ಚಾಮರಾಜನಗರ ತಾಲೂಕಿನ ಮಾದಲವಾಡಿ ಗ್ರಾಮಕ್ಕೆ ಶನಿವಾರ ಶಾಸಕ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು. 
ನ್ಯೂಸ್

ಸಂತ್ರಸ್ತರಿಗೆ ತ್ವರಿತಗತಿಯಲ್ಲಿ ಮನೆ ನಿರ್ಮಿಸಿಕೊಡಿ

ಚಾಮರಾಜನಗರ: ಮಳೆಯಿಂದ ಮನೆಗಳ ಕಳೆದುಕೊಂಡವರಿಗೆ ತ್ವರಿತಗತಿಯಲ್ಲಿ ಮನೆ ನಿರ್ಮಿಸಿಕೊಡಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಸೂಚಿಸಿದರು.


ತಾಲೂಕಿನ ಅರಕಲವಾಡಿ ಹಾಗೂ ಯಣಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಲವಾಡಿ, ಕಿಲಗೆರೆ, ವಡ್ಡರಳ್ಳಿ, ಯಣಗುಂಬ ಮಾದಲವಾಡಿ ಗ್ರಾಮಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಳೆಯಿಂದ ಹಾನಿಯಾದ ಮನೆಗಳು, ಗೋಡೆ ಕುಸಿತ ಮನೆಗಳನ್ನು ಪರಿಶೀಲಿಸಿ ಮಾತನಾಡಿದರು.


ಮಳೆಯಿಂದ ಕೆಲ ಮನೆಗಳು ಬಿರುಕು ಬಿಟ್ಟಿವೆ, ಕೆಲವು ನೆಲಕ್ಕೆ ಕುಸಿದಿವೆ. ಅಧಿಕಾರಿಗಳು ತ್ವರಿತಗತಿಯಲ್ಲಿ ಮನೆ ನಿರ್ಮಿಸಿಕೊಡುವುದರ ಜತೆಗೆ ದನದ ಕೊಟ್ಟಿಗೆಗಳ ನಿರ್ಮಾಣಕ್ಕೂ ಆದ್ಯತೆ ನೀಡಬೇಕು ಎಂದು ಸ್ಥಳದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಿದರು.


ಇದೇ ವೇಳೆ ಮಾದಲವಾಡಿ ಗ್ರಾಮದಲ್ಲಿನ ಜಮೀನೊಂದಕ್ಕೆ ಮಳೆ ನೀರು ನುಗ್ಗಿರುವುದನ್ನು ಪರಿಶೀಲಿಸಿದರು. ತಮ್ಮ ಗ್ರಾಮದ ಮುಖ್ಯರಸ್ತೆಯಲ್ಲಿ ಚರಂಡಿ ಕೊಳಚೆ ನೀರು ಹರಿಯುತ್ತಿದ್ದು, ಇದು ಜಮೀನಿಗೆ ನುಗ್ಗುತ್ತಿದೆ. ಕೂಡಲೇ ಮಳೆ ನೀರು ಚರಂಡಿ ನಿರ್ಮಿಸಿಕೊಡುವಂತೆ ಯಣಗುಂಬ ಗ್ರಾಮಸ್ಥರು ಶಾಸಕರಲ್ಲಿ ಮನವಿ ಮಾಡಿದರು.