ನಾನು ಮತ್ತು ನನ್ನ ಹೆಂಡತಿ 2016ರಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿದ್ದು, ನನ್ನ ಪತ್ನಿಗೆ ಕುಟುಂಬ ಯೋಜನೆ ಶಸ್ತ್ರಚಿಕಿತ್ಸೆ ಮಾಡಿಸಿದರೆ ಇಬ್ಬರಿಗೂ ವಿಶೇಷ ಬಡ್ತಿ ಲಭಿಸುತ್ತದೆಯೇ?
| ಶಿವಕುಮಾರ್ ರಾಮನಗರ
ದಿನಾಂಕ : 01-10-1985ರ ಸರ್ಕಾರಿ ಆದೇಶ ಸಂಖ್ಯೆ ಎಫ್ಡಿ 27ಎಸ್ಆರ್ಎಸ್ 85ರಂತೆ ಕುಟುಂಬ ಯೋಜನೆ ಅನುಸರಣೆಗಾಗಿ ಶಸ್ತ್ರಚಿಕಿತ್ಸೆಗೆ ಒಳಪಟ್ಟ ಪ್ರಕರಣಗಳಲ್ಲಿ ಒಂದು ವಿಶೇಷ ವೇತನ ಬಡ್ತಿಯನ್ನು ವೈಯಕ್ತಿಕ ವೇತನದ ರೂಪದಲ್ಲಿ ನೀಡಲಾಗುತ್ತದೆ. ದಿನಾಂಕ: 12-06-1986ರ ಸಮಸಂಖ್ಯೆ ಅಧಿಕೃತ ಜ್ಞಾಪನದಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಒಬ್ಬರಿಗೆ ಮಾತ್ರ ನೀಡಲಾಗುತ್ತದೆ. ಆದರೆ, ಇವರಿಬ್ಬರಲ್ಲಿ ಯಾರ ವಾರ್ಷಿಕ ವೇತನ ಬಡ್ತಿ ಹೆಚ್ಚಾಗಿದೆಯೋ ಅವರ ಈ ವಿಶೇಷ ವೇತನ ಬಡ್ತಿ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ‘ಸರ್ಕಾರಿ ಸೇವಾ ನಿಯಮಗಳು’ ಪುಸ್ತಕ ನೋಡಬಹುದು.