ನ್ಯೂಸ್

ಸರ್ಕಾರಿ ಕಾರ್ನರ್ | ಪ್ರೊಬೇಷನರಿ ಅವಧಿ ಗೊಂದಲ

ದಿನದ ಪ್ರಶ್ನೆ 

ಖಾಸಗಿ ಪ್ರೌಢಶಾಲೆಯಲ್ಲಿ 2008ರಿಂದ ನಾನು ಕಾರ್ಯನಿರ್ವಹಿಸುತ್ತಿದ್ದು, ಈ ಶಾಲೆಯು 2019ರ ಫೆಬ್ರವರಿಯಲ್ಲಿ ಅನುದಾನಕ್ಕೊಳಪಟ್ಟಿರುತ್ತದೆ. ನನ್ನ ಹುದ್ದೆಯೂ ಅನುದಾನಕ್ಕೊಳಪಟ್ಟಿದ್ದು, ಈಗ ಪ್ರೊಬೇಷನರಿ ಅವಧಿ ಬಗ್ಗೆ ಗೊಂದಲಗಳಿವೆ. ನೇಮಕಾತಿ ದಿನಾಂಕದಿಂದ 2 ವರ್ಷ ಪ್ರೊಬೇಷನರಿ ಅವಧಿಯೇ? ಅಥವಾ ಅನುದಾನಕ್ಕೊಳಪಟ್ಟ ದಿನಾಂಕದಿಂದ 2 ವರ್ಷಗಳೋ?

| ಆನಂದ ಶಿವಮೊಗ್ಗ

ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆಗಳ (ನೌಕರರ ಸೇವಾ ಷರತ್ತುಗಳು) ನಿಯಮಾವಳಿ-1999ರ ಮೇರೆಗೆ ಅನುದಾನಿತ ಶಾಲೆಯಲ್ಲಿ ನೇಮಕ ಹೊಂದಿದ ನೌಕರರ ಸೇವಾ ಅವಧಿಯು ಅನುದಾನಿತ ದಿನಾಂಕದಿಂದ ಪ್ರಾರಂಭವಾಗುತ್ತದೆ. ಆದ ಕಾರಣ ನಿಮ್ಮ ಪ್ರೊಬೇಷನರಿ ಅವಧಿಯು 2019ರ ಫೆಬ್ರವರಿಯಿಂದ ಆರಂಭವಾಗಿ 2 ವರ್ಷಗಳಿರುತ್ತವೆ. ಇದಕ್ಕೆ ಕಾರಣ ಅನುದಾನವನ್ನು ಸರ್ಕಾರ ನೀಡುತ್ತಿದ್ದು, ಮೇಲಿನ ನಿಯಮಾವಳಿಯಂತೆ ಪರೀಕ್ಷಾರ್ಥ ಅವಧಿಯನ್ನು 2 ವರ್ಷ ನಿಗದಿಪಡಿಸಲಾಗುತ್ತದೆ.