ಬೋರಗಾಂವ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕಬ್ಬು ಬೆಳೆಗಾರರ ಸಂಕಲ್ಪ ಸಭೆಯಲ್ಲಿ ಸ್ವಾಭಿಮಾನಿ ರೈತ ಸಂಟನೆ ಅಧ್ಯ ರಾಜು ಶೆಟ್ಟಿ ಮಾತನಾಡಿದರು. ಸಾವಕರ ಮಾದನಾಯಿಕ, ಅಜಿತ ಪೂಜಾರಿ, ರಮೇಶ ಮಾಲಗಾವೆ, ತಾತ್ಯಾಸಾಹೇಬ ಬಸನ್ನವರ ಇತರರಿದ್ದರು. 
ನ್ಯೂಸ್

ಸಕ್ಕರೆ ಕಾರ್ಖಾನೆಗಳು 400 ರೂ. ನೀಡಲಿ

ಬೋರಗಾಂವ: ಜಾಗತಿಕ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಏರಿಕೆಯಾಗಿದೆ. ಸಕ್ಕರೆ ಕಾರ್ಖಾನೆಗಳು ಎರಡನೆಯ ಕಂತಿನಲ್ಲಿ ರೈತರ ಖಾತೆಗೆ ಟನ್​ಗೆ 400 ರೂ. ಜಮಾ ಮಾಡಬೇಕು. ಸೆ.13ರಂದು ಕೊಲ್ಲಾಪುರದ ಸಕ್ಕರೆ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಸ್ವಾಭಿಮಾನಿ ರೈತ ಸಂಟನೆ ಅಧ್ಯ ರಾಜು ಶೆಟ್ಟಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಬ್ಬು ಬೆಳೆಗಾರರ ಸಂಕಲ್ಪ ಸಭೆಯಲ್ಲಿ ಅವರು ಮಾತನಾಡಿದರು. ಬೆಳಗಾವಿ ಜಿಲ್ಲೆಯ ಹಲವು ಸಕ್ಕರೆ ಕಾರ್ಖಾನೆಗಳು ಎ್​ಆರ್​ಪಿ ಪ್ರಕಾರ ದರ ನೀಡಲು ಹಿಂದೇಟು ಹಾಕುತ್ತಿವೆ. ಹಂಗಾಮು ಆರಂಭವಾದಾಗ 3100 ರೂ. ಇದ್ದ ಸಕ್ಕರೆ ಬೆಲೆ ಈಗ 3700ರಿಂದ 3900 ರೂ.ಗೆ ಏರಿಕೆಯಾಗಿದೆ. ಹೀಗಾಗಿ ಕಾರ್ಖಾನೆಗಳಿಗೆ 600 ರಿಂದ 800 ರೂಪಾಯಿ ಹೆಚ್ಚಿಗೆ ಸಿಗುತ್ತಿದೆ. ಇದರಲ್ಲಿ ಎರಡನೇ ಕಂತಾಗಿ 400 ರೂಪಾಯಿ ರೈತರಿಗೆ ಪಾವತಿಸಬೇಕು. 2ನೇ ಕಂತು ನೀಡಬೇಕು ಎಂದು ಸೆ.13 ರಂದು ಕೊಲ್ಲಾಪುರದಲ್ಲಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ರಾಜ್ಯ ಹಸಿರು ಸೇನೆ ರಾಜ್ಯಾಧ್ಯ ಗಣೇಶ ಇಳೆಗೇರ ಮಾತನಾಡಿ, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಎ್​ಆರ್​ಪಿ ನೀಡುವಂತೆ ಸುವರ್ಣ ವಿಧಾನಸೌಧದತ್ತಯ ಪಾದಯಾತ್ರೆ ನಡೆಸುವುದಾಗಿ ತಿಳಿಸಿದರು.

ರಾಜ್ಯ ಸಂಚಾಲಕ ಬಾಬುರಾವ ಪಾಟೀಲ, ಭಮುರ್ ಚಿಮೂಡ, ಸಾವಕರ ಮಾದನಾಯಿಕ, ದಾರಿಖಾನ್​ ಅಜ್ಜ, ಅಜಿತ ಪೂಜಾರಿ, ರಾಮಚಂದ್ರ ಫಿರಗನ್ನವರ, ಕಾಶಪ್ಪ ಜಾಂಬೋಗಿ, ಬಂಡು ಪಾಟೀಲ, ಬಂಡು ಬೋಧಲೆ, ತಾತ್ಯಾಸಾಹೇಬ ಬಸಣ್ಣವರ, ರಮೇಶ ಮಾಲಗಾವೆ ಇತರರಿದ್ದರರು.