ಬಾಳೆಹೊನ್ನೂರಿನ ಎಸ್‌ಜೆಆರ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕೆ.ಆರ್.ಭೂದೇಶ್ ಮಾತನಾಡಿದರು. ಪ್ರಶಾಂತ್‌ಕುಮಾರ್, ರಾಕೇಶ್, ನಟರಾಜ್‌ನಾಯ್ಕ, ಸುಜಾತಾ ಇದ್ದರು. 
ನ್ಯೂಸ್

ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖ

ಬಾಳೆಹೊನ್ನೂರು: ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಎಸ್‌ಜೆಆರ್ ಪಿಯು ಕಾಲೇಜಿನ ಪ್ರಾಚಾರ್ಯ ಕೆ.ಆರ್.ಭೂದೇಶ್ ಹೇಳಿದರು.

ಪಟ್ಟಣದ ಎಸ್‌ಜೆಆರ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜಘಾತಕ ಶಕ್ತಿಗಳಾಗುವ ಜನರನ್ನು ಸಂಸ್ಕಾರವಂತ ಪ್ರಜೆಗಳಾಗಿ ಬದಲಾಯಿಸುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶ, ಅವರು ಶಿಕ್ಷಕ ವೃತ್ತಿ ಮೇಲೆ ಹೊಂದಿದ್ದ ಪ್ರೀತಿ ಹಾಗೂ ಸಮಾಜವನ್ನು ಉತ್ತಮ ಮಾರ್ಗದೆಡೆಗೆ ಸಾಗಲು ಶಿಕ್ಷಕರು ಹೊಂದಿರುವ ಪಾತ್ರದ ಬಗ್ಗೆ ನಾವು ತಿಳಿದುಕೊಳ್ಳಬೇಕಿದೆ. ಪ್ರತಿ ವಿದ್ಯಾರ್ಥಿಯೂ ಅಕ್ಷರವನ್ನು ಕಲಿಸಿದ ಗುರುವಿನ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿರಬೇಕು ಎಂದರು.

ಉಪನ್ಯಾಸಕರಾದ ಎಸ್.ಎಸ್.ಪ್ರಶಾಂತ್‌ಕುಮಾರ್, ಕೆ.ಎಂ.ರಾಕೇಶ್, ಶಿಕ್ಷಕರಾದ ನಟರಾಜ್‌ನಾಯ್ಕ, ಸುಜಾತಾ, ಉಮಾಶಂಕರ್ ಮತ್ತಿತರರಿದ್ದರು.