ನ್ಯೂಸ್

ಸರ್ಕಾರ ಬಡ್ಡಿ ಸಮೇತ ಸಾಲ ಮನ್ನಾ ಮಾಡಲಿ

ಬೆಳಗಾವಿ: ರೈತ ವಿರೋಧಿ, ವಿವಾದಿತ ಮೂರು ಕೃಷಿ ಕಾಯ್ದೆ ಹಿಂಪಡೆಯುವುದು ಹಾಗೂ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್​ಗಳಲ್ಲಿನ ರೈತರ ಸಾಲ ಬಡ್ಡಿ ಸಮೇತ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂ ಮತ್ತು ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ನಗರದಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟಿಸಿದ ರೈತರು, ಬೀಜ, ಗೊಬ್ಬರ ಬೆಲೆ ಹೆಚ್ಚಿಗೆ ಮಾಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ರೈತಾಪಿ ಜನ ಹಾಗೂ ಗ್ರಾಮೀಣ ಭಾಗದ ಜನರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿದರು.
ರಾಜ್ಯ ಮಹಿಳಾ ಉಪಾಧ್ಯಕ್ಷೆ ಶ್ರೀದೇವಿ ನಾಯ್ಕರ್​ ಮಾತನಾಡಿ, ಬೀಜ, ಗೊಬ್ಬರ ಬೆಲೆ ಹೆಚ್ಚಿಗೆ ಮಾಡಿದ್ದರಿಂದ ರೈತರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಹೀಗಾಗಿ ತಣವೇ ಬೀಜ, ಗೊಬ್ಬರ ಬೆಲೆ ಕಡಿಮೆ ಮಾಡಬೇಕು.

ಅದೇ ರೀತಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ಸವದತ್ತಿ ಸೇರಿ ಇನ್ನಿತರ ತಾಲೂಕುಗಳ ರೈತರು ಹಾಗೂ ಗ್ರಾಮೀಣ ಭಾಗದ ಜನರ ಸಮಸ್ಯೆಗಳ ಬಗೆಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು. ರಾಜ್ಯ ರೈತ ಸಂ ಮತ್ತು ಹಸಿರು ಸೇನೆಯ ಹಲವು ಪದಾಧಿಕಾರಿಗಳಾದ ಬಸವರಾಜ ಬಿಜ್ಜೂರ, ಗೌಡಪ್ಪಗೌಡ ಪಾಟೀಲ, ರಾಮನಗೌಡ ಪಾಟೀಲ, ಸಿದ್ದಪ್ಪ ಪಟ್ಟದಕಲ್ಲ, ಸುಜಾತಾ ಗೊಡಚಿ, ಭಾಗ್ಯಶ್ರೀ ಕುರಗುಂದ ಹಾಗೂ ಕೆಂಚವ್ವ ಪಾಟೀಲ ಇತರರು ಇದ್ದರು.