ಹನಗೋಡು: ದಾರ್ಶನಿಕ, ವಿರಾಗಿ ಭಗವಾನ್ ಗೌತಮ ಬುದ್ಧರ ಆದರ್ಶಗಳನ್ನು ನಾವುಗಳು ಅಳವಡಿಸಿಕೊಳ್ಳಬೇಕು. ಅವರ ಶ್ರೇಷ್ಠ ಚಿಂತನೆಗಳು ಮುಂದಿನ ಪೀಳಿಗೆಗೂ ಮಾರ್ಗದರ್ಶನ ನೀಡುವಂತಿವೆ ಎಂದು ಚನ್ನಪಟ್ಟಣದ ಬೌದ್ಧ ಧರ್ಮ ಬಿಕ್ಕು ಸಾರಿಪುಟ್ಟ ಸ್ವಾಮೀಜಿ ತಿಳಿಸಿದರು.
ಹನಗೋಡು ಹೋಬಳಿ ಮುತ್ತರಾಯನ ಹೊಸಳ್ಳಿ ಕಾವಲು ಗ್ರಾಮದಲ್ಲಿ ಶನಿವಾರ ಭಗವಾನ್ ಗೌತಮ ಬುದ್ಧರ ಬುದ್ಧ ಪೂರ್ಣಿಮೆಯಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.
ಬುದ್ಧನ ಆದರ್ಶಗಳು, ಅಹಿಂಸಾ ತತ್ವ, ಸಾಮರಸ್ಯದ ಸಂದೇಶಗಳು ಚಿರ ನೂತನ. ಮಾನವೀಯತೆಯ ಸಂಕೇತಗಳು ಇಡೀ ವಿಶ್ವಕ್ಕೆ ಅನ್ವಯವಾಗಲಿವೆ. ಬುದ್ಧ ಸಮಾನತೆ, ಪ್ರೀತಿ, ದಯೆ, ಸಹಿಷ್ಣುತೆಯ ಪ್ರತೀಕ. ಸೌಹಾರ್ದ, ಸಹಾನುಭೂತಿಯಿಂದ ಸಮಾಜಕ್ಕಾಗಿ ಸೇವೆ ಮಾಡುವ ಸ್ಫೂರ್ತಿಯನ್ನು ನೀಡಿದ್ದಾರೆ ಎಂದು ಸ್ಮರಿಸಿದರು.
ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ದಮ್ಮ ದೀಪೋತ್ಸವದಲ್ಲಿ ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಜ್ಞಾನೋದಯ ಶಾಕ್ಯ ಸಂಘದ ಅಧ್ಯಕ್ಷ ಕಿರಂಗೂರು ಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಚ್. ಕೆ . ಗೋವಿಂದರಾಜು ಹೈರಿಗೆ, ಶಿವರಾಜು ಕಿರಂಗೂರು ಮತ್ತು ಮುತ್ತುರಾಯನ ಹೊಸಳ್ಳಿ ಗ್ರಾಮದ ಮಾಜಿ ಗ್ರಾಪಂ. ಸದಸ್ಯ ಬಸವರಾಜು, ತೇಜಶ್ವಿನಿ, ನಾಗರಾಜು, ಆನಂದ ಎಂ.ಎನ್, ಪರಮೇಶ್ವರಯ್ಯ, ಕಾವಲುಮರಿಯಯ್ಯ, ಎಚ್.ಎಸ್.ಪ್ರಜ್ವಲ್, ಶ್ರೀಕಂಠ, ಲೋಕೇಶ್, ಚಂದು, ರವಿಚಂದ್ರ, ಆದಿತ್ಯ, ಸಮರ್ಥ್, ಸುಮಂತ್, ಮಧುಕುಮಾರ್, ಹರೀಶ್, ಪ್ರಸನ್ನ, ಮಂಜು ಎಂ.ಕೆ. ಮಂಜುನಾಥ, ಶರತ್ ಹಾಗೂ ಗ್ರಾಮದ, ಮಹಿಳೆಯರು, ಶಾಲಾ ಮಕ್ಕಳು ಭಾಗವಹಿಸಿದ್ದರು.