ರಾಯಚೂರು
ಸಂವಿಧಾನಿಕವಾಗಿ ಮೀಸಲಾತಿ ಯಾರಿಗೆ ಸಿಗಬೇಕು ಅವರಿಗೆ ನೀಡಲಿ. ಬೇಡ ಜಂಗಮರು ಮೀಸಲಾತಿ ಕೇಳುವುದು ತಪ್ಪಲ್ಲ ಎಂದು ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಸೂರ್ಯಕಾಂತ ಕಾಮತ್ ವರದಿ ಪ್ರಕಾರ ಪಂಚಪೀಠ ವ್ಯಾಪ್ತಿಯ ಜಂಗಮರು ಬೇಡ ಜಂಗಮರಾಗಿದ್ದಾರೆ ಎಂದರು
ದೇವಸ್ಥಾನ ಅತಿಕ್ರಮಿಸಿ ಮಸೀದಿ ನಿರ್ಮಾಣ ಹಿಂದೂ,ಮುಸ್ಲಿಮರು ಕುಳಿತು ಚರ್ಚಿಸಿದರೆ ಸಮಸ್ಯೆ ಇತ್ಯರ್ಥವಾಗುತ್ತದೆ.
ಜಾತಿ ಸಂಘರ್ಷ ಹೆಚ್ಚಳಕ್ಕೆ ನಮ್ಮ ಧರ್ಮ ಶ್ರೇಷ್ಠ ಎನ್ನುವ ಮನೋಭಾವ ಕಾರಣ. ಸಹಿಷ್ಣತೆ ಬೆಳಿಸಿಕೊಂಡಾಗ ಸಾಮರಸ್ಯ ಸಾಧ್ಯವಾಗಲಿದೆ ಎಂದು ಹೇಳಿದರು.