ನಿಪ್ಪಾಣಿ: ತಾಲೂಕಿನ ವಿವಿಧೆಡೆ ವಿದ್ಯುತ್ ಅವಡದಿಂದ ಸಾವನ್ನಪ್ಪಿದವರ ಕುಟುಂಬ ಸದಸ್ಯರಿಗೆ ಹೆಸ್ಕಾಂನಿಂದ ಮಂಜೂರಾದ 5 ಲಕ್ಷ ರೂ. ಚೆಕ್ನ್ನು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಗುರುವಾರ ವಿತರಿಸಿದರು.
ಕೃಷಿ ಕಾರ್ಯ ಮಾಡುತ್ತಿರುವಾಗ ವಿದ್ಯುತ್ ತಂತಿ ಸ್ಪರ್ಶದಿಂದ ಮೃತಪಟ್ಟ ತಾಲೂಕಿನ ಬೇಡಕಿಹಾಳ ಗ್ರಾಮದ ರೈತ ಹೇಮಂತ ಮೋರೆ ಅವರ ಕುಟುಂಬಕ್ಕೆ ಪರಿಹಾರ ಧನದ ಚೆಕ್ ವಿತರಿಸಿದರು.
ಡೋಣೆವಾಡಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ವಿದ್ಯುತ್ ತಗುಲಿ ಸಾವನ್ನಪ್ಪಿದ 9 ವರ್ಷದ ಬಾಲಕಿ ಅನುಷ್ಕಾ ಭೆಂಡೆ ಅವರ ಕುಟುಂಬದ ಸದಸ್ಯರಿಗೆ ಚೆಕ್ ವಿತರಿಸಿ ಮಾತನಾಡಿ, ಮುಂಬರುವ ದಿನಗಳಲ್ಲಿ ಶಿಕ್ಷಣ ಇಲಾಖೆಯಿಂದ 1 ಲಕ್ಷ ರೂ. ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ.
ಅಪಘಾತ, ವಿದ್ಯುತ್ ಸ್ಪರ್ಶ, ಪ್ರವಾಹ, ಮನೆ ಕುಸಿತ, ಮುಂತಾದ ಅವಡಗಳಿಂದ ಮೃತಪಟ್ಟವರ ಕುಟುಂಬಕ್ಕೆ ಸರ್ಕಾರದಿಂದ ಆರ್ಥಿಕ ಸಹಾಯ ನೀಡಲು ಸದಾ ಸಿದ್ಧ ಎಂದರು. ಚಿಕ್ಕೋಡಿ ಹೆಸ್ಕಾಂ ಎಸ್ಇ ವೆಂಕಟೇಶ, ಸದಲಗಾ ವಿಭಾಗದ ಇಂಜಿನಿಯರ್ ಸಂಜಯ ಸುಖಸಾರೆ, ಸಂತಾನ ಪಿರೇರಾ, ರೇವತಿ ಮಠದ, ಪವನ ಪಾಟೀಲ, ಆರ್. ಜಿ. ಡೋಮನೆ, ಸುನೀಲ ನಾರೆ, ವಿಲಾಸ ಥರಕಾರ, ಎಂ.ಬಿ. ಪಾಟೀಲ, ತಾತ್ಯಾಸಾಹೇಬ ಕೇಸ್ತೆ, ಬಾಳಾಸಾಹೇಬ ಶಿಂಧೆ, ಮಿಥುನ ಪಾಟೀಲ, ಅಲಗೊಂಡ ಪಾಟೀಲ ಇದ್ದರು.