ಚಿತ್ರದುರ್ಗ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15ರಂದು ಆಯೋಜಿಸಿರುವ ದೇಶದ ಸಂವಿಧಾನದ ಪೀಠಿಕೆ ಓದುವ ಕಾರ‌್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸುವಂತೆ ಡಿಸಿ ಜೆಆರ್‌ಜೆ ದಿವ್ಯಾಪ್ರಭು ಜಿಲ್ಲೆ ಜನರಿಗೆ ಮನವಿ ಮಾಡಿದರು.
ಅಂದು ಬೆಳಗ್ಗೆ 10 ಗಂಟೆಗೆ ಪೀಠಿಕೆಯನ್ನು ಓದುವ ಮೂಲಕ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ. ಆ ದ್ದರಿಂದ ಅಂದು ಪ್ರತಿಯೊಬ್ಬರೂ ಸಂವಿಧಾನದ ಪೀಠಿಕೆಯನ್ನು ಓದುವ ಸಲುವಾಗಿ,ಸೆ.12ರ ಸಂಜೆ 6 ರೊಳಗೆ ಆನ್‌ಲೈನ್ ಮೂಲಕ ಹೆಸ ರು ನೋಂದಾಯಿಸ ಬೇಕೆಂದರು.
ಪೀಠಿಕೆಯ ವಾಚನದ ಬಳಿಕ ಪ್ರತಿಜ್ಞಾ ವಿಧಿ ಸ್ವೀಕರಿಸಬೇಕು. ಅದರ ಪೋಟೊವನ್ನು ಅಪ್‌ಲೋಡ್ ಮಾಡಬೇಕು.ಪೋಟೊ ಅಪ್ ಲೋಡ್ ಮಾಡಿದರವರಿಗೆ ಸೆ.15ರ ಬಳಿಕ ಆನ್‌ಲೈನ್ ಮೂಲಕವೇ ಪ್ರಮಾಣಪತ್ರ ದೊರೆಯಲಿದೆ. ಕಾರ‌್ಯಕ್ರಮದ ಯಶಸ್ಸಿಗೆ ಮುಖ್ಯಮಂತ್ರಿ,ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವರು ಸೂಕ್ತ ಸಲಹೆ,ಮಾರ್ಗದರ್ಶನ ನೀಡಿದ್ದಾರೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್ ಠಿಠಿ://ಠಿಛಿಟ್ಟಛಿಞಚ್ಝಿಛಿಡಿಚ್ಟ.ಜ್ಞಿನಲ್ಲಿ ಹೆಸರು,ವಿಳಾಸ,ಮೊಬೈಲ್ ಸಂ ಖ್ಯೆ,ಇ-ಮೇಲ್ ಇತರ ವಿವರಗಳೊಂದಿಗೆ ವೆಬ್‌ಸೈಟ್‌ನಲ್ಲಿರುವ 10 ವಿವಿಧ ವಿಭಾಗಗಳಡಿ ನೋಂದಣಿಗೆ ಅವಕಾಶವಿದೆ ಎಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರು ಸಭೆಯಲ್ಲಿ ಮಾತನಾಡಿ,ಸಂವಿಧಾನ,ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ ಗೆ ನೀಡಿರುವ ಜ್ಞಾನ ಹಾಗೂ ಸಮಾನತೆಯ ದೀವಿಗೆಯಾಗಿದೆ. ಇದರ ಓದು ಮಹತ್ವದ ಉದ್ದೇಶವನ್ನು ಹೊಂದಿದ್ದು,ರಾಷ್ಟ್ರದ ಮೂಲ ತತ್ವ ಗಳು,ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ.
ನ್ಯಾಯ,ಸ್ವಾತಂತ್ರ್ಯ,ಸಮಾನತೆ,ಭಾತೃತ್ವದ ಪರಿಕಲ್ಪನೆಗಳನ್ನು ಒಳಗೊಂಡಿದೆ.ಆ ದರ್ಶಗಳನ್ನು ನೆನಪಿಸುವ,ಆಮೂಲಕ ದೇಶಭಕ್ತಿ,ಬಾಂಧವ್ಯವನ್ನು ಬೆಳೆಸುತ್ತದೆ.ನಾಗರಿಕ ಹಕ್ಕು,ಜವಾಬ್ದಾರಿಗಳನ್ನು ಅರಿಯಲು ಸಹಕಾರಿಯಾಗಲಿದೆ. ರಾಷ್ಟ್ರದ ಏಕತೆ ಮತ್ತು ವೈವಿಧ್ಯತೆಯನ್ನು ಸಂವಿಧಾನದ ಪೀಠಿಕೆ ಹೇಳುತ್ತದೆ. ಹೀಗಾಗಿ ಶಾಲಾ ಪ್ರಾರ್ಥನೆ ಸಮಯದಲ್ಲಿ ಅದನ್ನು ಓದುವುದು,ವಿದ್ಯಾರ್ಥಿಗಳಲ್ಲಿ ಏಕತೆಯ ಪ್ರಜ್ಞೆಗೆ ಸಹಾಯ ಮಾಡುತ್ತದೆ. ಆದ್ದರಿಂದ ಈ ಕಾರ‌್ಯಕ್ರಮ ಯಶಸ್ವಿಗೊಳಿಸಲು ಎಲ್ಲ ಇಲಾಖೆಗಳ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸ ಬೇಕೆಂದರು.
ಕಾರ‌್ಯಕ್ರಮದ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಿ,ಅರೆ ಸರ್ಕಾರಿ ಕಚೇರಿಗಳು,ಸಾರ್ವಜನಿಕ ಸ್ವಾಯತ್ತ ಸಂಸ್ಥೆಗಳು,ನಿಗಮ ಮಂಡಳಿ ಹಾಗೂ ಸ್ಥಳೀಯ ಸಂಸ್ಥೆಯ ಕಚೇರಿಗಳಲ್ಲಿ ಸಂವಿಧಾನ ಪೀಠಿಕೆ ಭಾವಚಿತ್ರಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪ್ರದರ್ಶಿಸ ಬೇಕೆಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಹೇಳಿದರು.
ಕೈಗಾರಿಕೆ ಇಲಾಖೆ ಜಂಟಿನಿರ್ದೇಶಕ ಬಿ.ಆನಂದ್,ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್,ಕನ್ನಡ ಮತ್ತು ಸಂಸ್ಕೃತಿ ಇಲಾ ಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್,ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಸೋಮಶೇಖರ್,ಸಮಾಜ ಕಲ್ಯಾಣ ಇಲಾಖೆ ಉಪ ನಿ ರ್ದೇಶಕ ಜಗದೀಶ್ ಹೆಬ್ಬಳ್ಳಿ ಮತ್ತಿತರ ಇಲಾಖೆ ಅಧಿಕಾರಿಗಳಿದ್ದರು.
(ಸಿಟಿಡಿ 7 ಸಂವಿಧಾನ)
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15ರಂದು ಆಯೋಜಿಸಿರುವ ದೇಶದ ಸಂವಿಧಾನದ ಪೀಠಿಕೆ ಓದುವ ಕಾರ‌್ಯದ ಪೂರ್ವಭಾವಿಸಭೆ ಚಿತ್ರದುರ್ಗ ಡಿಸಿ ಕಚೇರಿಯಲ್ಲಿ ಗುರುವಾರ ನಡೆಯಿತು. ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು,ಎಡಿಸಿ ಬಿ. ಟಿ.ಕುಮಾರಸ್ವಾಮಿ,ಆಹಾರ ಇಲಾಖೆ ಜೆಡಿ ಮಧುಸೂದನ್,ಕೈಗಾರಿಕೆ ಇಲಾಖೆ ಜೆಡಿ ಬಿ.ಆನಂದ್,ಕುಡಾ ಆಯುಕ್ತ ಸೋಮಶೇಖರ್ ಇತರರು ಇದ್ದರು.