ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ಸದ್ದು ಮಾಡುತ್ತಿದ್ದು, ಸಚಿವರ ಕಾರ್ಯ ವೈಖರಿಯ ಬಗ್ಗೆ ಮೌಲ್ಯಮಾಪನ ನಡೆಸಿ ಕೆಲವರನ್ನು ಕೈಬಿಟ್ಟು ಹೊಸಬರನ್ನು ಸೇರಿಸಿಕೊಳ್ಳುವ ಕೂಗು ಎದ್ದಿರುವುದರಿಂದ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಶಾಸಕರಾಗಿ ಆಯ್ಕೆ ಆಗಿರುವ ನಾಲ್ಕು ಜನ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿ ಲಾಬಿ ನಡೆಸುತ್ತಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ೪ ಜನ ಕಾಂಗ್ರೇಸ್ ಶಾಸಕರು ಇದ್ದರೂ ಸಚಿವ ಸ್ಥಾನಕ್ಕೆ ಜಿಲ್ಲೆಯ ಶಾಸಕರಿಗೆ ಸಿಗದೆ ಹೊರಗಿನವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿರುವುದರಿಂದ ಜಿಲ್ಲೆಯ ಜನರಲ್ಲಿ ಅಸಮಾಧಾನವೂ ಉಂಟಾಗಿದೆ. ಜಿಲ್ಲೆಯಿಂದ ಆಯ್ಕೆ ಆಗಿರುವ ಶಾಸಕರಲ್ಲಿಯು ಅಸಮಾಧಾನ ಉಂಟಾಗುವAತೆ ಮಾಡಿದೆ.
ಸರ್ಕಾರ ರಚನೆಯಾದ ಸಂದರ್ಭದಲ್ಲಿ ಕೋಲಾರ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗುತ್ತದೆಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಯಿತು.ಪ್ರಾರಂಭದಲ್ಲಿ ೩ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಸ್.ಎನ್.ನಾರಾಯಣಸ್ವಾಮಿ ಹಾಗೂ ೨ ಬಾರಿ ಶಾಸಕರಾಗಿ ಆಯ್ಕೆ ಆಗಿರುವ ರೂಪಶಶಿಧರ್ ಮತ್ತು ಕೆ.ವೈ.ನಂಜೇಗೌಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು.
ಎಸ್.ಎನ್.ನಾರಾಯಣಸ್ವಾಮಿಗೆ ನಿಗಮ ಮಂಡಳಿ ಸ್ಥಾನ ನೀಡಿ, ಸಮಾಧಾನ ಪಡಿಸಿದ್ದರು. ಈಗ ರಾಜ್ಯದಲ್ಲಿ ಸಂಪುಟ ಪುನರ್ ರಚನೆಗೆ ಸದ್ದು ಮಾಡುತ್ತಿರುವುದರಿಂದ ಜಿಲ್ಲೆಯ ಶಾಸಕರೊಬ್ಬರಿಗೆ ಮಂತ್ರಿ ಸ್ಥಾನ ದೊರೆಯುತ್ತದೆಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ ಇದ್ದಾರೆ.
ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಈಗಾಗಲೇ ಮಾಧ್ಯಮಗಳ ಬಳಿ ಸಚಿವ ಸಂಪುಟ ಪುನರ್ ರಚನೆಯಾದಲ್ಲಿ ನನಗೆ ಸಚಿವ ಸಿಗುತ್ತದೆಂದು ಹೇಳಿಕೊಂಡಿದ್ದಾರೆ. ಎ.ಐ.ಸಿ.ಸಿ. ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನನಗೆ ಮಾತು ಕೊಟ್ಟಿದ್ದಾರೆ. ನನಗೆ ಸಚಿವ ಸ್ಥಾನ ಸಿಗುತ್ತದೆಂಬ ಆಶಾಭಾವನೆಯಲ್ಲಿ ಎಸ್.ಎನ್.ನಾರಾಯಣಸ್ವಾಮಿ ಇದ್ದಾರೆ.
ಸಚಿವರ ಮೌಲ್ಯಮಾಪನ ನಡೆಸಿದರೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪನವರನ್ನು ಸಚಿವ ಸಂಪುಟದಿAದ ಕೈಬಿಡುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರಗಳು ನಡೆಯುತ್ತಿದ್ದು, ಸಮುದಾಯದ ಆಧಾರದ ಮೇಲೆ ಮುನಿಯಪ್ಪನವರನ್ನು ಕೈಬಿಟ್ಟರೆ ಅವರ ಪುತ್ರಿ ರೂಪಶಶಿಧರ್ ರವರಿಗೆ ಸಚಿವ ಸ್ಢಾನವನ್ನು ಸಿಗಲಿದೆ. ಕಳೆದ ಬಾರಿ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದೆ. ಮೌನವಾಗಿದ್ದ ರೂಪಶಶಿಧರ್ ಈ ಬಾರಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಕಳೆದ ಬಾರಿ ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿದ್ದರು. ಈ ಬಾರಿಯಾದರೂ ಅವಕಾಶ ಸಿಗಲಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಬಳಿ ಮನವಿ ಮಾಡಿದ್ದಾರೆ. ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಬೇಡಿಕೆ ಇಟ್ಟಿದ್ದಾರೆ. ಮುಖ್ಯಮಂತ್ರಿಗಳಿಗೆ ನಂಜೇಗೌಡರು ಆಪ್ತರು ಆಗಿದ್ದಾರೆ. ಸಚಿವ ಸ್ಥಾನ ನೀಡಿದರೆ ಜಿಲ್ಲೆಯಲ್ಲಿ ವಕ್ಕಲಿಗ ಸಮುದಾಯ ಹೆಚ್ಚಾಗಿರುವುದರಿಂದ ಸಮುದಾಯದವರನ್ನು ಪಕ್ಷಕ್ಕೆ ಸೆಳೆಯಲು ಅನುಕೂಲ ಆಗುತ್ತದೆ ಎಂಬ ಬೇಡಿಕೆಯನ್ನು ಅವರು ಇಟ್ಟಿದ್ದಾರೆ.
ಸಚಿವ ಸ್ಥಾನ ತಾನಾಗಿಯೇ ಬರಬೇಕು. ಹುಡುಕಿ ಹೋಗಬಾರದು ಎಂದು ಕಳೆದ ಬಾರಿ ಮೌನಕ್ಕೆ ಶರಣಾಗಿದ್ದ ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಅಹಿಂದ ಜನಾಂಗದ ಕೋಟಾದಲ್ಲಿ ನನಗೆ ಸಚಿವ ಸ್ಥಾನ ನೀಡಲಿ. ಅಹಿಂದ ಸಮುದಾಯದಿಂದ ಕೋಲಾರ ಜಿಲ್ಲೆಯಿಂದ ನಾನೊಬ್ಬನೇ ಶಾಸಕನಾಗಿ ಆಯ್ಕೆ ಆಗಿರುವುದು. ಕೋಲಾರ ಜಿಲ್ಲಾ ಕೇಂದ್ರವಾಗಿರುವುದರಿAದ ಕೋಲಾರಕ್ಕೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯವನ್ನು ಕೊತ್ತೂರು ಮಂಜುನಾಥ್ ಮಾಡುತ್ತಿದ್ದಾರೆ.
ಸಚಿವರ ಮೌಲ್ಯಮಾಪನ ನಡೆಸಿ ಕೆಲವರನ್ನು ಕೈಬಿಡುವ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಚಿಂತಾಮಣಿ ಶಾಸಕ ಎಂ.ಸಿ.ಸುಧಾಕರ್ ರವರು ಹೆಸರು ಇರುವುದರಿಂದ ಚಿಕ್ಕಬಳ್ಳಾಪುರ ಜಿಲ್ಲೆಗೆ ಸಚಿವ ಸ್ಥಾನ ನೀಡುವುದಾದರೆ ಬಾಗೇಪಲ್ಲಿಯ ಶಾಸಕ ಸುಬ್ಬಾರೆಡ್ಡಿ ಇದ್ದಾರೆ. ಕೋಲಾರದಲ್ಲಿ ೪ ಜನ ಶಾಸಕರು ಸಚಿವ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ.
ಚಿತ್ರ ೨೮ ಕೆ.ಎಲ್.ಆರ್. ೦೧ : ಕೊತ್ತೂರು ಮಂಜುನಾಥ್ ರವರ ಭಾವಚಿತ್ರ
ಚಿತ್ರ ೨೮ ಕೆ.ಎಲ್.ಆರ್. ೦೧ಎ : ರೂಪಶಶಿಧರ್ ರವರ ಭಾವಚಿತ್ರ
ಚಿತ್ರ ೨೮ ಕೆ.ಎಲ್.ಆರ್. ೦೧ಬಿ : ಎಸ್.ಎನ್.ನಾರಾಯಣಸ್ವಾಮಿ ರವರ ಭಾವಚಿತ್ರ
ಚಿತ್ರ ೨೮ ಕೆ.ಎಲ್.ಆರ್. ೦೧ಸಿ : ಕೆ.ವೈ.ನಂಜೇಗೌಡ ರವರ ಭಾವಚಿತ್ರ