ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಅಭಿನಂದಿಸಲಾಯಿತು. ಎಚ್.ಸಿ.ಮಂಜುನಾಥ್ ಇದ್ದರು. 
ನ್ಯೂಸ್

ಸಚಿವ ಮಹದೇವಪ್ಪ ಕೊಡುಗೆ ಅಪಾರ

ಸರಗೂರು: ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿ ಬಳಗದ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕು ಘಟಕದಿಂದ ಶಾಸಕ ಅನಿಲ್ ಚಿಕ್ಕಮಾದು ಅವರನ್ನು ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಅನಿಲ್ ಚಿಕ್ಕಮಾದು, ತಾಲೂಕಿನ ಅಭಿವೃದ್ಧಿಗೆ ಪೂರಕವಾಗಿ ಈ ಸಂಘಟನೆ ಹೆಮ್ಮರವಾಗಿ ಬೆಳೆಯಬೇಕಿದೆ. ಜ್ಯಾತ್ಯತೀತ ನಾಯಕ ಮಹದೇವಪ್ಪ ಅವರು ಐದು ಬಾರಿ ಶಾಸಕರಾಗಿ, ಮೂರು ಬಾರಿ ಸಚಿವರಾಗಿ ರಾಜ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ಅಭಿಮಾನಿ ಬಳಗದ ಅಧ್ಯಕ್ಷ ಎಚ್.ಸಿ.ಮಂಜುನಾಥ್ ಮಾತನಾಡಿದರು. ಗೌರವಾಧ್ಯಕ್ಷ ಚಿಕ್ಕವೀರನಾಯಕ, ಜಿಪಂ ಮಾಜಿ ಸದಸ್ಯರಾದ ನಂದಿನಿ ಚಂದ್ರಶೇಖರ್, ಭಾಗ್ಯಲಕ್ಷ್ಮೀ ನಿಂಗರಾಜು, ಬಿ.ವಿ.ಬಸವರಾಜು, ಬೋವಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಮು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೋಟೆ ಶಿವಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಡಿ.ಪಿ.ನಟರಾಜು, ತಾಪಂ ಮಾಜಿ ಸದಸ್ಯ ಗಿರಿಗೌಡ, ನಾಯಕ ಸಮಾಜದ ತಾಲೂಕು ಅಧ್ಯಕ್ಷ ಶಂಭುಲಿಂಗ ನಾಯಕ, ಮುಖಂಡರಾದ ನಾಗರಾಜು, ಮುಜಾಹಿದ್ದೀನ್, ವಿಜಯ್ ಕುಮಾರ್,ರಂಗಸ್ವಾಮಿ, ತಿಮ್ಮಶೆಟ್ಟಿ ಇತರರಿದ್ದರು.