾಗರಾಜ್, ಪರಶುರಾಮ್, ಪುಷ್ಪಲತಾ ವೆಂಕಟೇಶ್, ಪ್ರಕಾಶ್ ಟಿ.ಎಸ್.(ವರ್ಮಾ), ಎಂ.ರಮೇಶ್, ಟಿ.ಎನ್.ಲೋಕೇಶ್, ಟಿ.ವಿ.ಶ್ರೀನಿವಾಸ್, ಶಾಸಕ ಜಿ.ಎಚ್.ಶ್ರೀನಿವಾಸ್, ಸುಮಾ ಸತ್ಯನಾರಾಯಣ, ಟಿ.ಜಿ.ಸುರೇಶ್ ಮತ್ತು ಎಂ.ನರೇಂದ್ರ ಅಧಿಕಾರ ಸ್ವೀಕರಿಸಿದರು. ಸಿಇಒ ಮೋಹನ್ ರಾಜ್ ಮತ್ತು ಸಿಬ್ಬಂದಿ ಇದ್ದರು.