ವಿಜಯವಾಣಿ ಸುದ್ದಿಜಾಲ ಕೋಲಾರ
ತಾಲೂಕಿನ ಲಕ್ಷಿö್ಮÃಸಾಗರ ಗ್ರಾಮದಲ್ಲಿ ಕೆಸಿವ್ಯಾಲಿ ಯೋಜನೆಯ ನೀರಿನಿಂದಾಗಿ ನಾನಾ ಸಮಸ್ಯೆಗಳು ಎದುರಾಗುತ್ತಿವೆ ಎಂದು ಗ್ರಾಮಸ್ಥರು ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು ಭಾರತೀಯ ವಿಜ್ಞಾನ ಸಂಸ್ಥೆಯವರೊAದಿಗೆ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ, ಸ್ಥಳದಲ್ಲೇ ನೀರಿನ ಗುಣಮಟ್ಟ ಪರಿಶೀಲಿಸಿ ಯಾವುದೇ ತೊಂದರೆಯಿಲ್ಲವೆAದು ಗ್ರಾಮಸ್ಥರಿಗೆ ಮನವರಿಕೆ ಮಾಡುವ ಕೆಲಸ ಮಾಡಲಾಯಿತು.
ಬುಧವಾರ ಬೆಳ್ಳಿಗ್ಗೆ ಸಣ್ಣ ನೀರಾವಾರಿ ಸಚಿವರು ಹಾಗೂ ಎಂ.ಎಲ್.ಸಿ. ಅನಿಲ್ ಕುಮಾರ್ ಭೇಟಿ ನೀಡಿದರು. ಕೆಸಿವ್ಯಾಲಿ ಯೋಜನೆಯ ನೀರು ಗ್ರಾಮ ಮೂಲಕ ಕೆರೆಗೆ ರಾಜಕಾಲುವೆಯ ಮೂಲಕ ಹೋಗುತ್ತಿರುವುದರಿಂದ ಗ್ರಾಮದಲ್ಲಿ ಸೊಳ್ಳೆಗಳ ಕಾಟ, ಸಾಂಕ್ರಾಮಿಕ ರೋಗದ ಭೀತಿ, ತರಕಾರಿಗಳಿಗೆ ವಿವಿಧ ರೋಗ ಮತ್ತಿತರ ಸಮಸ್ಯೆಗಳು ಎದುರಾಗುತ್ತಿದ್ದು, ಇದಕ್ಕೆಲ್ಲ ಕೆಸಿವ್ಯಾಲಿ ಯೋಜನೆಯ ನೀರು ಕಾರಣ ಎಂದು ಕೆಲವು ಗ್ರಾಮಸ್ಥರು ಆರೋಪಿಸಲು ಮುಂದಾದರು. ಗ್ರಾಮದವರೇ ಆದ ಗ್ರಾ.ಪಂ. ಸದಸ್ಯ ಶಂಕರ್ ಮತ್ತು ಬಸವರಾಜು ಕೆ.ಸಿ.ವ್ಯಾಲಿ ನೀರಿನಿಂದ ಯಾವುದೇ ರೀತಿಯ ತೊಂದರೆಯಾಗಿಲ್ಲ. ಕೆಲವರು ರೈತ ಮುಖಂಡರೆAದು ಹೇಳಿಕೊಂಡು ನಮ್ಮ ಗ್ರಾಮಕ್ಕೆ ಬಂದು ಮಾಧ್ಯಮಗಳನ್ನು ಕರೆತಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ನೀರು ಬಂದ ನಂತರ ಅಂತರ್ಜಲ ವೃದ್ಧಿಯಾಗಿದೆ. ಗ್ರಾಮದ ಹೊರ ವಲಯದಲ್ಲಿ ಹಸಿರುಮಯವಾಗಿದೆ. ಧನಕರುಗಳಿಗೆ ಮೇವು ಸಿಗುತ್ತಿದೆ ಎಂದರು.
ಕೆಸಿವ್ಯಾಲಿ ಯೋಜನೆಗೆ ಸಂಬAಧಿಸಿದAತೆ ಕಾಲುವೆಯು ಗ್ರಾಮದಲ್ಲಿ ಹಾದು ಹೋಗಿದ್ದು, ಯೋಜನೆಯಿಂದಾಗಿ ದೇಶದಲ್ಲೇ ನಮ್ಮ ಗ್ರಾಮಕ್ಕೆ ಹೆಸರು ಬಂದಿದೆ, ಆದರೆ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಹಿನ್ನೆಲೆಯಲ್ಲಿ ಹಸುಗಳು ಹಾಗೂ ಮಕ್ಕಳು ತೊಂದರೆಗೆ ಸಿಲುಕುವಂತಾಗಿದ್ದು, ಆಕಸ್ಮಿಕವಾಗಿ ಬಿದ್ದರೆ ಪ್ರಾಣಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಚಿವ ಎನ್.ಎಸ್.ಭೋಸರಾಜು ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಯೋಜನೆಗೆ ಸಂಬAಧಿಸಿದAತೆ ಜನರಿಗೆ ತೊಂದರೆಯಾದಾಗ ಸರಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಗ್ರಾಮಸ್ಥರಿಗೆ ನೀರಿನಿಂದ ಯಾವುದೇ ಸಮಸ್ಯೆಯಿಲ್ಲವೆಂದು ಮನವರಿಕೆ ಮಾಡಿಕೊಟ್ಟಿದ್ದಾಗಿದೆ. ಕಾಲುವೆ ಸುತ್ತಲೂ ಫಿನ್ಸಿಂಗ್, ಮೆಷ್ ಅಳವಡಿಕೆ ಹಾಗೂ ಕಾಲುವೆಯಲ್ಲಿನ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛವಾಗಿಸಲು ತ್ವರಿತವಾಗಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಕೆರೆಗಳಿಗೆ ತ್ಯಾಜ್ಯ ಸೇರದಂತೆ ಸರಕಾರದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದ ಅವರು, ೩ನೇ ಹಂತದ ಶುದ್ಧೀಕರಣಕ್ಕೆ ಸರ್ಕಾರದೊಂದಿಗೆ ಚರ್ಚಿವುದಾಗಿ ಹೇಳಿದರು.
ಕೆ.ಸಿ.ವ್ಯಾಲಿ ನೀರಿಗೆ ಬೇಡಿಕೆ ಹೆಚ್ಚಾಗಿದೆ. ತುಮಕೂರಿನವರು ಕೇಳುತ್ತಿದ್ದಾರೆ. ನಮಗೆ ಬೇಡ ಎಂದರೆ ತಮಿಳುನಾಡಿನಿಂದಲೂ ಬೇಡಿಕೆ ಹೆಚ್ಚಾಗಿದೆ. ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡರು ನಮಗೂ ಬೇಕು ಎಂದು ಕೇಳುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯವರು ಕೇಳುತ್ತಿದ್ದಾರೆ ನಿಮಗೆ ಈ ನೀರು ಬೇಕೇ ಬೇಡವೇ ಎಂದಾಗ ನೀರು ನಮಗೆ ಬೇಕೇ ಬೇಕು ಇದರಿಂದ ಯಾವುದೇ ಸಮಸ್ಯೆಯಿಲ್ಲ. ಕೆಲವರು ವಿನಾ ಕಾರಣ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ. ಗ್ರಾಮದಲ್ಲಿ ಆದುಹೋಗುವ ಕಾಲುವೆಗೆ ಫೆನ್ಸಿಂಗ್ ಹಾಕಿ ಭದ್ರಪಡಿಸಿಕೊಡಿ ಎಂದು ಗ್ರಾಮಸ್ಥರು ತಿಳಿಸಿದರು.
ಎಂಎಲ್ಸಿ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಕೆಸಿವ್ಯಾಲಿ ನೀರು ಹರಿಯದಿರುವ ಮುಳಬಾಗಲು, ಕೆಜಿಎಫ್ ಸೇರಿದಂತೆ ವಿವಿಧ ಭಾಗಗಳಲ್ಲಿಯೂ ಟೊಮೇಟೊಗೆ ರೋಗ ಬರುತ್ತಿದೆ. ಸೀಡ್, ನೆಲ ಮತ್ತಿತರ ಕಾರಣಗಳಿಂದ ರೋಗ ಬರುತ್ತಿದ್ದರೆ ಕೆಸಿವ್ಯಾಲಿ ಯೋಜನೆ ಮೇಲೆ ಆರೋಪ ಮಾಡುವುದು ಸರಿಯಲ್ಲ. ಟೊಮೇಟೊ ರೋಗಕ್ಕೂ ಕೆಸಿವ್ಯಾಲಿ ಯೋಜನೆಗೂ ಯಾವುದೇ ಸಂಬAಧವಿಲ್ಲ ಎಂದು ಹೇಳಿದರು. ಇದೇ ನೀರನ್ನು ಶುದ್ಧೀಕರಿಸದೆಯೇ ತಮಿಳುನಾಡು ಭಾಗದಲ್ಲಿ ವ್ಯವಸಾಯಕ್ಕೆ ಬಳಸುತ್ತಿದ್ದಾರೆ, ಅಲ್ಲಿ ಯಾವ ಸಮಸ್ಯೆಯೂ ಇಲ್ಲ. ಹೀಗಾಗಿ ವಿನಾಕಾರಣ ಆರೋಪ ಸರಿಯಲ್ಲ ಎಂದರು.
ಬಾಕ್ಸ್
ಇಎಚ್‌ಎಸ್‌ಆರ್ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯವರೊAದಿಗೆ ಭೇಟಿ ನೀಡಿ, ಸ್ಥಳದಲ್ಲೇ ಹಲವು ಉಪಕರಣಗಳನ್ನು ಬಳಸಿ ಕಾಲುವೆ ಹಾಗೂ ಗ್ರಾಮದ ಬಾವಿಯೊಂದರಲ್ಲಿನ ನೀರಿನ ಗುಣಮಟ್ಟವನ್ನು ಪರಿಶೀಲಿಸಿದಾಗ, ಅಂತಹ ಯಾವುದೇ ರೀತಿಯ ಲಕ್ಷಣಗಳು ಕಂಡುಬರುತ್ತಿಲ್ಲ. ನೀರು ಉತ್ತಮವಾಗಿದೆ ಎಂದು ಧೃಢೀಕರಿಸಿದರು. ಆಗ ಸಚಿವರು, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿ, ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಟ್ಟರು.
ಬಾಕ್ಸ್
ಇದೇ ವೇಳೆ ಹಾಜರಿದ್ದ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಅನಂತ್, ಕೆಸಿವ್ಯಾಲಿ ಯೋಜನೆಯಡಿ ತುಂಬಿರುವ ಕೆರೆಗಳಲ್ಲಿ ೧.೫ ಕೋಟಿ ಮೀನುಮರಿ ಬಿಟ್ಟಿದ್ದು, ಉತ್ತಮವಾಗಿ ಬೆಳವಣಿಗೆಯಾಗಿವೆ. ಕಲ್ಕತ್ತಾದಲ್ಲಿ ಮಾರಾಟ ಮಾಡುತ್ತಿದ್ದು, ಯಾವುದೇ ತೊಂದರೆಯಾಗಿಲ್ಲ. ಎಲ್ಲಿಯೂ ಸಹ ಮೀನುಗಳು ಮೃತಪಟ್ಟಿಲ್ಲವೆಂದು ಸ್ಪಷ್ಟಪಡಿಸಿದರು.
ಬಾಕ್ಸ್
ಕೆ.ಸಿ.ವ್ಯಾಲಿ ನೀರಿನಿಂದಾಗಿ ಸಂಜೆ ೫.೩೦ರ ಬಳಿಕ ಸೊಳ್ಳೆಗಳ ಕಾಟ ವಿಫರೀತವಾಗುತ್ತದೆ. ಈ ನೀರಿನಿಂದಾಗಿ ಅಂತರ್ಜಲ ಅಭಿವೃದ್ಧಿ ಬಿಟ್ಟರೆ ಬೇರೆ ಯಾವುದಕ್ಕೂ ಉಪಯೋಗವಾಗುತ್ತಿಲ್ಲ. ನಮಗೆ ಕಾವೇರಿ ಅಥವಾ ಮೇಕೆದಾಟು ನೀರನ್ನಾದರೂ ನೀಡಿದರೆ ಅನುಕೂಲವಾಗುತ್ತದೆಂದು ಗ್ರಾಮದ ಮುಖಂಡರಾದ ಮಂಜುನಾಥ್ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಕ್ಕಲೇರಿ ಗ್ರಾಪಂ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಕಾಂಗ್ರೆಸ್ ಮುಖಂಡ ಸೀಸಂದ್ರ ಗೋಪಾಲಗೌಡ ಸಣ್ಣ ಮಾಜಿ ಇಲಾಖೆಯ ಎಇ ಹರಿಕೃಷ್ಣ ಮತ್ತಿತರರಿದ್ದರು.
ಚಿತ್ರ ೨೦ ಕೆ.ಎಲ್.ಆರ್. ೦೨ : ಲಕ್ಷಿö್ಮÃಸಾಗರ ಗ್ರಾಮದಲ್ಲಿ ಹಾದುಹೋಗುವ ಕೆ.ಸಿ.ವ್ಯಾಲಿ ಕಾಲುವೆಯನ್ನು ವೀಕ್ಷಿಸುತ್ತಿರುವ ಸಚಿವ ಭೋಸರಾಜು.
ಚಿತ್ರ ೨೦ ಕೆ.ಎಲ್.ಆರ್. ೦೨ಎ : ಸಚಿವ ಭೋಸರಾಜು ರವರು ಕೆ.ಸಿ.ವ್ಯಾಲಿ ನೀರಿನ ಗುಣಮಟ್ಟವನ್ನು ಸ್ಥಳದಲ್ಲಿಯೇ ಇಎಚ್‌ಎಸ್‌ಆರ್ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯವರು ನಡೆಸಿದ ಪ್ರಯೋಗದಲ್ಲಿ ಗುಣಮಟ್ಟವನ್ನು ಸಾರ್ವಜನಿಕರಿಗೆ ತೋರಿಸುತ್ತಿರುವ ಸಚಿವ ಭೋಸರಾಜು.