ನ್ಯೂಸ್

ಸಮರ ನಿಲ್ಲಲಿ ಶಾಂತಿ ನೆಲೆಸಲಿ; ಬ್ರಿಕ್ಸ್ ಸಭೆಯಲ್ಲಿ ಮೋದಿ ನೆರವಿನ ಹಸ್ತ

ಕಝಾನ್: ರಷ್ಯಾ-ಯೂಕ್ರೇನ್ ಯುದ್ಧ ಶಾಂತಿಯುತ ಆಗಿ ಬಗೆಹರಿಸಬೇಕೆಂದು ಪುನಃ ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಆ ನಿಟ್ಟಿನಲ್ಲಿ ಎಲ್ಲ ಸಹಕಾರ ನೀಡಲು ಭಾರತ ಸಿದ್ಧವಿದೆ ಎಂದು ಹೇಳಿದ್ದಾರೆ.

16ನೇ ಬ್ರಿಕ್ಸ್ ಶೖಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾದ ಕಝåಾನ್​ಗೆ ಆಗಮಿಸಿರುವ ಮೋದಿ, ಮಂಗಳವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಜತೆ ನಡೆಸಿದ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತದ ಸಹಾಯ ಹಸ್ತವನ್ನು ಚಾಚಿದರು. ಈ ವಲಯದಲ್ಲಿ ಆದಷ್ಟು ಬೇಗ ಶಾಂತಿ ಮತ್ತು ಸ್ಥಿರತೆ ಮರಳುವುದಕ್ಕೆ ಭಾರತ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಟಿವಿಯಲ್ಲಿ ಪ್ರಸಾರವಾದ ಮಾತುಕತೆಯ ಆರಂಭದಲ್ಲಿ ಮೋದಿ ಭರವಸೆ ನೀಡಿದರು. ಕಳೆದ ಮೂರು ತಿಂಗಳಲ್ಲಿ ರಷ್ಯಾಕ್ಕೆ ತಮ್ಮ ಎರಡನೇ ಭೇಟಿ, ಉಭಯ ದೇಶಗಳ ನಡುವಿನ ನಿಕಟ ಸಮನ್ವಯ ಹಾಗೂ ಆಳವಾದ ವಿಶ್ವಾಸದ ದ್ಯೋತಕವಾಗಿದೆ ಎಂದು ಮೋದಿ ವ್ಯಾಖ್ಯಾನಿಸಿದರು.

ರಷ್ಯಾ ಯೂಕ್ರೇನ್ ಸಮಸ್ಯೆಯ ಎಲ್ಲ ಮಗ್ಗಲು ಗಳೊಂದಿಗೆ ನಾವು ಸಂಪರ್ಕ ಇಟ್ಟುಕೊಂಡಿದ್ದೇವೆ. ಎಲ್ಲ ಸಂಘರ್ಷಗಳನ್ನು ಮಾತುಕತೆಯಿಂದ ಬಗೆಹರಿಸ ಬೇಕೆಂಬುದು ನಮ್ಮ ದೖಢ ನಿಲವಾಗಿದೆ. ಸಂಘರ್ಷಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕೆಂಬುದು ಭಾರತದ ನಂಬಿಕೆಯಾಗಿದೆ ಎಂದು ಪ್ರತಿಪಾದಿಸಿದರು.

ನಮ್ಮ ಎಲ್ಲ ಪ್ರಯತ್ನಗಳು ಮಾನವತೆಗೆ ಆದ್ಯತೆ ನೀಡುತ್ತವೆ ಎಂದು ಪಿಎಂ ಹೇಳಿದರು. ಉಭಯ ದೇಶಗಳ ನಡುವಿನ ವಾಣಿಜ್ಯ ವಹಿವಾಟಿನಲ್ಲಿ ‘ಉತ್ತಮ ಪರಿಸ್ಥಿತಿ ಇದೆ’ ಎಂದು ಈ ಸಂದರ್ಭದಲ್ಲಿ ಪುತಿನ್ ಹೇಳಿದರು.

ಅಭಿನಂದನೆ: ಬ್ರಿಕ್ಸ್ ಕೂಟದ ಅಧ್ಯಕ್ಷತೆ ರಷ್ಯಾ ಯಶಸ್ವಿಯಾಗಿ ನಿರ್ವಹಿಸಿದ್ದಕ್ಕೆ ಪುತಿನ್ ಅವರನ್ನು ಮೋದಿ ಅಭಿನಂದಿಸಿದರು. ಇನ್ನೂ ಹಲವು ದೇಶಗಳು ಬ್ರಿಕ್ಸ್ ಸೇರಲು ಕಾತರವಾಗಿವೆ ಎಂದರು.

ಎರಡನೇ ಭೇಟಿ: ಮೋದಿ ರಷ್ಯಾಕ್ಕೆ ಈ ವರ್ಷ ನೀಡಿದ ಎರಡನೇ ಭೇಟಿ ಇದಾಗಿದೆ. 22ನೇ ಭಾರತ-ರಷ್ಯಾ ವಾರ್ಷಿಕ ಶೖಂಗಸಭೆಯಲ್ಲಿ ಪಾಲ್ಗೊಳ್ಳಲು ಅವರು ಜುಲೈನಲ್ಲಿ ಮಾಸ್ಕೋಗೆ ಬಂದಿದ್ದರು.

ರಾಜತಾಂತ್ರಿಕ ಗೆಲುವು: ಬ್ರಿಕ್ಸ್ ಶೖಂಗಸಭೆಗೆ ದೇಶ ಆತಿಥ್ಯ ವಹಿಸಿರುವುದು ಒಂದು ದೊಡ್ಡ ರಾಜತಾಂತ್ರಿಕ ಗೆಲವಾಗಿದೆ ಎಂದು ರಷ್ಯಾ ವರ್ಣಿಸಿದೆ. ಯೂಕ್ರೇನ್ ಜತೆಗಿನ ಸಂಘರ್ಷ: ಬ್ರಿಕ್ಸ್ ಶೖಂಗಸಭೆಯ ಭಾಗವಾಗಿ ಕಝåಾನ್​ನಲ್ಲಿ ರಷ್ಯಾ ವ್ಯವಸ್ಥೆಗೊಳಿಸಿರುವ ದ ಹಿನ್ನೆಲೆಯಲ್ಲಿ ರಷ್ಯಾವನ್ನು ಪ್ರತ್ಯೇಕಿಸುವ ಏಕಾಂಗಿಗೊಳಿಸುವ ಪಾಶ್ಚಿಮಾತ್ಯರ ಪ್ರಯತ್ನಗಳು ಸೋತಿರುವುದನ್ನು ಇದು ತೋರಿಸುತ್ತದೆ ಎಂದು ಹೇಳಿದೆ.

ನಗೆಗಡಲಲ್ಲಿ ಮೋದಿ...: ಮೋದಿಪುತಿನ್ ಮುಖಾಮುಖಿ ಮಾತುಕತೆ ವೇಳೆ ರಷ್ಯಾ ಅಧ್ಯಕ್ಷರು ಹೇಳಿದ ಮಾತೊಂದು ಭಾರತದ ಪ್ರಧಾನಿ ನಗೆಗಡಲಲ್ಲಿ ಮುಳುಗುವಂತೆ ಮಾಡಿತು. ‘ನಮ್ಮ ಬಾಂಧವ್ಯ ಹೇಗಿದೆಯೆಂದರೆ, ನನ್ನ ಮಾತುಗಳು ಅರ್ಥವಾಗಲು ನಿಮಗೆ ಅನುವಾದದ ಅಗತ್ಯವೇ ಇಲ್ಲ’ ಎಂದು ಪುತಿನ್ ಹೇಳಿದಾಗ ಮೋದಿ ನಕ್ಕರು. ಇದಕ್ಕೂ ಮುನ್ನ, ಮೋದಿಯನ್ನು ತಬ್ಬಿಕೊಂಡು ಹಸ್ತಲಾಘವ ನೀಡಿ ಪುತಿನ್ ಬರ ಮಾಡಿಕೊಂಡರು.

36 ವಿಶ್ವ ನಾಯಕರಿಗೆ ಆತಿಥ್ಯ: ಬ್ರಿಕ್ಸ್ ಶೖಂಗಸಭೆಯ ಭಾಗವಾಗಿ ಕಝåಾನ್​ನಲ್ಲಿ ರಷ್ಯಾ ವ್ಯವಸ್ಥೆಗೊಳಿಸಿರುವ ಸಭೆಯೊಂದರಲ್ಲಿ ವಿಶ್ವ ಸಂಸ್ಥೆ ಮಹಾ ಕಾರ್ಯದರ್ಶಿ ಅಂತೋನಿಯೋ ಗುಟೆರಸ್ ಭಾಗವಹಿಸುವ ಖಾತರಿ ಇಲ್ಲದಿದ್ದರೂ ಭಾರತ, ಚೀನಾ ಮತ್ತು ಇರಾನ್ ಸಹಿತ 36 ರಾಷ್ಟŠಗಳ ಮುಖಂಡರಿಗೆ ಆತಿಥ್ಯ ನೀಡಿ, ರಷ್ಯಾ ಶಕ್ತಿ ಪ್ರದರ್ಶನ ಮಾಡಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಮಾಸ್ಕೋವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಪಾಶ್ಚಿಮಾತ್ಯರಿಗೆ ಈ ಮೂಲಕ ಸಾರಿದೆ. ಯೂಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಪುತಿನ್ ಅವರನ್ನು ಯುದ್ಧಾಪರಾಧಿ ಎಂದು ಘೋಷಿಸಬೇಕೆನ್ನುವುದು ಪಾಶ್ಚಿಮಾತ್ಯರ ಆಗ್ರಹವಾಗಿದೆ.

ಇಸ್ಕಾನ್ ಕೖಷ್ಣ ಭಕ್ತರಿಂದ ಭಜನೆಯ ಸ್ವಾಗತ: ಬ್ರಿಕ್ಸ್ ಶೖಂಗಕ್ಕಾಗಿ ಕಝåಾನ್​ಗೆ ಆಗಮಿಸಿದ ಪ್ರಧಾನಿ ಮೋದಿಯನ್ನು ಸಂಸ್ಕೃತ ಸ್ವಾಗತ ಗೀತೆ, ರಷ್ಯನ್ ನೖತ್ಯ ಮತ್ತು ಇಸ್ಕಾನ್ ಭಕ್ತರಿಂದ ಕೖಷ್ಣ ಭಜನೆ ಮೊದಲಾದ ವಿಶೇಷತೆಗಳ ಮೂಲಕ ಬರಮಾಡಿಕೊಳ್ಳಲಾಯಿತು. ಹೋಟೆಲ್ ಕೊರ್​ಸ್ಟನ್​ನಲ್ಲಿ ಭಾರತೀಯ ಸಮುದಾಯದವರು ತ್ರಿವರ್ಣ ಧ್ವಜ ಪ್ರದರ್ಶಿಸಿ ಹಾಗೂ ಘೋಷಣೆಗಳನ್ನು ಕೂಗಿ ಮೋದಿಯನ್ನು ಸ್ವಾಗತಿಸಿದರು.