ಕುಡಚಿ: ಸಹಕಾರಿ ಸಂಘಗಳಲ್ಲಿ ಶೂನ್ಯ ಬಡ್ಡಿದರದಲ್ಲಿ ಸಿಗುವ ಸಾಲಸೌಲಭ್ಯದ ಸದ್ಬಳಕೆಯಿಂದ ಆರ್ಥಿಕವಾಗಿ ಸದೃಢರಾಗಬೇಕು ಎಂದು ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಹೇಳಿದರು.
ಸಮೀಪದ ಖೇಮಲಾಪುರ ಗ್ರಾಮದ ಜನತಾ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಲ್ಲಿ ಹೊಸ ಸದಸ್ಯರಿಗೆ ಶೂನ್ಯ ಬಡ್ಡಿ ಯೋಜನೆಯಡಿ ಸೋಮವಾರ ೪.೫ ಕೋಟಿ ರೂ. ಸಾಲ ವಿತರಿಸಿ ಮಾತನಾಡಿದರು. ಇಲ್ಲಿಯ ವರೆಗೆ ಸಂಘಕ್ಕೆ ೧೨.೭ ಕೋಟಿ ರೂ. ರೈತರಿಗೆ ಸಾಲ ನೀಡಲಾಗಿದೆ. ಕಡಿಮೆ ಬಡ್ಡಿಯಲ್ಲಿ ಟ್ರ‍್ಯಾಕ್ಟರ್, ಪೈಪ್‌ಲೈನ್, ಹೈನುಗಾರಿಗೆ ಸಾಲವನ್ನು ನೀಡಲಾಗಿದೆ. ಸಕಾಲಕ್ಕೆ ಸಾಲ ಮರುಪಾವತಿಸಿ ಸಹಕರಿಸಬೇಕು ಎಂದರು.
ಖೇಮಲಾಪುರ ಪಿಕೆಪಿಎಸ್ ಅಧ್ಯಕ್ಷ ಮಹಾದೇವ ಕಡಕಬಾವಿ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಸಾಹೇಬ ಕುಲಗೂಡೆ ಎಕರೆಗೆ ೪೦ ಲಕ್ಷ ರೂ. ಸಾಲ ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ತಾಲೂಕು ನಿಯಂತ್ರಣಾಧಿಕಾರಿ ಶಿವಾನಂದ ಪಾಟೀಲ ಮಾತನಾಡಿದರು. ಬಿಡಿಸಿಸಿ ಬ್ಯಾಂಕ್ ಹಾರೂಗೇರಿ ಶಾಖೆ ವ್ಯವಸ್ಥಾಪಕ ಮಲ್ಲಿನಾಥ ಸವದಿ, ಬ್ಯಾಂಕ್ ನಿರೀಕ್ಷಕ ಮಹಾಲಿಂಗ ಮರಡಿ, ಸಂಘದ ಅಧ್ಯಕ್ಷ ಮಹಾದೇವ ಖಡಕಬಾವಿ ಇತರರಿದ್ದರು.