ಮದ್ದೂರು ಪಟ್ಟಣದ ಶಾಸಕರ ಕಚೇರಿಯಲ್ಲಿ ಶಾಸಕ ಕೆ.ಎಂ.ಉದಯ್ ಕ್ಯಾಲೆಂಡರ್ ಬಿಡುಗಡೆ ಮಾಡಿದರು, ರವೀಶ್, ಸತೀಶ್ ಕುಮಾರ್, ಶ್ರೀನಿವಾಸ್, ಯೋಗಾನಂದ, ಶಿವನಂಜೇಗೌಡ, ಸುರೇಶ್, ರವಿಕುಮಾರ್, ಅಂಕೆಗೌಡ ಇದ್ದರು.  
ನ್ಯೂಸ್

ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರ್ ಬಿಡುಗಡೆ

ಮದ್ದೂರು : ಪಟ್ಟಣದ ಶಿವಪುರ ಶಾಸಕರ ಕಚೇರಿಯಲ್ಲಿ ಇತ್ತೀಚೆಗೆ ತಾಲೂಕು ಸರ್ಕಾರಿ ನೌಕರರ ಸಂಘದ ಹೊರ ತಂದಿರುವ 2025 ನೇ ವರ್ಷದ ಕ್ಯಾಲೆಂಡರನ್ನು ಶಾಸಕ ಕೆ.ಎಂ.ಉದಯ್ ಬಿಡುಗಡೆ ಮಾಡಿದರು.

ಕ್ಯಾಲೆಂಡರ್‌ಗಳಿಂದ ಹಬ್ಬಗಳು, ವಿಶೇಷ ದಿನಗಳು, ಮಹಾನ್ ವ್ಯಕ್ತಿಗಳ ಜಯಂತಿ ಸೇರಿದಂತೆ ಹಲವಾರು ಉಪಯುಕ್ತ ಮಾಹಿತಿಗಳು ಸಿಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಕ್ಯಾಲೆಂಡರ್‌ಗಳನ್ನು ಬಳಕೆ ಮಾಡಬೇಕು ಎಂದರು. ತಾಲೂಕು ಸರ್ಕಾರಿ ನೌಕರರ ಸಂಘದ ಪ್ರತಿ ವರ್ಷದಂತೆ ಈ ವರ್ಷವು 2025ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ರವೀಶ್, ಕಾರ್ಯದರ್ಶಿ ಸತೀಶ್ ಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್, ಯೋಗಾನಂದ, ಗೌರವಾಧ್ಯಕ್ಷ ಶಿವನಂಜೇಗೌಡ, ಖಜಾಂಚಿ ಸುರೇಶ್, ಮಾಜಿ ಅಧ್ಯಕ್ಷ ರವಿಕುಮಾರ್, ನಿರ್ದೇಶಕಕ ಅಂಕೆಗೌಡ ಇದ್ದರು.