ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ನೀಡಲೇಬೇಕಾಗಿದ್ದ ೭ ನೇ ವೇತನ ಆಯೋಗದ ವರದಿಯನ್ನು ಪರಿಷ್ಕರಣೆ ಮಾಡಿ ವೇತನ ಆಯೋಗದ ಶಿಫಾರಸುಗಳನ್ನು ಸರ್ಕಾರ ಜಾರಿಗೆ ತಂದಿರುವುದಕ್ಕೆ ಸರ್ಕಾರಿ ನೌಕರರ ಪರವಾಗಿ ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತೇನೆ ಶಶೀಲ್ ಜಿ ನಮೋಶಿ
ಆದರೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ವೇತನ ಆಯೋಗದ ವರದಿಯನ್ನು ಈ ಹಿಂದೆಯೆ ಜಾರಿಗೊಳಿಸಬೇಕಾಗಿತ್ತು, ಆದರೆ ಲೋಕಸಭಾ, ವಿಧಾನ ಸಭಾ ಚುನಾವಣೆ ನೀತಿ ಸಂಹಿತೆ ನೆಪವೊಡ್ಡಿ ಈಗ ಸಮಿತಿಯ ವರದಿಯನ್ನು ಸರಕಾರಿ ನೌಕರರು ಪ್ರತಿಭಟನೆಯ ಹಾದಿ ಹಿಡಿಯಬಹುದು ಎಂಬುದನ್ನು ಅರಿತು ವಿಳಂಬವಾಗಿ ಈಗಲಾದರೂ ವರದಿಯನ್ನು ಒಪ್ಪಿ ಜಾರಿಗೊಳಿಸುತ್ತಿರುವದು ಸಮಾಧಾನದ ವಿಷಯ. ಆದರೆ ಒಂದAತೂ ಸತ್ಯ ಸುಮಾರು ೧೮ ತಿಂಗಳುಗಳ ಹಿಂದೆ ಸರ್ಕಾರಿ ನೌಕರರಿಗೆ ಸಿಗಬೇಕಾಗಿದ್ದ ಸೌಲಭ್ಯಗಳನ್ನು ಅತಿ ವಿಳಂಬವಾಗಿಸಿರುವದು ಸರಕಾರದ ಸಾಧನೆಯಾಗಿದೆ. ಪ್ರಪ್ರಥಮ ಬಾರಿಗೆ ರಾಜ್ಯ ಸರ್ಕಾರದ ಇತಿಹಾಸದಲ್ಲಿ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವಲ್ಲಿ ಅತಿ ಹೆಚ್ಚು ಸಮಯ ತೆಗೆದುಕೊಂಡ ಸರ್ಕಾರ ಎಂಬ ಗೌರವಕ್ಕೆ ಪಾತ್ರವಾಗಿದೆ.
ಇದೇ ಮೊದಲ ಬಾರಿಗೆ ಸಮಿತಿ ರಚನೆಯಾಗಿ ಸುಮಾರು ೧೯ ತಿಂಗಳ ನಂತರ ಜಾರಿಯಾಗುತ್ತಿರುವುದು ಸರ್ಕಾರದ ನೌಕರರ/ ಶಿಕ್ಷಕರ ಮೇಲಿನ ನಿರ್ಲಕ್ಷಕ್ಕೆ ಇದೊಂದು ಸಾಕ್ಷಿಯಾಗಿದೆ. ಇದು ಸರ್ಕಾರ ಸಾದನೆ ಎನ್ನುವಂತೆ ಬಿಂಬಿಸುತಿದ್ದು ಇದು ಸಾದನೆಯಲ್ಲ ಸರ್ಕಾರದ ಕರ್ತವ್ಯವಾಗಿದೆ.
ಈ ಶಿಫಾರಸುಗಳನ್ನು ಜಾರಿ ಮಾಡಿ ನೌಕರರ ಇತರ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಮರೆತಂತೆ ಕಾಣುತಿದ್ದು ಪ್ರಮುಖ ಬೇಡಿಕೆಯಾದ ಹಳೆ ಪಿಂಚಣಿ ಯೋಜನೆ ಜಾರಿ ಹಾಗು ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಜಾರಿಯ ಕುರಿತಂತೆ ಮಾತನಾಡದಿರುವಿದು ವಿಷಾದನೀಯ.
ರಾಜ್ಯ ಸರ್ಕಾರ ವೇತನೆ ಪರಿಷ್ಕರಣೆ ಮಾತ್ರ ಜಾರಿಗೊಳಿಸಿ, ಚುನಾವಣೆಯಲ್ಲಿ ಭರವಸೆ ನೀಡಿz ಹಳೆ ಪಿಂಚಣಿ ವ್ಯವಸ್ಥೆ ಜಾರಿಮಾಡದೆ ಜಾರಿಕೊಳ್ಳಬಾರದು ಹಾಗು ಆರ್ಥಿಕ ಹೊರೆಯಾಗದ ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯನ್ನೂ ಕೂಡಲೇ ಜಾರಿಗೊಳಿಸಬೇಕೆಂದು ಎಲ್ಲಾ ಸರ್ಕಾರಿ ನೌಕರರ ಹಾಗು ಶಿಕ್ಷಕರ ಪರವಾಗಿ ಸರ್ಕಾರವನ್ನು ಆಗ್ರಹಿಸುತ್ತೇನೆ.
ಶಶೀಲ್ ಜಿ ನಮೋಶಿ