ನ್ಯೂಸ್

ಸಂಶೋಧನಾ ವಿಧಾನ ಕಾರ್ಯಾಗಾರ ಸಮಾರೋಪ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ಸಹಯೋಗದಲ್ಲಿ ಮುಕ್ತ ವಿವಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಹತ್ತು ದಿನಗಳ ‘ಸಮಾಜ ವಿಜ್ಞಾನದ ಸಂಶೋಧನಾ ವಿಧಾನ’ ಕಾರ್ಯಾಗಾರದ ಸಮಾರೋಪ ಸಮಾರಂಭ ಶುಕ್ರವಾರ ನೆರವೇರಿತು.

ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಮಾತನಾಡಿ, ಕಾರ್ಯಾಗಾರವು ಸಮಾಜ ವಿಜ್ಞಾನದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನಾ ವಿಧಾನಶಾಸ್ತ್ರದ ಕೌಶಲ ಮತ್ತು ತಾತ್ತ್ವಿಕ ಚಿಂತನೆಗಳನ್ನು ವೃದ್ಧಿಸಲು ಅಮೂಲ್ಯ ವೇದಿಕೆಯಾಯಿತು ಎಂದರು.

ಡೀನ್‌ಗಳಾದ ಪ್ರೊ.ಎನ್.ಲಕ್ಷ್ಮೀ, ಪ್ರೊ.ಎಂ.ರಾಮನಾಥಂ ನಾಯ್ಡು, ಹಣಕಾಸು ಅಧಿಕಾರಿ ಪ್ರೊ.ಎಸ್. ನಿರಂಜನ್ ರಾಜ್, ಕಾರ್ಯಾಗಾರದ ನಿರ್ದೇಶಕಿ ಪ್ರೊ.ಆರ್.ಎಚ್.ಪವಿತ್ರಾ, ಸಮಾಜ ವಿಜ್ಞಾನ ನಿಕಾಯದ ಅಧ್ಯಕ್ಷ ಪ್ರೊ.ಶಂಕರನಾರಣಪ್ಪ ಹಾಗೂ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಎಂ.ಎಸ್. ರಮಾನಂದ ಇದ್ದರು.