ಸಹಕಾರ ಭಾರತಿ ಸಂಸ್ಥೆಯು ಪ್ರಜಾಪ್ರಭುತ್ವ ಆಶಯಗಳನ್ನು ಅನುಷ್ಠಾನಗೊಳಿಸಿ ಅನುದಾನ, ಹೂಡಿಕೆ ಸಿಗುವಂತೆ ಮಾಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಭುದೇವ್ ಆರ್.ಮಾಗಸೂರು ಹೇಳಿದರು.
ಸಂಸ್ಥೆಯಲ್ಲಿ ಸಹಕಾರ ಭಾರತಿ ಸಂಸ್ಥೆಯು ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ್ದ ಸಹಕಾರಿಗಳಿಗೆ ಆಯೋಜಿಸಿದ್ದ ಅಭ್ಯಾಸ ವರ್ಗ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯು ಜಿಲ್ಲಾವಾರು, ತಾಲೂಕು, ಕ್ಲಸ್ಟರ್‌ವಾರು ಅಭ್ಯಾಸ ವರ್ಗ ಕಾರ್ಯಾಗಾರವನ್ನು ಆಯೋಜಿಸುತ್ತಾ ಬಂದಿದ್ದು, ಸಹಕಾರಿಗಳ ವ್ಯಕ್ತಿತ್ವ ರೂಪಿಸುತ್ತಿದೆ. ಸಹಕಾರ ಸಂಘಗಳನ್ನು ಬಲಪಡಿಸುತ್ತಿದೆ ಎಂದರು.
2 ವರ್ಷದ ಹಿಂದೆ ರಾಷ್ಟ್ರೀಯ ರಫ್ತು ಮಂಡಳಿ ರಚಿಸಲಾಗಿದ್ದು, ಕೃಷಿ, ಗೃಹ ಕೈಗಾರಿಕೆಗಳು ಹಾಗೂ ಸಣ್ಣ ಕೈಗಾರಿಕೆಗಳು, ಆಹಾರೋದ್ಯಮಗಳ ಉತ್ಪನ್ನಗಳನ್ನು ರಫ್ತು ಮಾಡಲು ಸಹಕಾರ ನೀಡುತ್ತಿದೆ. ಸಹಕಾರ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಹಕಾರ ಭಾರತಿ ಕೆಲಸ ಮಾಡುತ್ತಿದೆ. ಅವರನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗುತ್ತಿದೆ ಎಂದರು.
ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಚ್.ವಿ.ರಾಜೀವ್ ಮಾತನಾಡಿದರು.
ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಚ್.ಕೃಷ್ಣಾರೆಡ್ಡಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್, ಸಂಘಟನಾ ಕಾರ್ಯದರ್ಶಿ ಬಿ.ಮಹದೇವಸ್ವಾಮಿ, ಮಹಿಳಾ ಸಹಪ್ರಮುಖ್ ಹೇಮಾ ಸಂಗಪ್ಪ, ರಾಜ್ಯ ಕಾರ್ಯಕಾರಿಣಿ ಸದಸ್ಯ ಎಸ್.ಆರ್.ನಾರಾಯಣ ರಾವ್, ಜಿಲ್ಲಾ ಅಧ್ಯಕ್ಷ ವಿ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಸ್.ಸಿ.ಭಗೀರಥ, ಇ.ಕೆ.ರಾಜನ್‌ಬಾಬು ಇದ್ದರು.