ನ್ಯೂಸ್

ಸರಗೂರಿನಲ್ಲಿ ಶಾಲಾ ಮಕ್ಕಳಿಗೆ ಸ್ವಾಗತ

ಸರಗೂರು: ಬಿರು ಬಿಸಿಲಿನ ಬೇಸಿಗೆ ರಜೆಯ ಮಜಾ ಅನುಭವಿಸಿದ್ದ ಮಕ್ಕಳು ಮತ್ತೆ ಶಾಲೆಯತ್ತ ಮರಳುತ್ತಿದ್ದಾರೆ. ಶುಕ್ರವಾರಂದು ಶಾಲಾ ತರಗತಿ ಪ್ರಾರಂಭೋತ್ಸವ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಜೆಎಸ್‌ಎಸ್ ವಿದ್ಯಾ ಸಂಸ್ಥೆ ಸ್ವಾಗತಿಸಿದ ಪರಿ ಗಮನ ಸೆಳೆಯಿತು.
ಶಾಲೆ ಮುಖ್ಯ ಶಿಕ್ಷಕ ಮಹಮದ್ ಅಜಂಪಾಷ ನೇತೃತ್ವದ ಶಿಕ್ಷಕರ ತಂಡ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಿ, ಮಕ್ಕಳಿಗೆ ಸಿಹಿ ನೀಡಿ ತರಗತಿಗೆ ಸ್ವಾಗತಿಸಿದರು. ಇದಕ್ಕಾಗಿ ಕಳೆದ 2 ದಿನಗಳಿಂದ ಸಿದ್ಧತೆ ನಡೆಸಲಾಗಿತ್ತು. ಶಾಲೆ ಮತ್ತು ಆವರಣದ ಸ್ವಚ್ಛತೆ, ಮೂಲ ಸೌಕರ್ಯಗಳ ಪರಿಶೀಲನೆ ನಡೆಸಲಾಗಿತ್ತು. ಪ್ರಾಥಮಿಕ ಮತ್ತು ಪ್ರೌಢ ಶಾಲೆ ಸೇರಿದಂತೆ ಒಟ್ಟು 1500 ಮಕ್ಕಳು ಪ್ರಾರಂಭೋತ್ಸವಕ್ಕೆ ಸಾಕ್ಷಿ ಆದರು.