ಬಾಳೆಹೊನ್ನೂರಿನ ಜೆಸಿಐ ಸಂಸ್ಥೆ ಆಯೋಜಿಸಿದ್ದ ಮಕರ ಸಂಕ್ರಾಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ಇಬ್ರಾಹಿಂ ಶಾಫಿ ಸದಸ್ಯರಿಗೆ ಎಳ್ಳು ಬೆಲ್ಲ ಹಂಚಿದರು. ವಿ.ಅಶೋಕ್, ಶಶಿಧರ್, ಚೈತನ್ಯ ವೆಂಕಿ, ಸತೀಶ್, ಸುಧಾಕರ್ ಇದ್ದರು.  
ನ್ಯೂಸ್

ಸಂಪ್ರದಾಯದಲ್ಲಿ ವಿಶೇಷ ಸ್ಥಾನ

ಬಾಳೆಹೊನ್ನೂರು: ಭಾರತೀಯ ಸಂಸ್ಕೃತಿ, ಸಂಪ್ರದಾಯದ ಹಬ್ಬಗಳಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಸ್ಥಾನವಿದ್ದು, ಎಲ್ಲರಿಗೂ ಎಳ್ಳು ಬೆಲ್ಲ ಹಂಚಿ ಆಚರಿಸುವ ಪದ್ಧತಿ ನಡೆದುಕೊಂಡು ಬಂದಿದೆ ಎಂದು ಜೆಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಹೇಳಿದರು.

ಪಟ್ಟಣದ ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಮಂಗಳವಾರ ಆಯೋಜಿಸಿದ್ದ ಮಕರ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಎಳ್ಳುಬೆಲ್ಲ ಬೀರಿ ಮಾತನಾಡಿದರು.

ವೈಜ್ಞಾನಿಕ ಹಿನ್ನೆಲೆಯುಳ್ಳ ಎಳ್ಳು ಬೀರುವ ಕಾರ್ಯಕ್ರಮ ರಾಷ್ಟ್ರಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಎಳ್ಳು ಬೆಲ್ಲ ಸೇವನೆಯಿಂದ ಆರೋಗ್ಯಕ್ಕೆ ಶಕ್ತಿ ಬರುತ್ತದೆ. ವೈವಿಧ್ಯತೆಯಲ್ಲಿ ಏಕತೆ ಕಂಡ ಭಾರತದಲ್ಲಿ ಅವರವರ ಧರ್ಮಕ್ಕೆ ಅನುಗುಣವಾಗಿ ಸಂಪ್ರದಾಯಗಳನ್ನು ನಡೆಸಿಕೊಂಡು ಬರುತ್ತಿದ್ದು, ಎಳ್ಳು ಬೆಲ್ಲ ಬೀರುವ ಕಾರ್ಯಕ್ರಮದಲ್ಲಿ ಜಾತಿ, ಮತ ಭೇದವಿಲ್ಲದೆ ಜೇಸಿ ಸಂಸ್ಥೆಯ ಸದಸ್ಯರು ಭಾಗವಹಿಸಿ ಸಾಮರಸ್ಯ ಸಾರಿದ್ದಾರೆ ಎಂದರು.

ಕಾರ್ಯದರ್ಶಿ ವಿ.ಅಶೋಕ್, ಜೆಸಿಐ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಪೂರ್ವಾಧ್ಯಕ್ಷ ಚೈತನ್ಯ ವೆಂಕಿ, ಸತೀಶ್ ಅರಳೀಕೊಪ್ಪ, ಸುಧಾಕರ್, ಸುರೇಂದ್ರ ಮಾಸ್ತರ್, ಎ.ಆರ್.ಸುರೇಂದ್ರ, ಬಿ.ಎಚ್.ಮನುಕುಮಾರ್, ಎಸ್.ಎಲ್.ಚೇತನ್, ರಿಚರ್ಡ್ ಮಥಾಯಿಸ್, ಸದಸ್ಯರಾದ ಕೆ.ಪ್ರಶಾಂತ್‌ಕುಮಾರ್, ವಿ.ರೋಹಿತ್, ಎಂ.ಸಿ.ಅಭಿಷೇಕ್, ಆರ್ಯನ್ ತೇಜಸ್ ಮತ್ತಿತರರಿದ್ದರು.