ಮೈಸೂರು: ಬರೋಬ್ಬರಿ 52 ವರ್ಷಗಳ ಹಿಂದೆ ಪಾಠ ಮಾಡಿದ ಗುರುಗಳು ಹಾಗೂ ಅವರಿಂದ ಕಲಿತ ವಿದ್ಯಾರ್ಥಿಗಳು ಸಮಾಗಮವಾಗಲು ವೇದಿಕೆ ಕಲ್ಪಿಸಿದ್ದು ಗುರುವಂದನಾ ಕಾರ್ಯಕ್ರಮ.
ತಿ.ನರಸೀಪುರದ ವಿದ್ಯೋದಯ ಶಿಕ್ಷಣ ಸಂಸ್ಥೆಯಲ್ಲಿ 1971ರಿಂದ 76ರ ಅವಧಿಯಲ್ಲಿ ಪ್ರೌಢಶಾಲೆ ವಿಭಾಗದಲ್ಲಿ 8ರಿಂದ 10ನೇ ತರಗತಿ ಹಾಗೂ ಪಿಯು ಕಾಲೇಜಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯು ವ್ಯಾಸಂಗ ಮಾಡಿದ್ದ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆ ಪ್ರಯುಕ್ತ ಮೈಸೂರಿನ ನಳಪಾಕ್ ರೆಸ್ಟೋರೆಂಟ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರು ಉಪನ್ಯಾಸಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಸಮ್ಮಿಲನಗೊಂಡರು.
ಹಿರಿಯ ಗುರುಗಳಾದ ಬಿ.ಬಸವಣ್ಣ, ಪಿ.ಬಿ.ವೆಂಕಣ್ಣಯ್ಯ, ಜ್ಞಾನೇಶ್, ಕೆ.ಆರ್.ಬಸವರಾಜು, ಆರ್.ಎಸ್.ಬಸವರಾಜು, ಬಿ.ಪುರುಷೋತ್ತಮೇಗೌಡ, ಎಚ್.ಎಂ.ಶಂಕರೇಗೌಡ, ಜಿ.ಲಿಂಗಪ್ಪ, ಬಿ.ಎಲ್.ಶಿವನಂಜಪ್ಪ, ಭವಾನಿಶಂಕರ ರಾವ್ ಹಾಗೂ ಶ್ರೀಧರರಾವ್, ಎಸ್.ಪುಷ್ಪಾ ಅವರನ್ನು ಸನ್ಮಾನಿಸುವ ಮೂಲಕ ಗುರುವಂದನೆ ಸಲ್ಲಿಸಲಾಯಿತು. ಬಳಿಕ ಎಲ್ಲರೂ ಒಟ್ಟಿಗೆ ಭೋಜನ ಸವಿದರು.
ಹಳೆಯ ವಿದ್ಯಾರ್ಥಿಗಳಾದ ಎಸ್.ಮಂಜುನಾಥ ಪ್ರಸಾದ್, ಬಿ.ಶಿವಶಂಕರ್, ರಾಜಶೇಖರ್, ಆರ್.ಚೆಲುವರಾಜು, ಸುಬ್ಬನರಸಿಂಹನ್, ಜಿ.ಎಸ್.ಸುರೇಶ್, ಎಸ್.ರಘುನಂದನ್, ಟಿ.ಪಿ.ಜಗದೀಶಮೂರ್ತಿ, ಎಂ.ಸಿ.ಚೆಲುವರಾಜು, ಕೆ.ಎಂ.ಮಲ್ಲಿಕಾರ್ಜುನ ಸ್ವಾಮಿ, ಎನ್.ಪಿ.ರವಿಕುಮಾರ್, ದಿನೇಶ್, ಷಡಕ್ಷರಿ, ರಾಜಲಕ್ಷ್ಮೀ, ರಾಧಾಮಣಿ, ವೆಂಕಟಲಕ್ಷ್ಮೀ ಇದ್ದರು. ವಿದೇಶದಲ್ಲಿರುವ ಹಳೆಯ ವಿದ್ಯಾರ್ಥಿಗಳಾದ ರವಿಶಂಕರ್, ಆಶಾ ಹಾಗೂ ಪ್ರೇಮಲತಾ ಅವರು ಪರೋಕ್ಷವಾಗಿ ಗುರುವಂದನೆ ಸಲ್ಲಿಸಿದರು.
ವಯೋಸಹಜ ಅನಾರೋಗ್ಯದ ಕಾರಣ ಶಿಕ್ಷಕರಾದ ಆರ್.ಕೃಷ್ಣಮೂರ್ತಿ, ಆರ್.ಲಕ್ಷ್ಮೀಕಾಂತನ್, ಡಿ.ವಿ.ವಿಶಾಲಾಕ್ಷಿ ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು.