ಎನ್.ಆರ್.ಪುರದ ಗುಳದಮನೆಯಲ್ಲಿ ನಿರ್ಮಾಣವಾಗುತ್ತಿರುವ ಬಿ.ಎಸ್.ಎನ್.ಎಲ್ ಟವರ್ ನಿರ್ಮಾಣ ಕಾರ್ಯದ ಶಂಕುಸ್ಥಾಪನೆಯನ್ನು ಗ್ರಾಪಂ ಅಧ್ಯಕ್ಷೆ ಅಶ್ವಿನಿ ನೆರವೇರಿಸಿದರು. ಾ.ಯೋಹನ್ನಾನ್, ಸುನೀಲ್‌ಕುಮಾರ್, ವಾಣಿ ನರೇಂದ್ರ,ಗೌಸ್‌ಮೊಹಿಯುದ್ದೀನ್, ಸಂದೀಪ್, ಚಂದ್ರಶೇಖರ್, ಲಿಲ್ಲಿಮಾತುಕುಟ್ಟಿ, ಎಲ್ದೋ ಇದ್ದರು. 
ನ್ಯೂಸ್

ಸರ್ಕಾರದ ಸವಲತ್ತು ಎಲ್ಲರಿಗೂ ತಲುಪಲಿ

ಎನ್.ಆರ್.ಪುರ: ಸರ್ಕಾರದ ಎಲ್ಲ ಸವಲತ್ತುಗಳು ಪ್ರತಿಯೊಬ್ಬರಿಗೂ ತಲುಪುವಂತಾಗಬೇಕೆಂದು ಸೂಸಲವಾನಿಯ ಮೋರ್ ಇಗ್ನೋಷಿಯಸ್ ಚರ್ಚ್‌ನ ಧರ್ಮಗುರು ಾ.ಯೋಹನ್ನಾನ್ ತಿಳಿಸಿದರು.

ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ವಿಠಲಗ್ರಾಮದ ಗುಳದಮನೆಯಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಬಿ.ಎಸ್.ಎನ್.ಎಲ್ ಟವರ್‌ನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೊಬೈಲ್ ಇಂದು ಮನುಷ್ಯನ ಅವಿಭಾಜ್ಯ ಅಂಗವಾಗಿದೆ. ಇಂದು ಕೇವಲ ಪಟ್ಟಣ ಪ್ರದೇಶದಲ್ಲಿ ಮಾತ್ರ ಉತ್ತಮ ನೆಟ್‌ವರ್ಕ್ ದೊರಕುತ್ತಿದ್ದು ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಇಲ್ಲದೆ ಜನರು ಪರದಾಡುವಂತಾಗಿದೆ. ಗುಳದಮನೆಯಂತಹ ಗ್ರಾಮೀಣ ಭಾಗದಲ್ಲಿ 4ಜಿ ನೆಟ್‌ವರ್ಕ್‌ನ ಟವರ್ ನಿರ್ಮಾಣ ಮಾಡುತ್ತಿರುವುದು ನಿಜಕ್ಕೂ ಸಂತಸ ತಂದಿದೆ ಎಂದರು.

ಕಡಹಿನಬೈಲು ಗ್ರಾಪಂ ಸದಸ್ಯ ಚಂದ್ರಶೇಖರ್ ಮಾತನಾಡಿ, ಚುನಾವಣಾ ಸಂದರ್ಭದಲ್ಲಿ ಈ ಭಾಗದ ಜನರ ಬಹು ಬೇಡಿಕೆ ಎಂದರೆ ಟವರ್ ನಿರ್ಮಾಣದ್ದೇ ಆಗಿತ್ತು. ನಾವು ಸಂಬಂಧಪಟ್ಟ ಬಿ.ಎಸ್.ಎನ್.ಎಲ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅಧಿಕಾರಿಗಳೂ ಕೂಡ ಸ್ಪಂದಿಸಿ ಇಂದು ಟವರ್ ನಿರ್ಮಾಣಕ್ಕೆ ಕಾಲ ಕೂಡಿ ಬಂದಿದೆ ಎಂದರು.

ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ ಮಾತನಾಡಿ,ಟವರ್ ನಿರ್ಮಾಣ ಮಾಡಿದರೆ ಸಾಲದು ಸಂಬಂಧಪಟ್ಟ ಸಂಸ್ಥೆಯವರು ಅದರ ನಿರ್ವಹಣೆಯನ್ನೂ ಸಮರ್ಪಕವಾಗಿ ನಿರ್ವಹಿಸಬೇಕು. ಆಗ ಮಾತ್ರ ಟವರ್ ನಿರ್ಮಾಣ ಸಾರ್ಥಕವಾಗುತ್ತದೆ. ಎಂದು ಹೇಳಿದರು. ಈ ಸಂದರ್ಭದಲ್ಲಿ ಕಡಹಿನಬೈಲು ಗ್ರಾಪಂ ಉಪಾಧ್ಯಕ್ಷ ಸುನೀಲ್‌ಕುಮಾರ್, ಸದಸ್ಯರಾದ ಚಂದ್ರಶೇಖರ್, ಲಿಲ್ಲಿಮಾತುಕುಟ್ಟಿ, ವಾಣಿ ನರೇಂದ್ರ, ಶೈಲಾ ಮಹೇಶ್, ಕಾಂಗ್ರೆಸ್ ಮುಖಂಡ ಎಲ್ದೋ, ಮುಖ್ಯ ಶಿಕ್ಷಕಿ ಶಿಲ್ಪಾ ಕುಮಾರಿ, ಗ್ರಾಮಸ್ಥರಾದ ವಿಲ್ಸನ್, ಸಾಜು, ವಿಜು, ಮಂಜುನಾಥ್, ಅಜೇಶ್, ವನಪಾಲಕ ಸಂದೀಪ್ ಇದ್ದರು.