ಹುಣಸೂರು ತಾಲೂಕು ಮಾದಳ್ಳಿಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಮಹರ್ಷಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ದ್ವಾವಪ್ಪನಾಯಕ, ರಾಘು ಇತರರಿದ್ದರು. 
ನ್ಯೂಸ್

ಸಮಾಜದಲ್ಲಿ ದುಷ್ಟಶಕ್ತಿಗಳ ವಿಜೃಂಭಣೆ

ಹುಣಸೂರು: ಕೌಟುಂಬಿಕ ಜೀವನ ಹೇಗೆ ಸಾಗಬೇಕೆಂಬುದನ್ನು ವಾಲ್ಮೀಕಿ ತಮ್ಮ ರಾಮಾಯಣದ ಮೂಲಕ ವಿಶ್ವಕ್ಕೆ ತೋರಿಸಿಕೊಟ್ಟರು. ರಾಮರಾಜ್ಯದ ಪರಿಕಲ್ಪನೆನ್ನು ಗಾಂಧೀಜಿ ಜನರ ಮನದಲ್ಲಿ ಬಿತ್ತಿದರು. ಆದರೆ ಇಂದಿಗೂ ನಾವು ಇದ್ಯಾವುದನ್ನೂ ಅನುಸರಿಸುವ ಗೋಜಿಗೆ ಹೋಗಿಲ್ಲ ಎಂದು ಶಾಸಕ ಎಚ್.ಪಿ.ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಮಾದಳ್ಳಿಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಸಮಾರಂಭವನ್ನು ಶಾಸಕ ಎಚ್.ಪಿ.ಮಂಜುನಾಥ್ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ದುಷ್ಟಶಕ್ತಿಗಳ ವಿಜೃಂಭಣೆ ನಡೆದಿದೆ. ಮಹನಿಯರ ಜಯಂತಿ ನಮ್ಮ ಬಾಳಿಗೆ ದಾರಿದೀಪವಾಗಬೇಕಿದೆ. ಆಗ ಮಾತ್ರ ಜಯಂತಿ ಆಚರಣೆಗೆ ಸಾರ್ಥಕತೆ ಸಿಗುತ್ತದೆ ಎಂದರು.

ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀಸಾಂಬಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ಬನ್ನಿಕುಪ್ಪೆ ಗ್ರಾಪಂ ಅಧ್ಯಕ್ಷೆ ಬೇಬಿ ದ್ಯಾವಪ್ಪ, ಸದಸ್ಯ ರಾಘುನಾಯಕ, ಮುಖಂಡರಾದ ದ್ವಾವಪ್ಪನಾಯಕ, ಅಣ್ಣಯ್ಯನಾಯಕ, ನಿಲುವಾಗಿಲು ಪ್ರಭಾಕರ್, ಕಲ್ಕುಣಿಕೆ ಮಯೂರ, ರಾಘು ಇತರರು ಹಾಜರಿದ್ದರು.