ನಂಜನಗೂಡು: ಪದವೀಧರರಿಗೆ ಹಣಕಾಸು ನೆರವು ನೀಡಿ ಆರ್ಥಿಕವಾಗಿ ಮೇಲೆತ್ತುವ ಉದ್ದೇಶದಿಂದ ಸಹಕಾರ ಸಂಘ ಸ್ಥಾಪಿಸಲಾಗಿದ್ದು, ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿಸಬೇಕು ಎಂದು ನಂಜನಗೂಡು ತಾಲೂಕು ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಜಿ.ಎಸ್.ಶೇಖರಪ್ಪ ಹೇಳಿದರು.
ನಗರದ ಭಾರತ್ ವಿಕಾಸ್ ಶಾಲೆಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಂಘದ 6ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಪದವೀಧರರ ಅಭಿವೃದ್ಧಿ ದೃಷ್ಟಿಯಿಂದ ಸ್ಥಾಪಿತವಾದ ಸಂಘವು ಆರಂಭದಲ್ಲಿ ಸದಸ್ಯರಿಗೆ ಹತ್ತು ಸಾವಿ ರೂ.ನೀಡುತ್ತಿತ್ತು. ಇದೀಗ ಹಂತ ಹಂತವಾಗಿ ಸಾಲದ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ಪ್ರಸ್ತುತ ಒಂದು ಲಕ್ಷ ರೂ.ವರೆಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ ಎಮದು ತಿಳಿಸಿದರು.
ಸಂಘವು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಪದವೀಧರರ ಪ್ರತಿಭಾವಂತ ಮಕ್ಕಳನ್ನು ಪ್ರೊತ್ಸಾಹಿಸುತ್ತಿದೆ ಎಂದರು.
2021-22ನೇ ಸಾಲಿನ ವಾರ್ಷಿಕ ಮಹಾಸಭೆಯ ನಡಾವಳಿಯನ್ನು ಸಂಘದ ಕಾರ್ಯದರ್ಶಿ ಎಚ್.ಎಂ.ಕವಿತಾ ಸಭೆಗೆ ಮಂಡಿಸಿದರು. ಇದೇ ಸಂದರ್ಭದಲ್ಲಿ 2023-24ನೇ ಸಾಲಿನ ಆಯವ್ಯಯ ಮಂಡನೆಗೆ ಅನುಮೋದನೆ ಪಡೆಯಲಾಯಿತು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ಮಕ್ಕಳನ್ನು ಪುರಸ್ಕರಿಸಲಾಯಿತು
ಭಾರತ್ ವಿಕಾಸ್ ಶಾಲೆ ಅಧ್ಯಕ್ಷ ಬಿ.ಯೋಗೀಶ್, ಸಂಘದ ಉಪಾಧ್ಯಕ್ಷ ಕೆ.ಟಿ.ಸತ್ಯನಾರಾಯಣಸ್ವಾಮಿ, ನಿರ್ದೇಶಕರಾದ ಆರ್.ಶಿವಪ್ರಕಾಶ್, ಎಸ್.ಬಿ.ಪರಶಿವಮೂರ್ತಿ, ಎನ್.ಎಸ್.ಕವಿತಾ, ಎಚ್.ಕೆ.ಸವಿತಾ, ದಯಾನಂದ, ಎಸ್.ವಿಜಯ್‌ಕುಮಾರ್, ಟಿ.ಎನ್.ಶ್ರೀಕಂಠಮೂರ್ತಿ, ಎಸ್.ಶಿವಸ್ವಾಮಿ, ಎಸ್.ಲಕ್ಷ್ಮಿಕಾಂತ್, ಡಿ.ಆನಂದ್‌ರಾಜ್, ಸುಧೀಂದ್ರ, ಎನ್.ಸಿ.ನಂಜಪ್ಪ, ಕಾರ್ಯದರ್ಶಿ ಎಚ್.ಎಂ.ಕವಿತಾ, ಪಿಗ್ಮಿ ಕಲೆಕ್ಟರ್ ಎಂ.ಪ್ರದೀಪ್ ಉಪಸ್ಥಿತರಿದ್ದರು.