ತಿ.ನರಸೀಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮೀಣ ದಸರಾ ಕಾರ್ಯಕ್ರಮದ ಆಹ್ವಾನ ಪಟ್ಟಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನು ಕೈ ಬಿಡಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ತಹಶೀಲ್ದಾರ್ ಸಿ.ಜೆ.ಗೀತಾ ಅವರನ್ನು ತರಾಟೆಗೆ ತೆಗೆದುಕೊಂಡರು. 
ನ್ಯೂಸ್

ಸಚಿವರ ಹೆಸರನ್ನು ಕೈಬಿಟ್ಟಿದ್ದಕ್ಕೆ ವಿರೋಧ

ತಿ.ನರಸೀಪುರ: ಗ್ರಾಮೀಣ ದಸರಾ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೆಸರನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ತಹಸೀಲ್ದಾರ್ ಸಿ.ಜೆ.ಗೀತಾ ರವರನ್ನು ಬಿಜೆಪಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.


ಪಟ್ಟಣದ ಗುಂಜಾ ನರಸಿಂಹಸ್ವಾಮಿ ದೇವಸ್ಥಾನದ ಮುಂಭಾಗ ದಸರಾ ಸ್ತಬ್ಧ ಚಿತ್ರಗಳ ಮೆರವಣಿಗೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಸಿದ್ಧತೆ ಸಂದರ್ಭ ಈ ಪ್ರಸಂಗ ನಡೆಯಿತು.


ಸಿ.ಜೆ.ಗೀತಾ ಅವರನ್ನು ಸುತ್ತುವರಿದ ಪುರಸಭಾ ಸದಸ್ಯರಾದ ಎಸ್.ಕೆ. ಕಿರಣ್, ಎನ್.ಲೋಕೇಶ್, ಅಕ್ಕಿ ನಂಜುಂಡಸ್ವಾಮಿ, ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಹಿರಿಯೂರು ಪರಶಿವಮೂರ್ತಿ ಅವರು ಸಚಿವರಿಗೆ ಅವಮಾನವಾದ ಕಾರಣ ಈ ದಸರಾ ಕಾರ್ಯಕ್ರವೇ ನಮಗೆ ಬೇಡ ಎಂದು ಕಿಡಿಕಾರಿದರು.
ಇದರಿಂದ ವಿಚಲಿತರಾದ ತಹಸೀಲ್ದಾರ್, ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡಿಲ್ಲ.


ತಪ್ಪೆಸಗಿರುವವರಿಗೆ ನೋಟಿಸ್ ನೀಡುತ್ತೇನೆ ಎಂದು ಮುಖಂಡರಿಗೆ ತಿಳಿಸಿದರು. ನಂತರದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮುಖಂಡರು ಅನುವು ಮಾಡಿಕೊಟ್ಟರು.