ಉಪಾಸನ ಪೌಂಡೇಷನ್ ವತಿಯಿಂದ ಮನೋಶಕ್ತಿ ಕಾರ್ಯಾಗಾರವು ನ್ಯೂಸಯ್ಯಾಜಿರಾವ್ ರಸ್ತೆಯ ರಿಯೋ ಮೆರಿಡಿಯನ್ ಸಭಾಂಗಣದಲ್ಲಿ ಭಾನುವಾರ ಜರುಗಿತು.
ಬೆಂಗಳೂರು ಉಪಾಸನ ಫೌಂಡೇಷನ್ ಸಂಸ್ಥಾಪಕರಾದ ಸದ್ಗುರು ಶ್ರೀ ರಾಮ ಅವರು ಕಾರ್ಯಾಗಾರ ಉದ್ಘಾಟಿಸಿ, ಮಾತನಾಡಿದರು.
ಸಂಕಲ್ಪದ ಸರಿಯಾದ ಕ್ರಮ, ಸುಪ್ತವಾದ ಮನೋಶಕ್ತಿಯನ್ನು ಜಾಗೃತಗೊಳಿಸುವುದು ಹೇಗೆ?, ಶ್ವಾಸಕ್ರಿಯೆ, ವಿಶ್ವಾಕರ್ಷಣ ಧ್ಯಾನವಿಧಿ, ಮುದ್ರೆ, ಗುರಿಯ ನಿರ್ಣಯ, ನಿರ್ಣಯಿಸಿದ ಗುರಿಯನ್ನು ತಲುಪುವ ಹಾದಿ, ಭಾವನೆ ಹಾಗೂ ಬದುಕನ್ನು ಯಾವ ರೀತಿ ದೃಢಪಡಿಸುವುದು- ಇವೇ ಮೊದಲಾದ ವಿಚಾರಗಳನ್ನು ಅವರು ತಿಳಿಸಿಕೊಟ್ಟರು.
ಕ್ರಿಯಾಯೋಗ, ಸಂವಹನ ತಂತ್ರ, ಶಕ್ತಿ ಕ್ರಿಯಾ, ಕುಂಡಲಿನಿ ದೀಕ್ಷೆ, ದೇವಿ ಸಾಧನಾ ದೀಕ್ಷೆಯನ್ನು ಕೂಡ ವಿವರಿಸಿದರು.
ಹಿರಿಯ ಪತ್ರಕರ್ಕ ಅಂಶಿ ಪ್ರಸನ್ನಕುಮಾರ್, ಪರಮಹಂಸ ಯೋಗ ಮಹಾವಿದ್ಯಾಲಯದ ಗುರೂಜಿ ಎಂ.ಎಸ್. ಶಿವಪ್ರಕಾಶ್ ಮುಖ್ಯ ಅತಿಥಿಗಳಾಗಿದ್ದರು.
ಚೇತನಾ, ಸಂಗೀತಾ, ಗುರು, ಕಾವಶ್ರೀ ಮೊದಲಾದವರು ಇದ್ದರು. ಸುಳ್ಯ ದೀಪಾಂಜಲಿ ಮಹಿಳಾ ಸಮಾಜದವರು ಭಜನೆ, ಗುರುವಂದನೆ ನಡೆಸಿಕೊಟ್ಟರು.
ಮೈಸೂರು ನಗರದಲ್ಲಿ ಇದೇ ಪ್ರಥಮ ಬಾರಿಗೆ ನಡೆದ ಈ ಕಾರ್ಯಾಗಾರದಲ್ಲಿ ನೂರಾ ಮಂದಿ ಪಾಲ್ಗೊಂಡಿದ್ದರು.