ನ್ಯೂಸ್

ಸಂವಿಧಾನದ ಮೂಲ ಬಸವಣ್ಣನವರ ಮಂಟಪ ಆಗಿತ್ತು / ಸಮಾನತೆಯ ಪರಿಕಲ್ಪನೆ ಬಸವಣ್ಣನವರ ಮೂಲ ಉದ್ದೇಶ / ವಿ.ಆರ್.ಸುದರ್ಶನ್

ವಿಜಯವಾಣಿ ಸುದ್ದಿಜಾಲ ಕೋಲಾರ

ಸಂವಿಧಾನದ ಮೂಲ ಬಸವಣ್ಣನವರ ಮಂಟಪ ಆಗಿತ್ತು. ನಮ್ಮ ಸಮಾನತೆಯ ಪರಿಕಲ್ಪನೆ ಬಸವಣ್ಣನವರ ಮೂಲ ಉದ್ದೇಶವಾಗಿತ್ತು ಅದು ಸಂವಿಧಾನವಾಗಿ ಇಂದು ಜಾರಿಯಲ್ಲಿದ್ದು, ಇನ್ನೂ ಭೇದಭಾವಗಳು ಪೂರ್ಣ ಪ್ರಮಾಣದಲ್ಲಿ ಹೋಗಲಿಲ್ಲ ಎಂಬುದು ಗ್ರಾಮಗಳಲ್ಲಿ ಕಾಣಬಹುದಾಗಿದೆ ಎಂದು ವಿಧಾನಪರಿಷತ್ತು ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ತಿಳಿಸಿದರು.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಸೋಮವಾರ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಂಸ್ಕೃತಿಕವಾಗಿ, ಸಮಾನನತೆಯನ್ನಾಗಿಸಿ ಕರ್ನಾಟಕವನ್ನು ಕಟ್ಟುವುದು ಬಸವ ಸಂಸ್ಕೃತಿಯ ಉದ್ದೇಶವಾಗಿದೆ.

ಸಾಣೆಹಳ್ಳಿ ಮಠ ಸಮಾನತೆಯನ್ನು ಸಾರುವ ಕೇಂದ್ರವಾಗಿದೆ. ಬಸವಣ್ಣವರ ಆಲೋಚನೆಗಳನ್ನು ಚಲನ ರೂಪಗೊಳಿಸಬೇಕಾಗಿರುವುದು ಎಲ್ಲರ ಕರ್ತವ್ಯ ಎಂದರು.

ಬಸವಣ್ಙನ ವಚನಗಳ ಕುರಿತು ಅರಿವು ಉಂಟು ಮಾಡುವ ಜೊತೆಗೆ ಸಂವಿಧಾನ ಗಟ್ಟಿಗೊಳಿಸುವ ಕಡೆಗೂ ಗಮನ ಹರಿಸಬೇಕು. ಸಂವಿಧಾನದ ಹಕ್ಕು ಹಾಗೂ ಜವಾಬ್ದಾರಿ ಅರಿಯಬೇಕು. ಸರಿಯಾಗಿ ಜವಾಬ್ದಾರಿ ನಿಭಾಯಿಸದವರಿಗೆ ಹಕ್ಕು ಪಡೆಯುವ ನೈತಿಕತೆ ಇರುವುದಿಲ್ಲ ಎಂದರು.

ಬಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಮಾತನಾಡಿ, ಜಮೀನಿನಲ್ಲಿ ಏನು ಬೀಜ ಬಿತ್ತುತ್ತಿರೋ ಅದೇ ರೀತಿ ಬೆಳೆ ಬರುತ್ತದೆ. ಹಾಗೆಯೇ ಯುವಶಕ್ತಿ ಕೂಡ. ಯುವ ಶಕ್ತಿ ನಮ್ಮ ದೇಶದ ದೊಡ್ಡ ಶಕ್ತಿ. ನೈತಿಕತೆ, ಆಧ್ಯಾತ್ಮ ಬೆಳೆಸಬೇಕು ಎಂದು ತಿಳಿಸಿದರು.

ಬಸವಣ್ಣನ ಇಷ್ಟ ಲಿಂಗ ಮುಗಿದಗಲ-ಜಗದಗಲ. ಅಂತರAಗ ಸ್ವರೂಪಿ. ಅನುಭವ ಮಂಟಪದ ಮೂಲಕ ಜಾತಿ ಹೋಗಲಾಡಿಸಲು ಪ್ರಯತ್ನಿಸಿದರು. ಮೊದಲು ಪ್ರಜಾಧರ್ಮ ಕೊಟ್ಟವರು ಬಸವಣ್ಣ. ಸಮಾನ ಸಮಾಜವನ್ನು ಸ್ಥಾಪಿಸಲು ಪ್ರಯತ್ನಿಸಿದರು ಎಂದರು.

ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಜಾತಿ, ಮತ, ಧರ್ಮ, ಲಿಂಗ ತಾರತಮ್ಯ ಸಾವಿರಾರು ವರ್ಷಗಳಿಂದ ಬೇರೆಬೇರೆ ರೂಪಗಳಲ್ಲಿ ಭಾರತದಲ್ಲಿ ನೆಲೆನಿಂತಿದೆ. ಸ್ತ್ರೀ ಶೋಷಣೆ ನಿರಂತವಾಗಿ ಆಗಿದೆ. ಇಂದಿಗೂ ಮಹಿಳೆಯರ ಶೋಷಣೆ ನಡೆಯುತ್ತಿದೆ.ಶರಣರು ವಚನಗಳ ಮೂಲ ಇವೆಲ್ಲವನ್ನು ಹೋಗಲಾಡಿಸುವ ಮೊದಲ ದಿಕ್ಸೂಚಿ ಆಯ್ತು. ಬಸವಣ್ಣನವರು ಈ ಅರಿವನ್ನು ಮೂಡಿಸಿದ ಮಹಾನ್ ಚೇತನ. ಇತ್ತೀಚೆಗೆ ಕಾನೂನು ಬಲಗೊಂಡಿದೆ. ಹೆಣ್ಣುಮಕ್ಕಳು ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಇಂದು ಹೆಣ್ಣುಮಕ್ಕಳು ಬೇರೆ ಬೇರೆ ರೀತಿಯಲ್ಲಿ ವಿದ್ಯಾವಂತರಿAದ ಶೋಷಣೆ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಬಂಗಾರಪೇಟೆ ಸರ್ಕಲ್ಲಿನ ಡಾ. ಬಿಆರ್ ಅಂಬೇಡ್ಕರ್ ಪುತ್ತಳಿಗೆ ಮತ್ತು ಬಸವ ಸಂಸ್ಕೃತಿ ಅಭಿಯಾನದ ಬಸವಣ್ಣನವರಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯದ ನಿಖಿಲ್ ಅವರು ಚಾಲನೆ ನೀಡಿದರು.

ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಬಸವಣ್ಣನ ವಚನ ಸಂವಾದ ನಡೆಯಿತು. ಸಾಣೇಹಳ್ಳಿ ಕಲಾ ತಂಡ ವಚನ ಗಾಯನ ನಡೆಸಿಕೊಟ್ಟರು.

ಜಾನಪದ ಗಾಯಕ ಹಾಗೂ ಸಂಯೋಜಕ ಪಿಚ್ಚಳ್ಳಿ ಶ್ರೀನಿವಾಸ್, ಜೆ.ಜಿ.ನಾಗರಾಜ್, ಅಶೋಕ್‌ಲೋಣಿ, ವಿ.ಗೀತಾ, ಬಿ.ಸುರೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಗೋಪಾಲಗೌಡ, ಗಮನ ಸಂಸ್ಥೆಯ ಶಾಂತಮ್ಮ, ಅರಿವು ಭಾರತ ಸಂಸ್ಥೆಯ ಅರಿವು ಶಿವಪ್ಪ, ರೆವರೆಂಡ್ ಗಮಾಲಿಯ, ಡಿ.ಎಸ್.ಎಸ್. ಸಂಚಾಲಕ ಎಂ.ರವಿ, ವಿವಿಧ ಸಂಘಟನೆ ಮುಖಂಡರು, ವಿದ್ಯಾರ್ಥಿಗಳು ಇದ್ದರು.

ಚಿತ್ರ ೨೯ ಕೆ.ಎಲ್.ಆರ್. ೦೩ : ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಸೋಮವಾರ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಬಿ.ಎಲ್.ಶಂಕರ್, ಬಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು, ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಸ್ವಾಮೀಜಿ ಇದ್ದರು.