ನ್ಯೂಸ್

ಸಂಘಟಿತ ಹೋರಾಟ ಅನಿವಾರ‌್ಯ

ಚಿತ್ರದುರ್ಗ: ಪ್ರಸ್ತುತ ಸಮಾಜದಲ್ಲಿ ಮಹಿಳೆಯರ ಸುರಕ್ಷತೆ ಸವಾಲುಗಳನ್ನು ಎದುರಿಸಲು ಸಂಘಟಿತ ಹೋರಾಟ ಅನಿವಾರ‌್ಯವಾಗಿದೆ. ಮಹಿಳೆಯರ ಮತ್ತು ಜೀವಿಸುವ ಹಕ್ಕಿಗಾಗಿ ಧ್ವನಿ ಎತ್ತ ಬೇಕಿದೆ ಎಂದು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್‌ಎಸ್)ರಾಜ್ಯಉಪಾಧ್ಯಕ್ಷೆ ಡಾ. ಸೀಮಾ ದೇಶಪಾಂಡೆ ಹೇಳಿದರು.

ಎಐಎಂಎಸ್‌ಎಸ್ ಜಿಲ್ಲಾ ಘಟಕದಿಂದ ನಗರದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ,ಮಹಿಳೆಯರ ಮತ್ತು ಜೀವಿಸುವ ಹಕ್ಕಿಗಾಗಿ ಧ್ವನಿ ಎತ್ತಿ;ಆರೋಗ್ಯ ಶಿಕ್ಷಣ ಸುರಕ್ಷತೆ ಮತ್ತು ಆ ರ್ಥಿಕ ಭದ್ರತೆ ಖಾತ್ರಿಪಡಿಸಿ’ಎಂಬ ಘೋಷ ವಾಕ್ಯದೊಂದಿಗೆ ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ.

ಮಹಿಳೆಯರ ಪರ ಹೋರಾಟ ನಡೆಸಿದ ರಾಜಾರಾಮ್ ಮೋಹನ್‌ರಾಯ್,ಈಶ್ವರಚಂದ್ರ ವಿದ್ಯಾಸಾಗರ್,ಜ್ಯೋತಿಬಾ ಫುಲೆ ಹಾಗೂ ಮಹಿಳಾ ಸಾಧಕಯರಾದ ಮೇರಿ ಕ್ಯೂರಿ,ಸಾವಿತ್ರಿಬಾಯಿ ಫುಲೆ,ಡಾ.ಆನಂದಬಾಯಿ ಜೋಶಿ ಮೊದಲಾದ ಮಹನೀಯರ ಜೀವನಾದರ್ಶಗಳು ಹೋ ರಾಟಕ್ಕೆ ಸ್ಫೂರ್ತಿಯಾಗ ಬೇಕಿದೆ.

ವಯೋಮಿತಿ ಇಲ್ಲದೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು,ಹೆಣ್ಣು ಭ್ರೂಣ ಹತ್ಯೆ,ವರದಕ್ಷಿಣೆ ಕಿರುಕುಳ,ಗುಂಪು ಅತ್ಯಾಚಾರಗಳು ಮತ್ತು ಕೊಲೆ ಇಂಥ ಹೀನಾಯ ಕೃತ್ಯಗಳು ದಿನೆ ದಿನೇ ಹೆಚ್ಚುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು,ಈ ಪಿಡುಗುಗಳನ್ನು ಕಿತ್ತೊಗೆಯಲು ಪ್ರಜಾತಾ ಂತ್ರಿಕ ಮೌಲ್ಯಗಳನ್ನು ಬೆಳೆಸಬೇಕು. ಅದಕ್ಕಾಗಿ ಜನತಾಂತ್ರಿಕ ಆಂದೋಲನದ ಅವಶ್ಯಕತೆ ಇದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಲ್.ಈಶ್ವರಪ್ಪ ಮಾತನಾಡಿ,ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ. ಸಮಾಜದ ಏಳಿಗೆಗೆ ಮಹಿಳೆಯರ ಕೊಡುಗೆ ಕೂಡ ಅ ಪಾರವಾಗಿದೆ ಎಂದರು.

ಉಪನ್ಯಾಸಕಿ ಡಿ.ಸುಜಾತಾ,ಪ್ರೊ.ಎಂ.ಎಸ್.ಪರಮೇಶ್ವರ್,ಬಿ.ವೈ.ಶ್ವೇತಾ,ಪ್ರೊ.ಶಿವಕುಮಾರ್ ಮಾತನಾಡಿದರು.ಲೇಖಕಿ ಶರೀಫಾಬಿ ಅವರನ್ನು ಸ ನ್ಮಾನಿಸಲಾಯಿತು. ಎಐಎಂಎಸ್‌ಎಸ್ ಜಿಲ್ಲಾ ಘಟಕದ ಸಹಸಂಚಾಲಕಿ ಕುಮುದಾ ಮತ್ತಿತರರು ಇದ್ದರು.