ಶ್ರೀ ಬಾಲಮುರಳಿ ಮ್ಯೂಸಿಕಲ್ ಗ್ರೂಪ್ ವತಿಯಿಂದ ಬುಧವಾರ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಮಧುರ ಗೀತೆಗಳ ಸುಮಧುರ ಸಂಜೆ ಕರೋಕೆ ಗಾಯನ ಕಾರ್ಯಕ್ರಮ ನಡೆಯಿತು.
ಉದ್ಯಮಿ ನಾಗರಾಜ್ ಗರ್ಗೇಶ್ವರಿ, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪಾಲಿಕೆ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ ಮುಖ್ಯ ಅತಿಥಿಗಳಾಗಿದ್ದರು.
ಶ್ರೀಧರ್ ಮತ್ತು ತಂಡದವರು ತಮ್ಮ ಅತ್ಯುತ್ತಮ ಗಾಯನದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇಂತಹ ಗಾಯಕರಿಗೆ ಪ್ರೋತ್ಸಾಹ ನೀಡಬೇಕು. ನಾನು ಕೂಡ ನನ್ನ ಕೈಲಾದ ಸಹಾಯ ಮಾಡುವೆ ಎಂದು ಉದ್ಯಮಿ ನಾಗರಾಜ್ ಗರ್ಗೇಶ್ವರಿ ಹೇಳಿದರು. ಈ ತಂಡದಲ್ಲಿ ಒಬ್ಬರಿಗಿಂತ ಒಬ್ಬರು ಚೆನ್ನಾಗಿ ಹಾಡುತ್ತಾರೆ ಎಂದು ಪ್ರಕಾಶ್ ಕ್ಯಾತನಹಳ್ಳಿ ಶ್ಲಾಘಿಸಿದರು.
ನಾದಬ್ರಹ್ಮ ಸಭಾಂಗಣದಲ್ಲಿ ಎಲ್ಲ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಸಭಿಕರು ಅತ್ಯುತ್ತಮ ಬೆಂಬಲ ನೀಡುತ್ತಿದ್ದಾರೆ ಎಂದು ಎಂ.ಡಿ. ಪಾರ್ಥಸಾರಥಿ ಹೇಳಿದರು.
ಕೆ.ಐ. ಪ್ರಕಾಶ್, ಜಿ. ಶ್ರೀಧರ್, ನೀತು ಉಮೇಶ್, ಪಲ್ಲವಿ ಪೈ, ಐ.ಪಿ. ಭುವನ್, ಐ.ಪಿ. ಯಶಸ್ ಅವರು ಡಾ.ರಾಜ್‌ಕುಮಾರ್, ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ, ಅಶ್ವತ್ಥ್, ಮೈಸೂರು ಅನಂತಸ್ವಾಮಿ ಹಾಡಿರುವ ಗೀತೆಗಳನ್ನು ಪ್ರಸ್ತುತಪಡಿಸಿದರು. ಕೆ.ಜಿ. ವೆಂಕಟೇಶ್ ಕಾರ್ಯಕ್ರಮ ನಿರೂಪಿಸಿದರು.
ಕರುನಾಡ ತಾಯಿ, ಕನ್ನಡ ರೋಮಾಂಚನವಿದು, ಹಾಲಿನ ಹೊಳೆಯೊ, ನಿನ್ನ ನಗುವು ಹೂವಂತೆ, ಒಂದೇ ಒಂದು ಕಣ್ಣ ಬಿಂದು, ನಗಿಸಲು ನೀನು, ಆನಂದ ಪರಮಾನಂದ, ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ಮೊದಲಾದ ಗೀತೆಗಳು ಸಭಿಕರ ಗಮನ ಸೆಳೆದವು.