ಕಾಲಹರಣ ಮಾಡದೇ ಪ್ರಜ್ಞಾವಂತರಾಗಿ ಸಮಯದ ಸದುಪಯೋಗ ಮಾಡಿಕೊಳ್ಳಬೇಕು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ಎ.ಶೇಖರ್ ಕಿವಿಮಾತು ಹೇಳಿದರು.
ನಗರದ ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಕಾಲೇಜು ವತಿಯಿಂದ ಶನಿವಾರ ಆಯೋಜಿಸಿದ್ದ ವಿದ್ಯಾರ್ಥಿ ವೇದಿಕೆ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಬ್ಬರ ಪ್ರತಿಭೆಗೆ ಅಂತಃಸತ್ವ ಮಾನದಂಡವೆ ವಿನಃ ಧರ್ಮ, ಜಾತಿ, ಪ್ರಾಂತ, ಲಿಂಗ ಅಥವಾ ಭಾಷೆ ಅಲ್ಲ. ವಿದ್ಯಾರ್ಥಿಗಳಲ್ಲಿ ಪ್ರತಿಭೆ ಹುಟ್ಟಲು ಬುದ್ಧಿ ಹಾಗೂ ಪ್ರಜ್ಞೆ ಅತ್ಯವಶ್ಯಕ. ಪ್ರತಿಭೆ ಅಂದರೆ ಗಣಿತದಲ್ಲಿ ಸ್ಮಾರ್ಟ್ ಆಗಿರುವುದು ಎಂದು ಹೆಚ್ಚಿನವರು ತಿಳಿದಿದ್ದಾರೆ. ಆದರೆ ಸಾಹಿತ್ಯ, ಸಂಗೀತ, ಕ್ರೀಡೆ,ನಾಟಕ, ಸಿನಿಮಾ ಇವೆಲ್ಲವೂ ಬೇಕು ಎಂದರು.
ಗಿಡವೊಂದು ಮೇಲು ಮುಖವಾಗಿ ಬೆಳೆಯುವುದಕ್ಕಿಂತ ಭೂಮಿಯೊಳಗೆ ಆಳವಾಗಿ ಬೇರು ಬಿಡುವುದರಿಂದ ಅದು ಹೆಚ್ಚು ಗಟ್ಟಿಯಾಗಿ ಉಳಿಯಲು ಸಾಧ್ಯ ಎಂದರು.
ಶಾರದಾ ವಿಲಾಸ ಶೈಕ್ಷಣಿಕ ಸಂಸ್ಥೆಗಳ ಕಾರ್ಯದರ್ಶಿ ಆರ್. ನರಸಿಂಹ, ಆಡಳಿತ ಮಂಡಳಿ ಹಿರಿಯ ಸದಸ್ಯ ಎಸ್.ಎಲ್ ರಾಮಚಂದ್ರ, ಪ್ರಾಂಶುಪಾಲರಾದ ಡಾ.ಎಂ.ದೇವಿಕಾ ಇದ್ದರು.