ನ್ಯೂಸ್

ಸಮಾನತೆಗಾಗಿ ಶ್ರಮಿಸಿದ್ದ ನಾರಾಯಣಗುರು

ಸರಗೂರು: ಸಮಾಜದಲ್ಲಿನ ಅನಾಚಾರ, ಮೌಢ್ಯತೆ, ಕಂದಾಚಾರ, ಜಾತಿ ತಾರತಮ್ಯ ತೊಡೆದು ಹಾಕಲು ಶ್ರಮಿಸಿದ್ದ ಶರಣ ಸಂತರಲ್ಲಿ ನಾರಾಯಣಗುರು ಸಹ ಒಬ್ಬರು ಎಂದು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಜಿ.ನಾಗೇಶ್ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬ ಆಚರಣೆ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಭೂಮಿ ಮೇಲೆ ಜನಿಸಿದ ಮಾನವರೆಲ್ಲೂ ಸಮಾನರು. ಇಲ್ಲಿ ಯಾರೂ ಮೇಲಲ್ಲ. ಯಾರೂ ಕೀಳಲ್ಲ’ ಎಂಬ ಸಂದೇಶವನ್ನು ನಾರಾಯಣಗುರು ಜನರಿಗೆ ತೋರಿಸಿಕೊಟ್ಟರು. ಸಣ್ಣ ವಯಸ್ಸಿನಲ್ಲಿಯೇ ವೇದ ಉಪನಿಷತ್ತು, ಪುರಾಣ ಮಹಾಕಾವ್ಯಗಳ ಕುರಿತು ಅಧ್ಯಯನ ನಡೆಸಿ ಉನ್ನತ ಜ್ಞಾನ ಪಡೆದುಕೊಂಡಿದ್ದರು. ಎಲ್ಲ ಜನಾಂಗಗಳ ಮಕ್ಕಳಿಗೆ ವಸತಿ ಶಾಲೆ ಆರಂಭಿಸಿ ಕೂಡಿ ಬಾಳುವಂತೆ ಬದುಕು ತೋರಿಸಿಕೊಟ್ಟ ಶ್ರೇಷ್ಠ ಶರಣರ ಸಂತರಲ್ಲಿ ಅಗ್ರಗಣ್ಯರು ಎಂದರು.
ತಹಸೀಲ್ದಾರ್ ಪರಶಿವಮೂರ್ತಿ ಮಾತನಾಡಿ, ನಾರಾಯಣಗುರು ಅವರು ಸರ್ವ ಜನಾಂಗದವರಿಗೂ ಸಮಾನ ಶಿಕ್ಷಣ ದೊರೆಯಬೇಕು ಎಂದು ವಯಸ್ಕರಿಗಾಗಿ ರಾತ್ರಿ ಶಾಲೆ ಆರಂಭಿಸಿದ್ದರು ಎಂದು ಸ್ಮರಿಸಿದರು.

ಪಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾರಾಮು, ಸದಸ್ಯರಾದ ಶ್ರೀನಿವಾಸ, ಚಲುವಕೃಷ್ಣ, ಶಿವಕುಮಾರ್, ನೂರಳಾಸ್ವಾಮಿ, ವರ್ತಕರ ಮಂಡಳಿ ಅಧ್ಯಕ್ಷ ಶ್ರೀನಿವಾಸ, ಮುಖಂಡರಾದ ತಿಮ್ಮಯ್ಯಗೌಡ, ನವಿಗೌಡ , ಸ್ವಾಮಿ, ರಾಮು, ನಾಗರಾಜು, ಪುಟ್ಟಹನುಮಯ್ಯ, ಎಚ್.ಕೆ.ನಾಗರಾಜು, ಪಾಪೇಗೌಡ, ಕೃಷ್ಣಪ್ಪ, ವೆಂಕಟೇಶ್, ರವಿ ಇತರರಿದ್ದರು.