ನಾವು ಸರಿಯಾಗಿದ್ದರೆ ಯಾರಾದರೂ ಏಕೆ ನಮ್ಮನ್ನು ಟ್ರ್ಯಾಪ್ ಮಾಡುತ್ತಾರೆ ? ನಾವು ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿ ಸರಿಯಾಗಿ ಇರಬೇಕು ಅಷ್ಟೇ ಎಂದು ಹುಣಸೂರು ಶಾಸಕ ಜಿ.ಡಿ. ಹರೀಶ್‌ಗೌಡ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ನಾವು ಸರಿಯಾಗಿದ್ದರೆ ನಮ್ಮನ್ನು ಯಾರು ಟ್ರ್ಯಾಪ್ ಮಾಡಲಾಗುವುದಿಲ್ಲ. ನಮ್ಮ ದೃಷ್ಟಿ ಸರಿ ಇದ್ದಾಗ ಯಾವ ತಪ್ಪು ನಡೆಯೋದಿಲ್ಲ. ಸಾವಿರ ಜನ ಬಂದು ನಮ್ಮನ್ನು ಮಾತನಾಡಿಸಿದರೂ, ನಮ್ಮ ನೋಟ ಸರಿ ಇದ್ದರೆ ಏನೂ ಆಗೋದಿಲ್ಲ ಎಂದರು.
ಹನಿಟ್ರ್ಯಾಪ್ ವಿಚಾರ ಕುರಿತು ಸದನದಲ್ಲಿ ಚರ್ಚೆ ಆಗಬಾರದಿತ್ತು. ಯಾರಿಗೆ ಸಮಸ್ಯೆ ಆಗಿದೆಯೋ ಅವರು ಹೋಗಿ ದೂರು ಕೊಟ್ಟು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿತ್ತು. ಆದರೆ ಸದನದಲ್ಲಿ ಹನಿಟ್ರ್ಯಾಪ್ ವಿಚಾರವನ್ನು ಚರ್ಚೆ ಮಾಡಿ ಯುವ ಶಾಸಕರಿಗೆ ಯಾವ ಸಂದೇಶ ಕೊಟ್ಟರು? ಇದರ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದರು.