ನ್ಯೂಸ್

ಸರ್ಕಾರ ಸದಾ ಕಾರ್ಮಿಕರ ಪರ ಇರುತ್ತದೆ

ನಮ್ಮ ಸರ್ಕಾರ ಸದಾ ಕಾರ್ಮಿಕರ ಪರ ಇರುತ್ತದೆ ಎಂದು ಶಾಸಕ ಕೆ.ಹರೀಶ್‌ಗೌಡ ತಿಳಿಸಿದರು.

ಕಾರ್ಮಿಕ ಇಲಾಖೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ಹಾಗೂ ಮೈಸೂರು ಜಿಲ್ಲಾ ಕಟ್ಟಡ ಮತ್ತು ಇತರೆ ಕೆಲಸಗಾರರ ಸಂಘದ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಟೂಲ್ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಸಂಘಟಿಗ ಕಾರ್ಮಿಕ ವಲಯಕ್ಕೆ ಆರೋಗ್ಯ ತಪಾಸಣೆ ಸೇರಿದಂತೆ ನೋಂದಾಯಿತ ಕಾರ್ಮಿಕರಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚ, ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ, ಮದುವೆಗೆ ಧನ ಸಹಾಯ, 60 ವರ್ಷ ದಾಟಿದ ನೋಂದಾಯಿತ ಕಾರ್ಮಿಕರಿಗೆ ಪಿಂಚಣಿ ಸೌಲಭ್ಯವನ್ನು ಸರ್ಕಾರ ನೀಡುತ್ತಿದೆ. ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅವರು ಅಚ್ಚುಕಟ್ಟಾಗಿ ಖಾತೆ ನಿರ್ವಹಿಸುತ್ತಿದ್ದು, ಕಾರ್ಮಿಕರಿಗೆ ಅನೂಕೂಲ ಮಾಡುತ್ತಿದ್ದಾರೆ ಎಂದರು. ನೋಂದಣಿಯಾಗದ ಕಾರ್ಮಿಕರಲ್ಲಿ ಅರಿವು ಮೂಡಿಸಿ ಎಲ್ಲರೂ ನೋಂದಣಿ ಆಗುವಂತೆ ಮಾಡಬೇಕು ಎಂದರು.

ಕಾರ್ಮಿಕ ಇಲಾಖೆಯ ಅಧಿಕಾರಿಗಳಾದ ಚೇತನ್ ಕುಮಾರ್,ವೀಣಾ, ಜಯಣ್ಣ, ಮಾದಪ್ಪ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸಿದ್ದೇಗೌಡ, ಗೌರವ ಅಧ್ಯಕ್ಷ ನಿಂಗೇಗೌಡ, ಪದಾಧಿಕಾರಿಗಳಾದ ಸಣ್ಣಪ್ಪ, ವೆಂಕಟೇಶ್, ಪರಮೇಶ್, ಕೃಷ್ಣಪ್ಪ,ನಾಗರಾಜು, ರಾಜಗಣೇಶ್, ಕುಮಾರ್ ಇತರರಿದ್ದರು.