ಎನ್.ಆರ್.ಪುರ ತಾಲೂಕಿನ ಸೀತೂರು ಅನಂತರಾಮಉಪಾಧ್ಯ ಸಭಾಂಗಣದಲ್ಲಿ ನೂತನ ಗಾಯತ್ರಿ ವಿಪ್ರ ಮಹಿಳಾ ಬಳಗವನ್ನು ಸೀತೂರು ಮಾಜಿ ಮಂಡಲ ಪ್ರಧಾನ ಎಸ್.ಡಿ.ವಿ.ಗೋಪಾಲ ರಾವ್ ಉದ್ಘಾಟಿಸಿದರು. 
ನ್ಯೂಸ್

ಸರ್ಕಾರದಿಂದ ವಿಪ್ರರ ಕಡೆಗಣನೆ

ಎನ್.ಅರ್.ಪುರ: ಸರ್ಕಾರ, ಸಮಾಜ ಹಾಗೂ ರಾಜಕೀಯ ಪಕ್ಷಗಳು ವಿಪ್ರರನ್ನು ತಮಗೆ ಬೇಕಾದಾಗ ಬಳಸಿಕೊಂಡು ನಂತರ ಕಡೆಗಣಿಸುತ್ತಿವೆ ಎಂದು ಸೀತೂರು ಮಾಜಿ ಮಂಡಲ ಪ್ರಧಾನ ಗೋಪಾಲರಾವ್ ತಿಳಿಸಿದರು.

ಅವರು ಭಾನುವಾರ ಸೀತೂರು ಅನಂತರಾಮಉಪಾಧ್ಯ ಸಭಾಂಗಣದಲ್ಲಿ ಏರ್ಪಡಿಸಿದ್ದ ನೂತನ ಕುದುರೆಗುಂಡಿ ಗಾಯತ್ರಿ ವಿಪ್ರ ಮಹಿಳಾ ಬಳಗ ಉದ್ಘಾಟಿಸಿ ಮಾತನಾಡಿ, ಪುರಾಣ ಕಾಲದಿಂದಲೂ ಬ್ರಾಹ್ಮಣರನ್ನು ತುಳಿಯಲಾಗುತ್ತಿದೆ. ಆದರೆ ಬ್ರಾಹ್ಮಣರು ಬೇರೆ ಸಮಾಜದವರನ್ನು ಪ್ರೀತಿಯಿಂದ ಕಾಣುತ್ತಾರೆ ಎಂದರು.
ಲೇಖಕಿ ಭಾಗ್ಯಾ ನಂಜುಂಡಸ್ವಾಮಿ ಮಾತನಾಡಿ, ವೇದ, ಪುರಾಣಗಳಲ್ಲೂ ಮಹಿಳೆಗೆ ವಿಶೇಷ ಸ್ಥಾನ ಮಾನ ನೀಡಲಾಗಿದೆ. ಎಲ್ಲಿ ಸ್ತ್ರೀಯರು ನೆಲಸುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ. ಮಹಿಳೆಯು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ ಹಲವಾರು ಪಾತ್ರ ನಿರ್ವಹಿಸುತ್ತಾಳೆ. ಮನೆಗೆೆ ಸೀಮಿತವಾಗಿದ್ದ ಮಹಿಳೆ ಇಂದು ಸಮಾಜಮುಖಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯಕಾರಿಣಿ ಸದಸ್ಯ ವಿಜಯರಂಗಕೋಟೆತೋಟ ಮಾತನಾಡಿ, ಬ್ರಾಹ್ಮಣರಲ್ಲಿ ಸಂಘಟನೆ ಅತಿ ಮುಖ್ಯ. ಎಲ್ಲಾ ಕ್ಷೇತ್ರದಲ್ಲೂ ಬ್ರಾಹ್ಮಣರನ್ನು ಅವಹೇಳನ ಮಾಡಲಾಗುತ್ತಿದೆ. ಮಹಿಳೆಯರಿಗೆ ಇಂತಹ ಸಂಘಟನೆ ಉತ್ತಮ ವೇದಿಕೆಯಾಗಲಿದೆ. ನಮ್ಮ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯ ಉಳಿಸಿ ಬೆಳೆಸಬೇಕಾಗಿದೆ ಎಂದರು.
ತಾಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೊನೋಡಿ ಗಣೇಶ್ ಮಾತನಾಡಿ, ಮಹಿಳೆಯರ ಶಕ್ತಿಯಿಂದಲೇ ಇಂದು ಸಂಸ್ಕೃತಿ, ಸಂಸ್ಕಾರ ಉಳಿದಿದೆ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಹಸ್ತಾಂತರ ಮಾಡಬೇಕಾಗಿದೆ ಎಂದರು.
ಸೀತೂರು ವಿ.ಎಸ್.ಎಸ್.ಎನ್. ಅಧ್ಯಕ್ಷ ವೈ.ಎಸ್.ಸುಬ್ರಹ್ಮಣ್ಯ ಮಾತನಾಡಿ, ವಿಪ್ರ ಸಮಾಜವು ವಿಶ್ವಕ್ಕೇ ಮಾರ್ಗದರ್ಶನ ನೀಡುತ್ತಿದೆ. ನಮ್ಮ ಸಂಸ್ಕಾರ, ಸಂಸ್ಕೃತಿ ಬೆಳೆಸಬೇಕಾಗಿದೆ ಎಂದರು. ಗಾಯತ್ರಿ ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಮಮತಾ ಪ್ರಭಾಕರ್, ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕೊಪ್ಪ ತಾಲೂಕು ಸಂಚಾಲಕಿ ನಾಗರಾಜ್, ಜಯಪುರ ಗಾಯತ್ರಿ ಸ್ನೇಹಕೂಟದ ಸದಸ್ಯರಾದ ಬೆಂಡೆಹಕ್ಕಲು ಸುಧಾ ನಾರಾಯಣ್, ಕೋಟೆತೋಟ ಶುಭವಿಜಯರಂಗ, ಕಟ್ಟೆಹಕ್ಕಲು ಸಾಧನ ಸ್ನೇಹ ಕೂಟದ ಅಧ್ಯಕ್ಷೆ ಲತಾ ಶ್ರೀಕಾಂತ್, ಗಾಯತ್ರಿ ವಿಪ್ರ ಬಳಗದ ಗೌರವ ಅಧ್ಯಕ್ಷೆ ಸುಮಾ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಸುಮಾ ನಾರಾಯಣಮೂರ್ತಿ, ವಸುಂದರಾ, ರಾಘವೇಂದ್ರ, ಪಲ್ಲವಿ ಪ್ರಶಾಂತ್, ರಂಗಮಣಿ ಇದ್ದರು.